ನವದೆಹಲಿ: ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಒ ಚಂದಾ ಕೋಚ್ಚಾರ್ ಅವರು ಈ ಹಿಂದೆ ಬ್ಯಾಂಕ್ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಬ್ಯಾಂಕ್ ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ಬ್ಯಾಂಕ್ ನ ಸ್ವತಂತ್ರ ತನಿಖೆ ಸಮಿತಿ ವರದಿಯ ನಂತರ ಬ್ಯಾಂಕ್ ನಿಂದ ಈ ಹೇಳಿಕೆ ಬಂದಿದೆ.  


COMMERCIAL BREAK
SCROLL TO CONTINUE READING

ಕೊಚ್ಚಾರ್ ಅವರ ರಾಜೀನಾಮೆ ಬ್ಯಾಂಕಿನ ಬೋನಸ್ ಸೇರಿದಂತೆ ಇತರ ಹಣಕಾಸಿನ ವ್ಯವಹಾರಗಳು ದುರ್ಭಳಕೆಯಾಗುವುದನ್ನು ತಡೆಯಲು ಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ ಎಂದು ಬ್ಯಾಂಕ್ ತಿಳಿಸಿದೆ.


"ಚಂದಾ ಕೋಚಾರ್ ಐಸಿಐಸಿಐ ಬ್ಯಾಂಕ್ ನ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ತಮ್ಮ ಆಸಕ್ತಿ ಮತ್ತು ವಿಶ್ವಾಸಾರ್ಹ ಕರ್ತವ್ಯಗಳಲ್ಲಿ ಲೋಪದೋಷಗಳಾಗಿವೆ.  ಈ ಹಿನ್ನಲೆಯಲ್ಲಿ ಬ್ಯಾಂಕಿನ ಆಂತರಿಕ ನೀತಿಗಳ ಅಡಿಯಲ್ಲಿ ಬ್ಯಾಂಕಿನ ನಿರ್ದೇಶಕರು ಇನ್ನು ಮುಂದೆ ಬ್ಯಾಂಕ್ ನ ತಿರ್ಮಾನಗಳಲ್ಲಿ ಇರುವುದಿಲ್ಲ" ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.