ರಾಯಪುರ್: ಚತ್ತೀಸ್ಗಡ್ ದಮೊದಲ ಮುಖ್ಯಮಂತ್ರಿ  ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಆರೋಗ್ಯ ಬುಲೆಟಿನ್ ಬಿಡುಗಡೆಯಾಗಿದೆ. ಶ್ರೀ ನಾರಾಯಣ ಆಸ್ಪತ್ರೆಯ ಪ್ರಕಾರ, ಅಜಿತ್ ಜೋಗಿ ಕೊಮಾ ಜಾರಿದ್ದು, ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎನ್ನಲಾಗಿದೆ. ಮುಂದಿನ 48 ಗಂಟೆಗಳ ನಂತರ ಅವರ ದೇಹದ ಮೇಲೆ ಔಷಧಿಗಳ ಪರಿಣಾಮ ಹೇಗೆ ಇರಲಿದೆ ಎಂಬುದನ್ನು ಹೇಳಲು ಸಾಧ್ಯವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜಾರಿಯಾಗಿದೆ ಅಜಿತ್ ಜೋಗಿ ಅವರ ಹೆಲ್ತ್ ಬುಲೆಟಿನ್
ಚತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ಕಾಂಗ್ರೆಸ್ ಚತ್ತೀಸ್ಗಡ (ಜೆ) ಮುಖ್ಯಸ್ಥ ಅಜಿತ್ ಜೋಗಿ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಹೇಳಿಕೊಳ್ಳುವ ಬದಲಾವಣೆ ಕಂಡುಬಂದಿಲ್ಲ ಎನ್ನಲಾಗಿದೆ. ಶನಿವಾರ ಮಧ್ಯಾಹ್ನ ಅಜಿತ್ ಜೋಗಿ ಅವರ ಆರೋಗ್ಯ ಸ್ಥಿತಿ  ಹಠಾತ್ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಗರದ ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾದ ಅಜಿತ್ ಜೋಗಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ವೈದ್ಯರ ಪ್ರಕಾರ, ಅವರ ದೇಹದ ಮೇಲೆ ಔಷಧಿಗಳ ಪರಿಣಾಮ ಹೇಗೆ ಇರಲಿದೆ ಎಂಬುದನ್ನು ಹೇಳಲು 48 ಗಂಟೆಗಳ ಸಮಯಾವಕಾಶ ಬೇಕಾಗಲಿದೆ ಎಂದಿದ್ದಾರೆ. ಸದ್ಯ ವೈದ್ಯರು ನೀಡಿರುವ ಬುಲೆಟಿನ್ ನಲ್ಲಿ ಅಜಿತ್ ಜೋಗಿ ಕೊಮಾದಲ್ಲಿದ್ದಾರೆ ಎಂದು ವರದಿಯಾಗಿದೆ.



ನಿನ್ನೆ ಹೃದಯಾಘಾತದ ಬಳಿಕ ಅಜಿತ್ ಜೋಗಿ ಅಸ್ವಸ್ಥರಾಗಿದ್ದ್ದರು
ಶನಿವಾರ, ಅಜಿತ್ ಜೋಗಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ವೈದ್ಯರು  ಅವರ ಮನೆಗೆ ತೆರಳಿ ಅವರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ.ಆದರೆ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾದ ಕಾರಣ ಅವರನ್ನು ನಗರದ ನಾರಾಯಣ  ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಅಜಿತ್ ಜೋಗಿ ಅವರಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಉಸಿರಾಟದ ತೊಂದರೆಯಿಂದಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.


ಅಜಿತ್ ಜೋಗಿ ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ
ರಾಜಕೀಯ ರಂಗಕ್ಕೆ ಬರುವ ಮೊದಲು ಅಜೀತ್ ಜೋಗಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಂದೋರ್ ನಲ್ಲಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರ ಕಠಿಣ ಪರಿಶ್ರಮವನ್ನು ಕಂಡ ದಿ. ರಾಜೀವ್ ಗಾಂಧಿ, ಅಜಿತ್ ಜೋಗಿ ಅವರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದರು. ಕಾಂಗ್ರೆಸ್ ಪಕ್ಷದ ಸಹಾಯದಿಂದ ಸಂಸತ್ತು ಪ್ರವೇಶಿಸಿದ ಅಜಿತ್ ಜೋಗಿ ಬಳಿಕ ತಮ್ಮ ಕಾರ್ಯಶೈಲಿಯ ಮೂಲಕ ಓರ್ವ ಉತ್ತಮ ನಾಯಕರಾಗಿ ಗುರುತಿಸಿಕೊಂಡರು. ರಾಜೀವ್ ಗಾಂಧಿ ಅವರ ಮೇಲೆ ವಿ.ಪಿ ಸಿಂಗ್ ವಾಗ್ದಾಳಿ ನಡೆಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅಜಿತ್ ಜೋಗಿ ಅವರನ್ನು ಬಳಿಕ ಕಾಂಗ್ರೆಸ್ ಪಕ್ಷದ 'ಹಲ್ಲಾ ಬೋಲ್' ತಂಡದ ಪ್ರಮುಖ ಸದಸ್ಯರಾಗಿ ಪರಿಗಣಿಸಲಾಯಿತು. ಈ ತಂಡದಲ್ಲಿ ಸುರೇಂದ್ರ ಸಿಂಗ್ ಅಹ್ಲುವಾಲಿಯಾ, ಸುರೇಶ್ ಪಚೌರಿ, ರತ್ನಕರ್ ಪಾಂಡೆ, ಬಾಬಾ ಮಿಶ್ರಾ ಅವರಂತಹ ಘಟಾನುಘಟಿ ನಾಯಕರಿದ್ದರು. ಆದರೆ, ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಅಜಿತ್ ಜೋಗಿ ಅವರ ನಿಷ್ಠೆ ಕೇವಲ ರಾಜಕೀಯ ಗುಲಾಮಗಿರಿಗೆ ಮಾತ್ರ ಸೀಮಿತವಾಯಿತು.