ನವದೆಹಲಿ : ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧೀನ ಕಾರ್ಯದರ್ಶಿ ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದ ಸರ್ಕಾರಿ ನೌಕರರು ಜೂ. 16ರಿಂದ 30ರವರೆಗೆ ಕೆಲಸದ ದಿನಗಳಲ್ಲಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ. ಅಧೀನ ಕಾರ್ಯದರ್ಶಿಗಳಿಗಿಂತ ಕೆಳಗಿನ ಮಟ್ಟದ ಶೇ. 50ರಷ್ಟು ಸರ್ಕಾರಿ ಸೇವಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.


COMMERCIAL BREAK
SCROLL TO CONTINUE READING

ಇನ್ನು ಅಂಗವಿಕಲ ಮತ್ತು ಗರ್ಭಿಣಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಾರೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್(Jitendra Singh) ಅವರು ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಫ್ಲೆಕ್ಸಿ (ಹೊಂದಿಕೊಳ್ಳುವ) ಹಾಜರಾತಿ ಆಯ್ಕೆಯನ್ನ ಜೂನ್ 15ರವರೆಗೆ ಮತ್ತಷ್ಟು ವಿಸ್ತರಿಸಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ : Whatsapp Number change : ಹೀಗೆ ಮಾಡಿದರೆ ಸುಲಭವಾಗಿ ಬದಲಾಯಿಸಬಹುದು ವಾಟ್ಸಾಪ್ ನಂಬರ್


ಇದು ಕಚೇರಿಗಳಲ್ಲಿ ಫ್ಲೆಕ್ಸಿ ಹಾಜರಾತಿ(Employees Office Attendance)ಯನ್ನ ಒದಗಿಸುವ ಹಿಂದಿನ ಆದೇಶದ ಮುಂದುವರಿಕೆಯಾಗಿತ್ತು. ಅದಕ್ಕೂ ಮೊದಲು, ಕಚೇರಿಗಳು ಶೇ. 50ರಷ್ಟು ಹಾಜರಾತಿಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು.


ಇದನ್ನೂ ಓದಿ : Petrol price today : ಜೇಬು ಸುಡುತ್ತಿದೆ ಪೆಟ್ರೋಲ್ ಮತ್ತು ಡೀಸೆಲ್..! ಕರ್ನಾಟಕದಲ್ಲಿ ಇವತ್ತಿನ ಧಾರಣೆ ಏನು.?


ಏಪ್ರಿಲ್ ನಲ್ಲಿ ಕೇಂದ್ರ ಗೃಹ ಸಚಿವಾಲಯ(Union Home Ministry)ವು ಕೆಲಸದಲ್ಲಿ ಶೇ. 50ರಷ್ಟು ಹಾಜರಾತಿಗೆ ಆದೇಶಿಸಿತ್ತು ಮತ್ತು ಅದರ ಕಚೇರಿಗಳಲ್ಲಿ ಸಮಯವನ್ನ ಪರಿಶೀಲಿಸಿತ್ತು. ಅಧೀನ ಕಾರ್ಯದರ್ಶಿಯ ಮಟ್ಟದವರೆಗಿನ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಹುದು ಮತ್ತು ಶೇ. 50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕಾಗಿದೆ ಎಂದು ಹೇಳಿದೆ.


ಇದನ್ನೂ ಓದಿ : Jio Plan: ರಿಲಯನ್ಸ್ ಜಿಯೋದ 5 ಹೊಸ ಉತ್ತಮ ಯೋಜನೆಗಳು, ನಿಮಗೆ ಬೇಕಾದಷ್ಟು Data ಬಳಸಿ


ಅಧೀನ ಕಾರ್ಯದರ್ಶಿ ಅಥವಾ ತತ್ಸಮಾನ ಮತ್ತು ಅದಕ್ಕಿಂತ ಕಡಿಮೆ ಮಟ್ಟದ ಅಧಿಕಾರಿಗಳಿಗೆ ಮನೆಯಿಂದ ಕೆಲಸ(Work From Home) ಮಾಡಲು ಅವಕಾಶ ನೀಡಬೇಕು ಮತ್ತು ಕಚೇರಿಯಲ್ಲಿ ಅವರ ದೈಹಿಕ ಹಾಜರಾತಿಯನ್ನ ನಿಜವಾದ ಒಟ್ಟಾರೆ ಬಲದ ಶೇಕಡಾ 50ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಅದು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.