ನವದೆಹಲಿ: Corona Pandemic - ಕರೋನದ ಎರಡನೇ ಅಲೆಯಿಂದ (Coronavirus Second Wave) ತತ್ತರಿಸಿ ಹೋಗಿರುವ ದೇಶದ ಬಡ ಜನತೆಗೆ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ (Modi Government) ಸರ್ಕಾರ ಭಾರಿ  ಪರಿಹಾರ ಒದಗಿಸಿದೆ. ಹೌದು, ಮೇ ಮತ್ತು ಜೂನ್ ತಿಂಗಳಲ್ಲಿ ದೇಶದ 80 ಕೋಟಿ ಬಡವರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರವನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 79.88 ಕೋಟಿ ಬಡವರಿಗೆ ಈ ಸೌಲಭ್ಯವನ್ನು ಒದಗಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಈ ಯೋಜನೆಯಡಿ ರಾಜ್ಯಗಳಿಗೆ ಎಷ್ಟು ಗೋಧಿ ಮತ್ತು ಅಕ್ಕಿ ಹಂಚಿಕೆ ಮಾಡಲಾಗುವುದು ಎಂಬುದಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಇದಲ್ಲದೆ ಈ ಯೋಜನೆಯನ್ನು ಮುಂದುವರೆಸುವ ನಿರ್ಧಾರ ಕೂಡ ಇಲಾಖೆಯಿಂದಲೇ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- RBI Governor PC Highlights: ಕೊರೊನಾ ಸಂಕಷ್ಟಕ್ಕೆ RBI 'ಆರ್ಥಿಕ ಲಸಿಕೆ', ಇಲ್ಲಿವೆ 10 ಪ್ರಮುಖ ಘೋಷಣೆಗಳು


ಕೊರೊನಾ ವಿರುದ್ಧ ಹೋರಾಟದಲ್ಲಿ ವಿಧಿಸಲಾಗಿರುವ ಲಾಕ್ ಡೌನ್(Lockdown), ಕೆಟ್ಟ ಮಾನ್ಸೂನ್ ಗಳಂತಹ ಸಂಗರ್ಭಗಳಲ್ಲಿ ಯೋಜನೆಯನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಒಟ್ಟು 80 ಲಕ್ಷ ಮೆಟ್ರಿಕ್ ಟನ್ ಪಡಿತರ ವಿತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ಕಾಲದಲ್ಲಿ ನಿರ್ಬಂಧಿತ ಪರಿಸ್ಥಿತಿಗಳ ಹಿನ್ನೆಲೆ ದೇಶದ ಯಾವುದೇ ಬಡವ್ಯಕ್ತಿಗೆ ಆಹಾರದ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸರ್ಕಾರದ ಈ ನಿರ್ಧಾರದ ಬಳಿಕ ಮುಂಬರುವ ಎರಡು ತಿಂಗಳಿನಲ್ಲಿ ಮತ್ತೆ ನಿರ್ಬಂಧನೆಗಳು ವಿಧಿಸಲಾಗುತ್ತಿದೆಯೇ ಎಂಬುದರ ಕುರಿತು ಊಹಾಪೋಹಗಳು ಕೇಳಿಬರಲಾರಂಭಿಸಿವೆ.


ಇದನ್ನೂ ಓದಿ- ಎರಡನೇ ಬಾರಿ RT-PCR ಟೆಸ್ಟ್ ಮಾಡಿಸಬೇಡಿ, ಕೊರೊನಾ ಟೆಸ್ಟ್ ಕುರಿತು ICMR ಹೊಸ ಅಡ್ವೈಸರಿ


ಇದಕ್ಕೂ ಮುನ್ನ ಶುಕ್ರವಾರ, ಕೇಂದ್ರ ಸರ್ಕಾರವು ಮೇ ಮತ್ತು ಜೂನ್ ತಿಂಗಳಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಪಡಿತರವನ್ನು ನೀಡುವುದಾಗಿ ಘೋಷಿಸಿತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಸುಧಾಂಶು ಪಾಂಡೆ, "ಮೇ ಮತ್ತು ಜೂನ್ ತಿಂಗಳಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ (PM Garib Kalyan Anna Yojana) ಅಡಿಯಲ್ಲಿ ನಾವು ಬಡವರಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರವನ್ನು(Free Ration) ನೀಡಲಿದ್ದೇವೆ" ಎಂದು ಹೇಳಿದ್ದರು. ಆದರೆ, ಈ ಬಾರಿ ದ್ವಿದಳ ಧಾನ್ಯಗಳನ್ನು ಈ ಯೋಜನೆಯಡಿ ವಿತರಿಸಲಾಗುವುದಿಲ್ಲ ಎಂದಿದ್ದರು. ಕಳೆದ ವರ್ಷವೂ ಸರ್ಕಾರ ಹಲವಾರು ತಿಂಗಳುಗಳವರೆಗೆ ಇಂತಹ ಯೋಜನೆಯನ್ನು ಘೋಷಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಕಳೆದ ವರ್ಷ ಈ ಯೋಜನೆಯ ಅಡಿ ದ್ವಿದಳ ಧಾನ್ಯಗಳನ್ನು ಕೂಡ ವಿತರಣೆ ಮಾಡಲಾಗಿತ್ತು.


ಇದನ್ನೂ ಓದಿ- Corona Variant: ಕರೋನಾ ರೂಪಾಂತರದ ಮೊದಲ ಫೋಟೋ ಬಹಿರಂಗ, ಇದು ಭಾರತದ ಎರಡನೇ ತರಂಗಕ್ಕೆ ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.