ನವದೆಹಲಿ: ಏರ್ ಇಂಡಿಯಾ ವಿಮಾನವೊಂದು ಫ್ಲೈಓವರ್ ಕೆಳಗಡೆ ಸಿಲುಕೊಂಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ದೆಹಲಿ– ಗುರುಗ್ರಾಮ್ ಹೆದ್ದಾರಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Indira Gandhi International Airport)ದ ಬಳಿ ಇರುವ ಸೇತುವೆ ಕೆಳಗೆ ಈ ವಿಮಾನ ಸಿಲುಕಿಕೊಂಡಿದೆ ಎಂದು ವರದಿಯಾಗಿದೆ.
ಸುಮಾರು 16 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಏರ್ ಇಂಡಿಯಾ ವಿಮಾನ(Air India Plane)ವು ರಸ್ತೆ ಬದಿಯಲ್ಲಿ ಸಿಲುಕೊಂಡಿರುವುದನ್ನು ಕಾಣಬಹುದು. ಇನ್ನೊಂದು ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು WhatsApp ನಂತಹ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್ ಮಾಡಲಾಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಮಾನವು ಹೇಗೆ ಸೇತುವೆ ಕೆಳಗಡೆ ಸಿಲುಕಿಕೊಂಡಿದೆ ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
#WATCH An @airindiain plane ✈️ (not in service) got stuck under foot over bridge. Can anyone confirm the date and location?
The competition starts now👇 pic.twitter.com/pukB0VmsW3— Ashoke Raj (@Ashoke_Raj) October 3, 2021
ಇದನ್ನೂ ಓದಿ: Mumbai Drug Case Updates: ಆರ್ಯನ್ ಖಾನ್ ಸೇರಿದಂತೆ 3 ಆರೋಪಿಗಳು ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ
ಫ್ಲೈಓವರ್ ಕೆಳಗೆ ಸಿಲುಕಿಕೊಂಡಿರುವ ವಿಮಾನದ ದೃಶ್ಯವು ವೈರಲ್(Viral Video) ಆಗುತ್ತಿದ್ದಂತೆಯೇ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆಯು ಮಾಹಿತಿ ನೀಡಿದೆ. ಅಶೋಕ್ ರಾಜ್ ಎಂಬುವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸೇವೆಯಲ್ಲಿಲ್ಲದ ಏರ್ ಇಂಡಿಯಾ ವಿಮಾನವೊಂದು ಸೇತುವೆಯ ಕೆಳಗೆ ಸಿಲುಕಿಕೊಂಡಿದೆ. ಯಾರಾದರೂ ಇದು ಯಾವ ಸ್ಥಳದಲ್ಲಿ ಮತ್ತು ಯಾವಾಗ ಸಿಲುಕಿಕೊಂಡಿದೆ ಎಂಬುದನ್ನು ತಿಳಿಸುತ್ತೀರಾ..?’ ಎಂದು ಪ್ರಶ್ನಿಸಿದ್ದಾರೆ. ಈ ವಿಮಾನದ ನೋಂದಣಿ ರದ್ದುಗೊಳಿಸಿ ಮಾರಾಟ ಮಾಡಲಾಗಿದೆ ಎಂದು ಏರ್ಲೈನ್ ಹೇಳಿದೆ. ಇದರ ಖರೀದಿದಾರರು ಶನಿವಾರ ರಾತ್ರಿ ಸಾಗಿಸುತ್ತಿದ್ದ ವೇಳೆ ಅದು ಮೇಲ್ಸೇತುವೆಯ ಕೆಳಗೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದ ಶೇ 70 ರಷ್ಟು ವಯಸ್ಕರಿಗೆ ಮೊದಲ COVID-19 ಲಸಿಕೆ ಪೂರ್ಣ
ಈ ವಿಮಾನವನ್ನು ಮಾರಾಟ ಮಾಡಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲವೆಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನವು ದೆಹಲಿ ವಿಮಾನ ನಿಲ್ದಾಣ(Delhi Airport)ಕ್ಕೆ ಸೇರಿದ್ದಲ್ಲ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ‘ರೆಕ್ಕೆಗಳಿಲ್ಲದ ವಿಮಾನವನ್ನು ಸಾಗಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹದು. ಹೀಗಾಗಿ ಇದು ಸ್ಕ್ರ್ಯಾಪ್ ಮಾಡಿದ ವಿಮಾನವೆಂದು ತೋರುತ್ತದೆ. ಇದನ್ನು ಸಾಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಅದು ಸೇತುವೆ ಕೆಳಗಡೆ ಸಿಲುಕಿರಬಹುದು’ ಎಂದು ಅಧಿಕಾರಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.