ನವದೆಹಲಿ:ಮುಂಬೈನ ಗೆಟ್ ವೇ ಆಫ್ ಇಂಡಿಯಾ ಬಳಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾ ನಿರತರಲ್ಲಿ ಕೆಲವರು 'ಫ್ರೀ ಕಾಶ್ಮೀರ್' ಪೋಸ್ಟರ್ ಗಳನ್ನು ಪ್ರದರ್ಶಿಸಿದ್ದರು. ಇದೀಗ ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಘೋಷಣೆ ಮೊಳಗಿವೆ. ಈ ವೇಳೆ ಮಧ್ಯಪ್ರವೇಶಿಸಿರುವ ಪೊಲೀಸರು ಪ್ರತಿಭಟನಾ ನಿರತರನ್ನು ಚದುರಿಸಿದ್ದಾರೆ. ಈ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ್' ಘೋಷಣೆಗಳನ್ನು ಮೊಳಗಿಸಿದ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಾಚ್ಯ ಪದಗಳನ್ನೂ ಸಹ ಬಳಸಿದ್ದಾರೆ. 'ಕಾಶ್ಮೀರ್ ಕೇಳಿ' ಎಂಬ ಘೋಷಣೆಗಳು ಮೊಳಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ಮಧ್ಯಪ್ರವೇಶಿಸಿ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚನೆ ಮಾಡಿದ್ದಾರೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಈ ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರದರ್ಶನದುದ್ದಕ್ಕೂ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ಆಕ್ಷೇಪಾರ್ಹ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿದೆ. ಅಷ್ಟೇ ಅಲ್ಲ ಕೆಲ ಪೋಸ್ಟರ್ ಗಳ ಮೇಲೆ ಆಕ್ಷೇಪಾರ್ಹ ಶಬ್ದಗಳ ಬಳಕೆ ಕೂಡ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿವಿನಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಮುಂಬೈನ ಗೆಟ್ ವೇ ಆಫ್ ಇಂಡಿಯಾ ಬಳಿ ನಡೆದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ್' ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿತ್ತು. ಈ ಜನರು ಕಾಶ್ಮೀರವನ್ನು ದೇಶದ ಒಂದು ಭಾಗವೆಂದು ಪರಿಗಣಿಸುವುದಿಲ್ಲವೇ  ಅಥವಾ ಕಾಶ್ಮೀರ ಈ  ದೇಶದಿಂದ ಬೇರೆಯಾಗಬೇಕೆಂದು ಇವರುಗಳು ಬಯಸುತ್ತಾರೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಮಾತ್ರ ನಿಜ. ಅಷ್ಟೇ ಯಾಕೆ ಮುಂಬೈನಲ್ಲಿ ನಡೆದ ಪ್ರತಿಭಟನೆ JNU ಹಿಂಸಾಚಾರವನ್ನು ವಿರೋಧಿಸಿ ನಡೆದಿತ್ತೆ ಅಥವಾ ಕಾಶ್ಮೀರಕ್ಕೆ ಸ್ವಾತಂತ್ರ್ಯವನ್ನು ಕೋರಿ ನಡೆಸಲಾಗಿತ್ತೆ? ಎಂದು ಜನರು ಇದೀಗ ಯೋಚಿಸಿವಂತಾಗಿದೆ.