Cowin Register: ಕೊರೊನಾ ಲಸಿಕೆ‌ 'Co-Win ' ರಿಜಿಸ್ಟ್ರೇಷನ್‌ʼಗೆ ಆಧಾರ್ ಕಡ್ಡಾಯವಲ್ಲ..!

ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಪ್ಲಿಕೇಶನ್‌ʼನಲ್ಲಿ ನೋಂದಣಿ ಮಾಡಲು ಆಧಾರ್ ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇಲ್ಲ, ಕೋ-ವಿನ್ ಪೋರ್ಟಲ್ʼನಲ್ಲಿ ನೋಂದಣಿಗೆ ಆಧಾರ್ ಕಡ್ಡಾಯವಲ್ಲ'

Last Updated : Feb 6, 2021, 12:52 PM IST
  • ಕೋವಿಡ್‌- 19 ಲಸಿಕೆ ಅಪ್ಲಿಕೇಶನ್‌ ನೋಂದಾಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ
  • Co-WIN ಪೋರ್ಟಲ್ ಬಗ್ಗೆ ವಿವರಗಳನ್ನ ಒದಗಿಸಿರುವ ಅವರು, ಇದನ್ನ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ, ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ (ಯುಎನ್ ಡಿಪಿ), ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
  • ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಪ್ಲಿಕೇಶನ್‌ʼನಲ್ಲಿ ನೋಂದಣಿ ಮಾಡಲು ಆಧಾರ್ ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇಲ್ಲ, ಕೋ-ವಿನ್ ಪೋರ್ಟಲ್ʼನಲ್ಲಿ ನೋಂದಣಿಗೆ ಆಧಾರ್ ಕಡ್ಡಾಯವಲ್ಲ'
Cowin Register: ಕೊರೊನಾ ಲಸಿಕೆ‌ 'Co-Win ' ರಿಜಿಸ್ಟ್ರೇಷನ್‌ʼಗೆ ಆಧಾರ್ ಕಡ್ಡಾಯವಲ್ಲ..! title=

ನವದೆಹಲಿ: ಕೋವಿಡ್‌- 19 ಲಸಿಕೆ ಅಪ್ಲಿಕೇಶನ್‌ ನೋಂದಾಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. Co-WIN ಪೋರ್ಟಲ್ ಬಗ್ಗೆ ವಿವರಗಳನ್ನ ಒದಗಿಸಿರುವ ಅವರು, ಇದನ್ನ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ, ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ (ಯುಎನ್ ಡಿಪಿ), ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಕೋ-ವಿನ್ Co-WIN ಪೋರ್ಟಲ್ ಬಗ್ಗೆ ವಿವರಗಳನ್ನ ಒದಗಿಸಿರುವ ಅವರು, ಇದನ್ನ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ, ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ (UNDP), ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಪ್ಲಿಕೇಶನ್‌ʼನಲ್ಲಿ ನೋಂದಣಿ ಮಾಡಲು ಆಧಾರ್ ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇಲ್ಲ, ಕೋ-ವಿನ್ ಪೋರ್ಟಲ್ʼನಲ್ಲಿ ನೋಂದಣಿಗೆ ಆಧಾರ್ ಕಡ್ಡಾಯವಲ್ಲ' ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

7th Pay Commission: ಸರ್ಕಾರಿ ನೌಕರರ ವೇತನ ವೃದ್ಧಿ, ಶೀಘ್ರವೇ ಘೋಷಣೆ ಸಾಧ್ಯತೆ

ಅಪ್ಲಿಕೇಶನ್ʼನ್ನ ಅಭಿವೃದ್ಧಿಪಡಿಸಲು ಯಾವುದೇ ಗೌಪ್ಯತೆ ಪರಿಣಾಮ ಮೌಲ್ಯಮಾಪನಗಳನ್ನು ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಸಚಿವರು, 'ಹೌದು, ಗೌಪ್ಯತೆ ಪರಿಣಾಮ ಮೌಲ್ಯಮಾಪನಗಳನ್ನ ಕೋ-ವಿನ್ ಪೋರ್ಟಲ್‌ ಗಾಗಿ ನಡೆಸಲಾಯಿತು. ಡೇಟಾ ಸುರಕ್ಷತೆಗಾಗಿ, ಅತ್ಯಂತ ಸುರಕ್ಷಿತ ಕೀಲಿಯನ್ನ ಬಳಸಿ ಡೇಟಾವನ್ನ ಗೂಢಲಿಪೀಕರಿಸಲಾಗಿದೆ ಎಂದರು.

Farmers Protest: ಈ 3 ರಾಜ್ಯಗಳನ್ನು ಹೊರತುಪಡಿಸಿ ಇಂದು ದೇಶಾದ್ಯಂತ ಹೆದ್ದಾರಿ ತಡೆ

AWS ಸರ್ವರ್ʼನಲ್ಲಿ ಡೇಟಾಬೇಸ್ʼಗೆ ಯಾವುದೇ ಅನಧಿಕೃತ ಪ್ರವೇಶವನ್ನ ಅನುಮತಿಸುವುದಿಲ್ಲ ಮತ್ತು ಸಂಬಂಧಿತ ಡೇಟಾಬೇಸ್ ಸೇವೆಗೆ (ದುರುದ್ದೇಶಪೂರಿತ ಚಟುವಟಿಕೆಗಳ ಅಪಾಯವನ್ನು ಕಡಿಮೆ ಮಾಡಲು) ನಿರ್ಬಂಧಿಸಲಾಗಿದೆ.' ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್ ಡಿಎಚ್ ಎಂ) ನಲ್ಲಿ ಹೇಳಿದಂತೆ ಕೋ-ವಿನ್ ಅಪ್ಲಿಕೇಶನ್ ಗೌಪ್ಯತೆ ನೀತಿಯನ್ನ ಅನುಸರಿಸುತ್ತೆ ಎಂದರು.

Cobra Commando Battalionನಲ್ಲಿ ಮಹಿಳೆಯರ ಎಂಟ್ರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News