Gadchiroli Naxal Encounter: ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಪೊಲೀಸರಿಗೆ ಭಾರಿ ಯಶಸ್ಸು, ಎನ್ಕೌಂಟರ್ ನಲ್ಲಿ ಐವರು ನಕ್ಸಲರ ಹತ್ಯೆ
Gadchiroli Naxal Encounter - ಖುರ್ಖೇಡಾ ಪ್ರದೇಶದ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ನಕ್ಸಲರು ಪೊಲೀಸ್ ಸಿಬ್ಬಂದಿಯೊಂದಿಗೆ ಮುಖಾಮುಖಿಯಾಗಿದ್ದಾರೆ ಎಂದು ನಕ್ಸಲ್ ಶ್ರೇಣಿಯ ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇದರಲ್ಲಿ ಐವರು ನಕ್ಸಲರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಡಚಿರೌಲಿ: Gadchiroli Naxal Encounter - ಮಹಾರಾಷ್ಟ್ರದ ಗಡಚಿರೌಲಿ ಜಿಲ್ಲೆಯ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಐದು ನಕ್ಸಲರನ್ನು ಮಟ್ಟಹಾಕಿದ್ದಾರೆ. ಈ ಪ್ರದೇಶವು ನಕ್ಸಲೈಟ್ ಪೀಡಿತವಾಗಿದೆ.
Narayanpur IED Blast - IED ಬ್ಲಾಸ್ಟ್ ಮೂಲಕ ಬಸ್ ಸ್ಫೋಟಿಸಿದ ನಕ್ಸಲರು, ಮೂವರು ಯೋಧರು ಹುತಾತ್ಮ
ಈ ಕುರಿತು ಮಾಹಿತಿ ನೀಡಿರುವ ನಕ್ಸಲ್ ಶ್ರೇಣಿಯ ಡಿಐಜಿ ಸಂದೀಪ್ ಪಾಟೀಲ್, ಖುರ್ಖೇಡಾ ಪ್ರದೇಶದ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ನಕ್ಸಲರು ಪೊಲೀಸ್ ಸಿಬ್ಬಂದಿಯೊಂದಿಗೆ ಮುಖಾಮುಖಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ ಐವರು ನಕ್ಸಲರನ್ನು ಪೊಲೀಸರು ಹತ್ಯೆಗೈದಿದ್ದಾರೆ ಎಂದು ಹೇಳಿದ್ದರೆ. ಇದು ಈ ಪ್ರದೇಶದ ಪೊಲೀಸರ ಪ್ರಮುಖ ಸಾಧನೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ-ಮಹಾರಾಷ್ಟ್ರದಲ್ಲಿ ಮಾವೋವಾದಿಗಳ ಅಟ್ಟಹಾಸಕ್ಕೆ 15 ಭದ್ರತಾ ಸಿಬ್ಬಂದಿ ಸಾವು
ಇದಕ್ಕೂ ಮೊದಲು ಮಾರ್ಚ್ 24 ರಂದು ನೆರೆ ಛತ್ತಿಸ್ಗಡ್ ದ ನಾರಾಯಣಪುರ ಎಂಬಲ್ಲಿ ನಕ್ಷಲರು ಭದ್ರತಾ ಪಡೆಗಳ ಬಸ್ ಮೇಲೆ IED ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಜವಾನರು ಹುತಾತ್ಮರಾಗಿದ್ದರು. ಇಲ್ಲಿ ನಕ್ಸಲರು ಭದ್ರತಾ ಪಡೆಗಳಿಂದ ತುಂಬಿದ್ದ ಬಸ್ ಅನ್ನು IED ಬ್ಲಾಸ್ಟ್ ಮಾಡುವ ಮೂಲಕ ಉರುಳಿಸಿದ್ದರು.
ಇದನ್ನೂ ಓದಿ - ಛತ್ತೀಸ್ ಗಡ್: ನಕ್ಸಲರ ದಾಳಿಗೆ ಓರ್ವ ಸಿಆರ್ಪಿಎಫ್ ಸೈನಿಕ ಸಾವು, ಐವರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.