Petrol price today : ಜೇಬು ಸುಡುತ್ತಿದೆ ಪೆಟ್ರೋಲ್ ಮತ್ತು ಡೀಸೆಲ್..! ಕರ್ನಾಟಕದಲ್ಲಿ ಇವತ್ತಿನ ಧಾರಣೆ ಏನು.?

Petrol price today :ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆ ಏರಿಕೆ ದಾಖಲಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸುವ ದಿನಗಳು ಬಹು ದೂರ ಇಲ್ಲ. 

Written by - Ranjitha R K | Last Updated : Jun 15, 2021, 09:04 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಏರಿಕೆ ದಾಖಲಿಸುತ್ತಿದೆ.
  • ಪೆಟ್ರೋಲ್ ನೂರು ರೂಪಾಯಿ ಸನಿಹದಲ್ಲಿದ್ದು, ಯಾವುದೇಕ್ಷಣದಲ್ಲಿ ದಾಖಲೆ ಸೃಷ್ಟಿಸಲಿದೆ.
  • 15 ಜಿಲ್ಲೆಗಳಲ್ಲಿ ಪೆಟ್ರೋಲ್ ನೂರರ ಸನಿಹದಲ್ಲಿದೆ.
Petrol price today : ಜೇಬು ಸುಡುತ್ತಿದೆ ಪೆಟ್ರೋಲ್ ಮತ್ತು ಡೀಸೆಲ್..! ಕರ್ನಾಟಕದಲ್ಲಿ ಇವತ್ತಿನ ಧಾರಣೆ ಏನು.? title=
Petrol price today (file photo zee news)

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ದರ (petrol diesel) ದಾಖಲೆ ಏರಿಕೆ ದಾಖಲಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸುವ ದಿನಗಳು ಬಹು ದೂರ ಇಲ್ಲ.  ರಾಜ್ಯದಲ್ಲಿ ಪೆಟ್ರೋಲ್ ದರ ಶತಕಕ್ಕೆ ತೀರಾ ಸನಿಹದಲ್ಲಿದ್ದು, ಯಾವುದೇ ಹೊತ್ತು ನೂರರ ಗಡಿ ದಾಟಲಿದೆ.

ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಧಾರಣೆ ಎಷ್ಟು.?
ಸತತ ಬೆಲೆ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ (petrol rate in Bengaluru) ಪ್ರತಿ ಲೀಟರ್ ಪೆಟ್ರೋಲ್ 99.63 ರೂಪಾಯಿ ಇಂದು ದಾಖಲಾಗಿದೆ. ಅದೇ ರೀತಿ ಡೀಸೆಲ್ ಬೆಲೆ 92.21 ರೂಪಾಯಿ ದಾಖಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರಿಗೆ 99.19 ರೂಪಾಯಿ (Petrol price in Mysore) ದಾಖಲಾಗಿದೆ. ನಿನ್ನೆ 99.47 ರೂಪಾಯಿ ಇತ್ತು. ಡೀಸೆಲ್ ದರ 92. 13 ರೂಪಾಯಿ ಪ್ರತಿ ಲೀಟರ್ ಆಗಿದೆ. 

ಇದನ್ನೂ ಓದಿ : Drone Medicine Delivery: ನಿಮ್ಮ ಮನೆ ಬಾಗಿಲಿದೆ ಔಷಧಿ ತಲುಪಿಸಲಿದೆ ಡ್ರೋಣ್!

ರಾಜ್ಯದ ಪ್ರಮುಖ ನಗರಗಳ ಧಾರಣೆ ಹೀಗಿದೆ.
ಬೆಳಗಾವಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 99.99 ಮತ್ತು ಡೀಸೆಲ್ 92.89 ರೂಪಾಯಿ ನಿಗದಿಯಾಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ 98.86 ರೂಪಾಯಿ, (Petrol price in Mangalore) ಡೀಸೆಲ್ 91.78ಯಲ್ಲಿ ಮಾರಾಟವಾಗುತ್ತಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ 99.99 ಡೀಸೆಲ್ 93.83 ರೂಪಾಯಿ. ಉಡುಪಿಯಲ್ಲಿ ಪೆಟ್ರೋಲ್ 99.49 ಮತ್ತು  ಡೀಸೆಲ್ 92 .36 ರೂಪಾಯಿ. ಹುಬ್ಬಳ್ಳಿ ಧಾರವಾಡ (Hubli- Dharwad) ಪೆಟ್ರೋಲ್ 99.55 ರೂಪಾಯಿ ಮತ್ತು  ಡೀಸೆಲ್ 92 .48 ರೂಪಾಯಿ ಪ್ರತಿ ಲೀಟರ್ ಮಾರಾಟವಾಗುತ್ತಿದೆ. ಗುಲ್ಬರ್ಗಾದಲ್ಲಿ  ಪೆಟ್ರೋಲ್ 99. 38 ಮತ್ತು ಡೀಸೆಲ್ 92.32 ರೂಪಾಯಿ/ಲೀಟರ್ ಆಗಿದೆ. ದಾವಣಗೆರೆ ಪ್ರತಿ ಲೀಟರ್ ಪೆಟ್ರೋಲ್ 99.99 ರೂಪಾಯಿ ಮತ್ತು  ಡೀಸೆಲ್ 93.71 ರೂಪಾಯಿ. 

15 ಜಿಲ್ಲೆಗಳಲ್ಲಿ ಪ್ರತಿಲೀಟರ್ ಪೆಟ್ರೋಲ್ ಬೆಲೆ 99.99 :
ತುಮಕೂರು, ಉತ್ತರ ಕನ್ನಡ, ಶಿವಮೊಗ್ಗ(Shimoga), ಕೊಪ್ಪಳ, ಬಾಗಲಕೋಟೆ, ಬೆಳಗಾವಿ,  ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು (Chikkamagaluru), ಚಿತ್ರ ದುರ್ಗ,  ದಾವಣಗೆರೆ, ಗದಗ್, ಹಾವೇರಿ, ಕೊಡಗು, ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 99.99 ರೂಪಾಯಿಯ ಅಂಚಿನಲ್ಲಿ ನಿಂತಿದೆ. ಅಂದರೆ ನೀವು ಬಹುತೇಕ ನೂರು ರೂಪಾಯಿ ಕೊಟ್ಟು ಒಂದು ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಬೇಕು.

ಇದನ್ನೂ ಓದಿ : Driving License: ಜುಲೈ 1 ರಿಂದ ಚಾಲನಾ ಪರವಾನಗಿಗಾಗಿ ಹೊಸ ನಿಯಮ, ಈಗ ಟೆಸ್ಟ್ ಇಲ್ಲದೆ ಸಿಗುತ್ತೆ DL

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News