RBI Governor PC Highlights: ಕೊರೊನಾ ಸಂಕಷ್ಟಕ್ಕೆ RBI 'ಆರ್ಥಿಕ ಲಸಿಕೆ', ಇಲ್ಲಿವೆ 10 ಪ್ರಮುಖ ಘೋಷಣೆಗಳು

RBI Governor PC Highlights - ಇಡೀ ದೇಶ ಇಂದು ಕೊರೊನಾ ವೈರಸ್ ನ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ ಹಲವು ನೆಮ್ಮದಿ ನೀಡುವ ಘೋಷಣೆಗಳನ್ನು ಮಾಡಿದ್ದಾರೆ.

Written by - Nitin Tabib | Last Updated : May 5, 2021, 02:18 PM IST

    RBI ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

    ಕೊವಿಡ್ ಗೆ ಸಂಬಂಧಿಸಿದ ಹೆಲ್ತ್ ಕೆಯರ್ ಇನ್ಫ್ರಾಸ್ಟ್ರಕ್ಚರ್ ಹಾಗೂ ಸೇವೆಗಳಿಗೆ 50 ಸಾವಿರ ಕೋಟಿ ರೂಗಳ ಅನುದಾನ ಘೋಷಣೆ.

    35000 ಕೋಟಿ ರೂ. ಮೊತ್ತದ ಸರ್ಕಾರಿ ಸಿಕ್ಯೋರಿಟಿ ಖರೀದಿಯ ಎರಡನೇ ಹಂತ ಮೇ 20 ರಿಂದ ಆರಂಭ.

RBI Governor PC Highlights: ಕೊರೊನಾ ಸಂಕಷ್ಟಕ್ಕೆ RBI 'ಆರ್ಥಿಕ ಲಸಿಕೆ', ಇಲ್ಲಿವೆ 10 ಪ್ರಮುಖ ಘೋಷಣೆಗಳು title=
RBI Governor Press Conference Highlights (File Photo)

ನವದೆಹಲಿ: RBI Governor Press Conference News Updates - ಇಡೀ ದೇಶ ಕೊರೊನಾ ವೈರಸ್ ಮಹಾಮಾರಿಯ ಎರಡನೇ ಅಲೆಯ ಕಪಿಮುಷ್ಠಿಗೆ ಸಿಲುಕಿದೆ. ಇದರಿಂದ ಸಣ್ಣ ಉದ್ಯೋಗಗಳು, MSME, ಸ್ಮಾಲ್ ಫೈನಾನ್ಸ್ ಬಂಕುಗಳು ಹಾಗೂ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಈ ಎಲ್ಲ ಜನರಿಗೆ ನೆಮ್ಮದಿ ಕಲ್ಪಿಸುವ ನಿಟ್ಟಿನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಹಲವು ನೆಮ್ಮದಿಯ ಘೋಷಣೆಗಳನ್ನು ಮಾಡಿದೆ. RBI ಲೋನ್ ಮೋರಾಟೋರಿಯಂ ಕುರಿತು ದೊಡ್ಡ ಘೋಷಣೆಯೊಂದನ್ನು ಮಾಡಲಿದೆ ಎಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಆದರೆ, ಈ ಕುರಿತು RBI ಚಕಾರೆತ್ತಿಲ್ಲ. ಈ ಕುರಿತು ಮಾತನಾಡುವ ತಜ್ಞರು, RBI ಪ್ರಸ್ತುತ ಕೈಗೊಂಡಿರುವ ನಿರ್ಧಾರಗಳ ಪರಿಣಾಮ ಬ್ಯಾಂಕ್ ಗಳ ಮೇಲೆ ಯಾವ ರೀತಿ ಇರಲಿದೆ ಎಂಬುದನ್ನು ಗಮನಿಸಲು RBI ಬಯಸುತ್ತಿದೆ ಎಂದಿದ್ದಾರೆ. ಮುಂದಿನ ಆರ್ಥಿಕ ನೀತಿಯ ಘೋಷಣೆಯ ವೇಳೆ ಈ ಕುರಿತು ಯೋಚಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

