Full Lockdown in India: 150 ಜಿಲ್ಲೆಗಳಲ್ಲಿ ಜಾರಿಯಾಗಬಹುದು ಸಂಪೂರ್ಣ ಲಾಕ್ ಡೌನ್ ; ಒಂದೇ ದಿನದಲ್ಲಿ 3293 ಸೋಂಕಿತರ ಸಾವು
ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದೆ. ಸೋಂಕು ಶೇ. 15ಕ್ಕಿಂತಲೂ ಹೆಚ್ಚಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ (Lockdown) ಮಾಡುವ ಶಿಫಾರಸನ್ನು ಈ ಸಭೆಯು ಕೈಗೊಂಡಿದೆ.
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ, ಕರೋನಾದ (Coronavirus) ಸೋಂಕಿತ 3293 ರೋಗಿಗಳು ಕಳೆದ 24 ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಇದು ಸಾವಿನ ಅತಿದೊಡ್ಡ ಸಂಖ್ಯೆ. ದೇಶದ ಸುಮಾರು 150 ಜಿಲ್ಲೆಗಳಲ್ಲಿ ಕರೋನಾ ಸೋಂಕಿನ ಪ್ರಮಾಣ ಶೇಕಡಾ 15 ಕ್ಕಿಂತಲೂ ಅಧಿಕ ಇದೆ. ಇಂಥಹ ಜಿಲ್ಲೆಗಳನ್ನು ಗುರುತಿಸಿ ಲಾಕ್ ಡೌನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸಂಬಂಧ ಪಟ್ಟ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ (Lockdown) ಹೇರುವ ಸಾಧ್ಯತೆಗಳಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದೆ. ಸೋಂಕು ಶೇ. 15ಕ್ಕಿಂತಲೂ ಹೆಚ್ಚಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ (Lockdown) ಮಾಡುವ ಶಿಫಾರಸನ್ನು ಈ ಸಭೆಯು ಕೈಗೊಂಡಿದೆ. ಸೋಂಕಿತರ ದತ್ತಾಂಶದ ಮೇಲೆ ನಿಗಾ ಇಡಬೇಕು. ಕರೋನಾ (Coronavirus) ಪಾಸಿಟಿವ್ ರೇಟ್ ನಿಯಂತ್ರಿಸಬೇಕಾದರೆ ಇಂಥ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲೇ ಬೇಕು ಎಂಬ ಶಿಫಾರಸನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ಈ ಸಂಬಂಧ ಒಂದು ಪ್ರಸ್ತಾವನೆಯನ್ನು ಅದು ಸರ್ಕಾರಕ್ಕೆ ಕಳುಹಿಸಿದೆ.
ಇದನ್ನೂ ಓದಿ : Co-Win registration: ಸಂಜೆ 4 ಗಂಟೆಗೆಯಿಂದ ಕೊರೋನಾ ಲಸಿಕೆ ನೋಂದಣಿ ಆರಂಭ : ಕೇಂದ್ರದಿಂದ ಗೊಂದಲದ ಹೇಳಿಕೆ!
ಆರೋಗ್ಯ ಇಲಾಖೆಯ ಪ್ರಸ್ತಾವನೆಯಲ್ಲಿ ಏನಿದೆ..?
ಶೇಕಡಾ 15 ಕ್ಕಿಂತ ಹೆಚ್ಚು ಸೋಂಕಿನ ಪ್ರಮಾಣವನ್ನು ಹೊಂದಿರುವ 150 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಧಿಸಬೇಕು. ಇಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಬೇಕು. ಇಲ್ಲದೇ ಹೋದರೆ ಆರೋಗ್ಯ ವ್ಯವಸ್ಥೆ ಕುಸಿದುಬೀಳುತ್ತದೆ. ಆಸ್ಪತ್ರೆಗಳ (Hospital) ಮೇಲೆ ಹೊರೆ ಜಾಸ್ತಿಯಾಗುತ್ತದೆ. ಅದನ್ನು ತಡೆಯಬೇಕಾದರೆ ಲಾಕ್ ಡೌನ್ ಅನಿವಾರ್ಯ ಎಂದು ಹೇಳಿದೆ. ಮಹಾರಾಷ್ಟ್ರ, ದೆಹಲಿ, ಛತ್ತೀಸ್ ಗಡ, ಕರ್ನಾಟಕ (Karnataka), ತಮಿಳುನಾಡು ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಶೇಕಡಾ 69 ಕ್ಕಿಂತ ಹೆಚ್ಚಿವೆ. ಈ ರಾಜ್ಯಗಳಲ್ಲಿ ಅಧಿಕ ಸೋಂಕು ಇರುವ ಜಿಲ್ಲೆಗಳನ್ನು ಗುರುತಿಸಿ ಲಾಕ್ ಡೌನ್ ಘೋಷಣೆ ಮಾಡಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದೆ.
ಲಾಕ್ ಡೌನ್ ಕೊನೆ ಅಸ್ತ್ರ :
ಲಾಕ್ ಡೌನ್ ಹಾಕುವ ಮೊದಲು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಇತ್ತೀಚೆಗೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಲಾಕ್ ಡೌನ್ ಕೊನೆಯ ಅಸ್ತ್ರ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಮೆಡಿಕಲ್ ಮೂಲಸೌಕರ್ಯಗಳನ್ನು ಬಲಗೊಳಿಸಬೇಕು. ಆಸ್ಪತ್ರೆ, ಬೆಡ್, ಆಕ್ಸಿಜನ್, ಲಸಿಕೀಕರಣದ ಬಗ್ಗೆ ನಾವು ಗಮನ ನೀಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ : Corona Vaccine: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆಗಾಗಿ ಇಂದಿನಿಂದ ನೋಂದಣಿ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.