ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆ ಹೆಚ್ಚಳವು ಶನಿವಾರದಂದು ಮುಂದುವರೆದಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 81.63 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 
73.54 ರೂ. ಪೆಟ್ರೋಲ್ ಲೀಟರ್ಗೆ 0.35 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 0.24 ಪೈಸೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 89.01 ರೂ.ಗಳಾಗಿದ್ದು, ಲೀಟರ್ಗೆ 0.34 ಪೈಸೆ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್ಗೆ 78.07  ರೂಗಳಾಗಿದೆ , ಪ್ರತಿ ಲೀಟರ್ಗೆ 0.25 ರೂ. ಹೆಚ್ಚಳವಾಗಿದೆ. ಕಚ್ಚಾ ತೈಲ ಬೆಲೆಗಳಲ್ಲಿ ಹೆಚ್ಚಳ ಮತ್ತು  ರೂಪಾಯಿ ಮೌಲ್ಯದ ಕುಸಿತ ಕಳೆದ ತಿಂಗಳಿಂದ ಇಂಧನ ದರಗಳ ಏರಿಕೆ  ನಿರಂತರವಾಗಿ ಮುಂದುವರೆದಿದೆ ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಇಂಧನ ಧರಗಳ ಏರಿಕೆ ಮುಂದುವರೆದಿದೆ. ಸದ್ಯ ಕಚ್ಚಾ ತೈಲವು ಬ್ಯಾರೆಲ್ ಗೆ 78 ಡಾಲರ್ ದರವಿದೆ.


ಪೆಟ್ರೋಲ್ ಬೆಲೆಯೊಂದಿಗೆ, ಡೀಸೆಲ್ ಸಹ ತೀವ್ರ ರೀತಿಯ ಏರಿಕೆ ಕಂಡಿದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಇಂಧನ ಬೆಲೆ ಶುಕ್ರವಾರ 73.30 ರೂ. 77.82 ಮತ್ತು 77.49 ರೂ.ಗೆ ಏರಿದೆ. ಗುರುವಾರದಂದು 73.08 ರೂ. 77.58 ಮತ್ತು ಲೀಟರ್ಗೆ 77.25 ರೂ.ಇತ್ತು ಎಂದು ಹೇಳಲಾಗಿದೆ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 74.93 ಇದ್ದದ್ದು ಅದೇ ದಿನ ಲೀಟರ್ ಗೆ  75.15 ಕ್ಕೆ ಏರಿಕೆಯಾಗಿದೆ. ಈ ನಿರಂತರ ತೈಲ ಬೆಳೆಗಳ  ಹೆಚ್ಚಳದ ಮೂಲಕ ಮಹಾನಗರಗಳಲ್ಲಿ ಇಂಧನ ದರಗಳ ಏರಿಕೆ ನೂತನ ದಾಖಲೆ ಸೃಷ್ಟಿಸಿದೆ.