Corona Vaccine: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆಗಾಗಿ ಇಂದಿನಿಂದ ನೋಂದಣಿ ಆರಂಭ

Corona Vaccine Registration for Vaccine: ಮೂರನೇ ಹಂತದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕರೋನಾ ಲಸಿಕೆಗಾಗಿ ಇಂದಿನಿಂದ 18 ರಿಂದ 44 ವರ್ಷದೊಳಗಿನ ಜನರು ಆನ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಕೆ ಪ್ರಾರಂಭವಾಗುತ್ತಿದೆ.

Written by - Yashaswini V | Last Updated : Apr 28, 2021, 10:55 AM IST
  • ಕರೋನಾ ಲಸಿಕೆಗಾಗಿ ಇಂದಿನಿಂದ 18 ರಿಂದ 44 ವರ್ಷದೊಳಗಿನ ಜನರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ
  • ಏಪ್ರಿಲ್ 28 ರಿಂದ ಕೋವಿನ್ ಪ್ಲಾಟ್‌ಫಾರ್ಮ್ ಮತ್ತು ಆರೋಗ್ಯ ಸೇತು ಆಪ್‌ನಲ್ಲಿ ನೋಂದಣಿ ಪ್ರಾರಂಭ
  • ಸ್ಥಳೀಯ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ಗಳ ಹೊರತಾಗಿ, ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಈ ಹಂತದ ವ್ಯಾಕ್ಸಿನೇಷನ್‌ನಲ್ಲಿ ಸೇರ್ಪಡೆ
Corona Vaccine: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆಗಾಗಿ ಇಂದಿನಿಂದ ನೋಂದಣಿ ಆರಂಭ title=
Covid Vaccine for adults

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕರೋನಾವೈರಸ್ ಮಹಾಮಾರಿಯಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನಲೆಯಲ್ಲಿ  ಈ ಸಾಂಕ್ರಾಮಿಕದಿಂದ ರಕ್ಷಣೆ ಪಡೆಯಲು ಕರೋನಾ ಲಸಿಕೆ ಹಾಕಿಸಲಾಗುತ್ತಿದೆ. ಮೇ 1 ರಿಂದ ದೇಶದಲ್ಲಿ ಮೂರನೇ ಹಂತದ ಕರೋನಾ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಮೂರನೇ ಹಂತದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕರೋನಾ ಲಸಿಕೆಗಾಗಿ ಇಂದಿನಿಂದ 18 ರಿಂದ 44 ವರ್ಷದೊಳಗಿನ ಜನರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಇಂದಿನಿಂದ ಕರೋನಾ ವ್ಯಾಕ್ಸಿನೇಷನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 

2021 ರ ಏಪ್ರಿಲ್ 28 ರಿಂದ ಕೋವಿನ್ ಪ್ಲಾಟ್‌ಫಾರ್ಮ್ ಮತ್ತು ಆರೋಗ್ಯ ಸೇತು ಆಪ್‌ನಲ್ಲಿ (Aarogya Setu) ನೋಂದಣಿ ಪ್ರಾರಂಭವಾಗಲಿದೆ. ಸ್ಥಳೀಯ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ಗಳ ಹೊರತಾಗಿ, ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಅನ್ನು ಈ ಹಂತದ ವ್ಯಾಕ್ಸಿನೇಷನ್‌ನಲ್ಲಿ ಕೆಲವು ಕೇಂದ್ರಗಳಲ್ಲಿ ಆಯ್ಕೆಯಾಗಿ ಸೇರಿಸಲಾಗುವುದು.

ಇದನ್ನೂ ಓದಿ - Covid Care Center: ರಾಷ್ಟ್ರ ರಾಜಧಾನಿಯಲ್ಲಿ ನಗರದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು, “ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಮೂರನೇ ಹಂತದ ವ್ಯಾಕ್ಸಿನೇಷನ್ ಅಡಿಯಲ್ಲಿ ಲಸಿಕೆ  ನೀಡಲಾಗುವುದು. ನೀವು 18+ ಆಗಿದ್ದರೆ ತಪ್ಪದೇ ಲಸಿಕೆ ಪಡೆಯಿರಿ. ಕೋವಿಡ್ ವ್ಯಾಕ್ಸಿನೇಷನ್ಗಾಗಿ (Covid Vaccination) ನೋಂದಣಿಗಾಗಿ my:http://Cowin.gov.in. ಗೆ ಭೇಟಿ ನೀಡಿ. ” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ - Corona Patient Diet: Corona ರೋಗಿಗಳು ಅಪ್ಪಿ-ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ, ನಿಮ್ಮ ಡಯಟ್ ಹೀಗಿರಲಿ

Cowin.gov.in ಮತ್ತು ಅಪ್ಲಿಕೇಶನ್‌ನಲ್ಲಿ ನೋಂದಾಯಿಸುವುದು ಹೇಗೆ? ಹಂತ-ಹಂತದ ಮಾರ್ಗದರ್ಶಿ ಪರಿಶೀಲಿಸಿ:
1) cowin.gov.in ಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

2) ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಒಟಿಪಿ ಕಳುಹಿಸಲಾಗುತ್ತದೆ

3) ಇದರ ನಂತರ, ಒಟಿಪಿ ನಮೂದಿಸಿ ಮತ್ತು “ಪರಿಶೀಲಿಸು” ಬಟನ್ ಕ್ಲಿಕ್ ಮಾಡಿ

4) ಒಟಿಪಿ ಮೌಲ್ಯೀಕರಿಸಿದ ನಂತರ, “ವ್ಯಾಕ್ಸಿನೇಷನ್ ನೋಂದಣಿ” ಪುಟವು ತೆರೆಯುತ್ತದೆ

5) “ವ್ಯಾಕ್ಸಿನೇಷನ್ ನೋಂದಣಿ” ಪುಟದಲ್ಲಿ ನಿಮ್ಮ ಫೋಟೋ ಐಡಿ ಪ್ರೂಫ್‌ನಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನೀವು ಯಾವುದೇ ಕೊಮೊರ್ಬಿಡಿಟಿಗಳನ್ನು ಹೊಂದಿದ್ದೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ. ‘ಹೌದು’ ಅಥವಾ ‘ಇಲ್ಲ’ ಕ್ಲಿಕ್ ಮಾಡುವ ಮೂಲಕ ಇದಕ್ಕೆ ಉತ್ತರಿಸಬಹುದು

6) ನೋಂದಣಿಗಾಗಿ ವಿವರಗಳನ್ನು ನಮೂದಿಸಿದ ನಂತರ, ಕೆಳಗಿನ ಬಲಭಾಗದಲ್ಲಿರುವ “ರಿಜಿಸ್ಟರ್” ಬಟನ್ ಕ್ಲಿಕ್ ಮಾಡಿ

7) ಇದರ ನಂತರ, ಯಶಸ್ವಿ ನೋಂದಣಿಯ ಕುರಿತು ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ. ನೋಂದಣಿ ಮುಗಿದ ನಂತರ, ನಿಮಗೆ “ಖಾತೆ ವಿವರಗಳು” ತೋರಿಸಲಾಗುತ್ತದೆ.

ಕಳೆದ ಒಂದು ವಾರದಲ್ಲಿ ಕೇರಳ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಉಚಿತ ವ್ಯಾಕ್ಸಿನೇಷನ್ ಘೋಷಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News