ವೈರಲ್ ವಿಡಿಯೋ: ಸಾಮಾಜಿಕ ಮಾಧ್ಯಮಗಳ ಪ್ರಪಂಚವು ತಮಾಷೆಯ ವೀಡಿಯೊಗಳಿಂದ ತುಂಬಿದೆ. ಪ್ರತಿದಿನ ಇಲ್ಲಿ ಏನಾದರೂ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವ್ಯಕ್ತಿಯೊಬ್ಬನ ವಿಡಿಯೋವನ್ನು ವಿವಿಧ ವೇದಿಕೆಗಳಲ್ಲಿ ಹೆಚ್ಚು ನೋಡಲಾಗುತ್ತಿದೆ. ಇದರಲ್ಲಿ ವ್ಯಕ್ತಿಯು ಹೇಳುತ್ತಿರುವ ವಿಷಯಗಳನ್ನೂ ಕೇಳಿದರೆ ಯಾರೇ ಆದರೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯನ್ನು ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯು, ಮೇಕ್ಅಪ್ ಹೊಂದಿರುವ ಹುಡುಗಿ ಅಗತ್ಯವಿದೆ, ಅವರು ಕೆಂಪು ಲಿಪ್ಸ್ಟಿಕ್ ಮತ್ತು ಕಾಜಲ್ ಅನ್ನು ಹಾಕಿರಬೇಕು. ಜೀನ್ಸ್ ಧರಿಸಿರಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ಇಷ್ಟಕ್ಕೆ ನಿಲ್ಲಿಸದ ಈ ವ್ಯಕ್ತಿ ಮುಂದೆ ಏನು ಹೇಳಿದ್ದಾನೆ ಎಂದು ಕೇಳಿದರೆ ನಿಮಗೆ ನಗು ತಡೆಯಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ- Viral Video: ಲ್ಯಾಪ್‌ಟಾಪ್‌, ಫೋನ್‌ನಲ್ಲೇ ವಧು ಬ್ಯುಸಿ; ನೋಡುತ್ತಾ ಕುಳಿತ ವರ..!


ಈತನಿಗೆ ತೆಳ್ಳಗಿರುವ ಹುಡುಗಿ ಬೇಡವಂತೆ. ದಪ್ಪಗಿರುವ ಹುಡುಗಿಯೇ ಬೇಕಂತೆ. ಕಾರಣ ಏನೆಂದು ಕೇಳಿದರೆ ತೆಳ್ಳಗಿರುವ ಹುಡುಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋ ಜಾರ್ಖಂಡ್‌ನದ್ದು ಎಂದು ತೋರುತ್ತದೆ. ಹುಡುಗಿ ಎಲ್ಲಿರಬೇಕು ಎಂದು ಆತನನ್ನು ಕೇಳಿದಾಗ, ಆತ  ಹುಡುಗಿ ರಾಂಚಿಯವರಾಗಿರಬೇಕು ಅಥವಾ ಮುಂಬೈನವರಾದರೂ ಪರವಾಗಿಲ್ಲ ಎಂದಿದ್ದಾನೆ. ಹುಡುಗಿಯ ಹೆಸರು ರವೀನಾ ಟಂಡನ್ ನಂತೆ ಇರಬೇಕಂತೆ... 


Viral Video: ಫ್ಲೈಓವರ್ ಕೆಳಗೆ ಸಿಲುಕಿಕೊಂಡ ಏರ್ ಇಂಡಿಯಾ ವಿಮಾನ..!


ವೀಡಿಯೊವನ್ನು (Viral Video) ಸಾಮಾಜಿಕ ಮಾಧ್ಯಮ ವೇದಿಕೆ Instagram ಪುಟದಲ್ಲಿ bhutni_ke_memes ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಕೂಡ ವ್ಯಕ್ತಿಯ ಆಯ್ಕೆಯ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಚಿಕ್ಕಪ್ಪನ ಕಲ್ಪನೆಯು ಅದ್ಭುತವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಒಬ್ಬ ಬಳಕೆದಾರನು ತನ್ನ ಸ್ನೇಹಿತನನ್ನು ಟ್ಯಾಗ್ ಮಾಡಿ ಅವನ ಆಲೋಚನೆಗಳು ನಿಮ್ಮಂತೆಯೇ ಇರುತ್ತವೆ ಎಂದು ಬರೆದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.