RBI ಗವರ್ನರ್ 10 ಪ್ರಮುಖ ಘೋಷಣೆಗಳು
ಕೊರೊನಾ ವೈರಸ್ ನ ಎರಡನೆಯ ಅಲೆ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆ ತಂದಿಗೆ ಎಂದಿದ್ದಾರೆ. ಬನ್ನಿ RBI ಗವರ್ನರ್ ಮಾಡಿರುವ 10 ಪ್ರಮುಖ ಘೋಷಣೆಗಳು ಯಾವುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ

ಇದನ್ನೂ ಓದಿ- RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ

1. ಭಾರತೀಯ ರಿಸರ್ವ್ ಬ್ಯಾಂಕ್ ಹೆಲ್ತ್ ಕೆಯರ್ ಗಾಗಿ 50 ಸಾವಿರ ಕೋಟಿ ರೂ.ಗಳ ನಿಧಿಯ ಘೋಷಣೆ ಮಾಡಿದೆ. ಇದರ ಅಡಿ ತುರ್ತು ಆರೋಗ್ಯ ಸೇವೆಗಾಗಿ ರೂ.50 ಸಾವಿರ ಕೋಟಿ ರೂಗಳ ಅನುದಾನ ನೀಡಲಾಗುವುದು. ಇದಲ್ಲದೆ ಆದ್ಯತೆ ಇರುವ ಸೆಕ್ಟರ್ ಗಳಿಗೆ ಶೀಘ್ರದಲ್ಲಿಯೇ ಸಾಲ ಹಾಗೂ ಇನ್ಸೆಂಟಿವ್ ವ್ಯವಸ್ಥೆ ಮಾಡಲಾಗುವುದು. ಇದನ್ನು ಕೊವಿಡ್ ಲೋನ್ ಬುಕ್ ಅಡಿ ಸಾಲ ನೀಡಲಾಗುವುದು. 
2. 35 ಸಾವಿರ ಕೋಟಿ ರೂ.ಗಳ ಸರ್ಕಾರಿ ಸೆಕ್ಯೂರಿಟಿಗಳ ಖರೀದಿಯ (GSAP) ಎರಡನೇ ಹಂತವನ್ನು ಮೇ 20 ರಿಂದ ಆರಂಭಿಸಲಾಗುವುದು.
3. ಆದ್ಯತೆ ಇರುವ ಸೆಕ್ಟರ್ ಗಳಿಗೆ ತ್ವರಿತ ಸಾಲ ಹಾಗೂ ಇನ್ಸೆಂಟಿವ್ ವ್ಯವಥೆ ಮಾಡಲಾಗುವುದು.
4. 500 ಕೋಟಿ ರೂಗಳವರೆಗಿನ ಆಸ್ತಿ ಹೊಂದಿರುವ MFI ಗಳನ್ನು ಆದ್ಯತೆ ಇರುವ ಕ್ಷೇತ್ರಗಳಲ್ಲಿ ಶಾಮೀಲುಗೊಳಿಸಲಾಗುವುದು. ಸ್ಮಾಲ್ ಫೈನಾನ್ಸ್ ಬಂಕುಗಳು, 500 ಕೋಟಿ. ರೂ. ಸೈಜ್ ಹೊಂದಿರುವ ಸ್ಮಾಲರ್ ಮೈಕ್ರೊಫೈನಂಸೆಸ್ ಇನ್ಸ್ಟಿಟ್ಯೂಟ್ ಗಳಿಗೆ ಸಾಲ ನೀಡಬಹುದಾಗಿದೆ.
5. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ 3 ವರ್ಷದ ಅವಧಿಗಾಗಿ 10 ಸಾವಿರ ಕೋಟಿ ರೂ.ಗಳ SLTRO ಅಂದರೆ ಸಾಲ ನೀಡಲಿವೆ. ಇದಕ್ಕಾಗಿ 10 ಲಕ್ಷ / ಸಾಲಗಾರ ಮಿತಿ ಇರಲಿದೆ. ಅವರಿಗೆ ಮಾರ್ಚ್ 31, 2022ರವರೆಗೆ ಟರ್ಮ್ ಸೌಲಭ್ಯ ಇರಲಿದೆ.

ಇದನ್ನೂ ಓದಿ-RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ

6. ಸದ್ಯದ ಪರಿಸ್ಥಿತಿಯಲ್ಲಿ KYC ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ವಿಡಿಯೋ ಮೂಲಕ ನಡೆಸಲಾಗುವ KYC ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. 
7. ವೈಯಕ್ತಿಕ, MSMEsಗಳಿಗೆ ಒನ್ ಟೈಮ್ ರೀಸ್ಟ್ರಕ್ಚರಿಂಗ್ ಅನುಮತಿ ಇದೆ. ಇದರ  ಅವಧಿ ಸೆಪ್ಟೆಂಬರ್ 30, 2021 ರವರೆಗೆ ಇರಲಿದೆ . ಇದುವರೆಗೂ  ರೀಸ್ಟ್ರಕ್ಚರಿಂಗ್ ಮಾಡಿಸದೆ ಇರುವವರಿಗೆ ಇದರಿಂದ ಲಾಭ ಸಿಗಲಿದೆ.
8. ಲೋನ್ ಮೊರಾಟೋರಿಯಂ ಅವಧಿಯನ್ನು ಮುಂದಿನ ಎರಡು ವರ್ಷಗಳ ಅವಧಿಗಾಗಿ ಮತ್ತೆ ಹೆಚ್ಚಿಸಲು ಅನುಮತಿ ನೀಡಿದೆ. ಆದರೆ, ಈ ನಿರ್ಣಯ ಬ್ಯಾಂಕುಗಳಿಗೆ ಬಿಟ್ಟಿದ್ದು ಎಂದು RBI ಸ್ಪಷ್ಟಪಡಿಸಿದೆ.
9. ರಾಜ್ಯಗಳ ಓವರ್ ಡ್ರಾಫ್ಟ್ ಫೆಸಿಲಿಟಿಯಿಂದಲೂ ಕೂಡ ನೆಮ್ಮದಿ ನೀಡಲಾಗಿದೆ. ರಾಜ್ಯಗಳ ಓವರ್ ಡ್ರಾಫ್ಟ್ ಅವರ್ಧಿಯನ್ನು RBI 36 ದಿನಗಳಿಂದ 50 ದಿನಗಳಿಗೆ ಹೆಚ್ಚಿಸಿದೆ.
10. ಹವಾಮಾನ ಇಲಾಖೆ ಈ ಬಾರಿ ಸಾಮಾನ್ಯ ಮಾನ್ಸೂನ್ ಇರಲಿದೆ ಎಂಬ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆಯ ಹಿನ್ನೆಳೆ ಬೇಡಿಕೆಯಲ್ಲಿ ಹೆಚ್ಚಳದ ನಿರೀಕ್ಷೆ ಇದೆ . ಏಪ್ರಿಲ್ ತಿಂಗಳಿನಲ್ಲಿ ಟ್ರ್ಯಾಕ್ಟರ್ ಗಳ ಬೇಡಿಕೆ ಹೆಚ್ಚಾಗಿದೆ. ಬೆಳೆ ಹಾಗೂ ಅಡುಗೆ ಎಣ್ಣೆಯ ಹಣದುಬ್ಬರದಲ್ಲಿ ಏರಿಕೆಯಾಗಿದೆ. ಉತ್ತಮ ಮಾನ್ಸೂನ್ ನಿಂದ ಮುಂಬರುವ ದಿನಗಳಲ್ಲಿ ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಣದುಬ್ಬರದ ದರದ ಮೇಲೆ ತುಂಬಾ ಕಡಿಮೆ ಪರಿಣಾಮ ಉಂಟಾಗಿದೆ ಎಂದು RBI ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿ- RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News