ನವದೆಹಲಿ:  ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಆರು ಸಂಸದರಲ್ಲಿ ನಾಲ್ವರು ಇಂದು ಬಿಜೆಪಿಗೆ ಸೇರಿದ್ದಾರೆ. 



COMMERCIAL BREAK
SCROLL TO CONTINUE READING

ಇಂದು ಸಂಜೆ ಮೇಲ್ಮನೆಯ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ  ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಅವರಿಗೆ ತಾವು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ಪತ್ರ ಸಲ್ಲಿಸಿದ್ದಾರೆ. ಈಗ ಬಿಜೆಪಿಗೆ ಸೇರ್ಪಡೆಯಾಗಿರುವವರಲ್ಲಿ  ವೈ.ಎಸ್.ಚೌದರಿ, ಸಿ.ಎಂ.ರಮೇಶ್, ಗರಿಕಪೋತಿ ಮೋಹನ್ ರಾವ್, ಟಿ.ಜಿ.ವೆಂಕಟೇಶ್ ಪ್ರಮುಖ ಸಂಸದರಾಗಿದ್ದಾರೆ.



ತೆಲುಗು ದೇಶಂನ ರಾಜ್ಯಸಭಾ ಸದಸ್ಯರು ಉಪ ರಾಷ್ಟ್ರಪತಿ ಅವರನ್ನು ಭೇಟಿಯಾದ ವೇಳೆ  ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಸಾಥ್ ನೀಡಿದ್ದಾರೆ. ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ರಜೆಯ ಮೇಲೆ ಅಮೇರಿಕಾದಲ್ಲಿರುವ ಸಂದರ್ಭದಲ್ಲಿ ಟಿಡಿಪಿ ಸಂಸದರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.


ಚಂದ್ರಬಾಬು ನಾಯ್ಡು ಕಳೆದ ವರ್ಷ ಎನ್‌ಡಿಎಯನ್ನು ತೊರೆದು ಬಿಜೆಪಿ ವಿರುದ್ಧ ಸಮರ ಸಾರಿದ್ದರು,ಆದರೆ ಅವರ ಯೋಜನೆ ಚುನಾವಣೆಯಲ್ಲಿ ವಿಫಲವಾಯಿತು. ಟಿಡಿಪಿ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್  ಜಗನ್ಮೋಹನ್ ರೆಡ್ಡಿ ಅವರು ರಾಜ್ಯ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಅಲ್ಲದೆ ರಾಜ್ಯದ 25 ಲೋಕಸಭಾ ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗಳಿಸಿದರು.