ನವದೆಹಲಿ: ಎಲ್‌ಎಸಿ ಮೇಲಿನ ರಕ್ತಸಿಕ್ತ ಸಂಘರ್ಷದ ನಂತರ ಭಾರತ ಮತ್ತು ಚೀನಾ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. RIC ಸಮೂಹ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಿದ್ದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಇಂದು ರಷ್ಯಾ ಮತ್ತು ಚೀನಾದ ವಿದೇಶಾಂಗ ಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಅದೇ ಸಮಯದಲ್ಲಿ ಇಂಡೋ-ಚೀನಾ (Indo-China) ಉದ್ವಿಗ್ನತೆಯ ಅಡಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಮಾಸ್ಕೋ ತಲುಪಿದ್ದಾರೆ, ಅವರು 75 ನೇ ವಿಜಯ ದಿನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲಿ ಭಾರತ ಮತ್ತು ರಷ್ಯಾ (Russia) ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಚರ್ಚಿಸುವ ಸಾಧ್ಯತೆ ಇದೆ.


ಪಿಎಲ್‌ಎ ಕೋರಿಕೆಯ ಮೇರೆಗೆ LAC ಉದ್ವಿಗ್ನತೆ ಕುರಿತಂತೆ ಇಂಡೋ-ಚೀನಾ ಮಾತುಕತೆ


ಕಳೆದ ವಾರ ಭಾರತ ಮತ್ತು ಚೀನಾ (China) ಸೈನ್ಯದ ನಡುವೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಮೊದಲು, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸೋಮವಾರ ಉಭಯ ದೇಶಗಳ ಪಡೆಗಳ ನಡುವೆ ಎರಡನೇ ಸುತ್ತಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆ ನಡೆದಿತ್ತು.


ದೇಶದ ಉನ್ನತ ಮಿಲಿಟರಿ ನಾಯಕತ್ವವು ಪೂರ್ವ ಲಡಾಖ್‌ನ (Ladakh) ಪರಿಸ್ಥಿತಿಯ ಬಗ್ಗೆ ವಿವರವಾದ ವಿಮರ್ಶೆ ನಡೆಸಿತ್ತು. ಕಳೆದ ವಾರ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಬಗ್ಗೆ ನಿನ್ನೆ ಬೆಳಿಗ್ಗೆ 11: 30 ಕ್ಕೆ ಪೂರ್ವ ಲಡಾಖ್‌ನ ಚುಶುಲ್ ಸೆಕ್ಟರ್‌ನ ಚೀನಾದ ಭಾಗದಲ್ಲಿರುವ ಮೊಲ್ಡೊದಲ್ಲಿ ಸಭೆ ಪ್ರಾರಂಭವಾಯಿತು ಮತ್ತು ರಾತ್ರಿಯವರೆಗೂ ಮುಂದುವರೆಯಿತು.


ಚೀನಾ ಉತ್ಪನ್ನಗಳಿಗೆ ಹಾಕಲು ಕತ್ತರಿ, ನಡೆಯುತ್ತಿದೆ ಪಟ್ಟಿ ಸಿದ್ದಪಡಿಸುವ ತಯಾರಿ


ಕಾರ್ಪ್ಸ್ ಕಮಾಂಡರ್ ಸಭೆಯಲ್ಲಿ ಭಾರತವು ಚೀನಾವನ್ನು ತೀವ್ರವಾಗಿ ಕೇಳಿದೆ. ಗಾಲ್ವಾನ್‌ನಲ್ಲಿ ನಡೆದ ದಾಳಿಯನ್ನು ಯೋಜಿತ ಪಿತೂರಿ ಮತ್ತು ಕ್ರೂರ ಕೃತ್ಯ ಎಂದು ಬಣ್ಣಿಸಲಾಗಿದೆ. ಪಾಂಗೊಂಗ್ ಸರೋವರವನ್ನು ಯಥಾಸ್ಥಿತಿ ಕಾಪಾಡಿಕೊಳ್ಳಲು ಕೇಳಲಾಯಿತು.


ಈ ಬೆಳವಣಿಗೆಗೆ ಸಂಬಂಧಿಸಿದ ಜನರು, ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಎರಡನೇ ಸುತ್ತಿನ ಮಾತುಕತೆಗಳು ಪೂರ್ವ ಲಡಾಖ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ವಿಧಾನಗಳನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದೆ ಎಂದು ಹೇಳಿದರು.