ಕೊಲ್ಕತ್ತಾ: ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅದಿರ್ ರಂಜನ್ ಚೌಧರಿ, ಗಾಂಧಿ-ನೆಹರೂ ಕುಟುಂಬಕ್ಕೆ ಬ್ರ್ಯಾಂಡ್ ಮೌಲ್ಯವಿದೆ, ಆದ್ದರಿಂದ ಹೊರಗಿನ ಯಾವುದೇ ನಾಯಕನಿಗೆ ಪಕ್ಷವನ್ನು ನಡೆಸುವುದು ಕಷ್ಟ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ನ ಪುನರುಜ್ಜೀವನವು ಹೆಚ್ಚಾಗಿ ಸಿದ್ಧಾಂತಗಳ ಕೊರತೆಯಿರುವ ಪ್ರಾದೇಶಿಕ ಪಕ್ಷಗಳ ದುರ್ಬಲತೆಯನ್ನು ಅವಲಂಬಿಸಿದೆ. ಇದರಿಂದ ದೇಶವು ದ್ವಿಧ್ರುವಿಕರಣ ರಾಜಕೀಯದತ್ತ ಸಾಗುತ್ತದೆ. ಅಂತಹ ಸಂದರ್ಭದಲ್ಲಿ ದೇಶಾದ್ಯಂತ ಉಪಸ್ಥಿತಿ ಇರುವ ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿ ಪಕ್ಷವನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.


ಪ್ರಾದೇಶಿಕ ಪಕ್ಷಗಳು ಕಾರ್ಯನಿರ್ವಹಿಸುತ್ತಿರುವ ರೀತಿಯಿಂದಾಗಿ ಅವು ಮುಂದಿನ ದಿನಗಳಲ್ಲಿ  ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ. ಆಗ ರಾಷ್ಟ್ರವು ದ್ವಿಧ್ರುವಿಕರಣ ರಾಜಕೀಯದತ್ತ ಸಾಗಲಿದೆ.ದ್ವಿಧ್ರುವಿ ರಾಜಕೀಯ ಇದ್ದಾಗ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆದ್ದರಿಂದ, ಕಾಂಗ್ರೆಸ್ ಭವಿಷ್ಯ ಉಜ್ವಲವಾಗಿದೆ ಎಂದು ಚೌಧರಿ ಭವಿಷ್ಯ ನುಡಿದರು.ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಪ್ರೇರಣೆ ಇಲ್ಲ ಮತ್ತು ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷಕ್ಕೆ ಸಾಮೂಹಿಕ ಬೆಂಬಲವಿದೆ ಎಂದು ತಿಳಿಸಿದರು.


ಗಾಂಧಿ ಕುಟುಂಬದ ಹೊರಗಿನ ಯಾರಾದರೂ ಕಾಂಗ್ರೆಸ್ ಪಕ್ಷವನ್ನು ನಡೆಸುವುದು ನಿಜಕ್ಕೂ ಕಷ್ಟಕರವಾಗಿರುತ್ತದೆ.ರಾಜಕೀಯದಲ್ಲಿಯೂ ಬ್ರಾಂಡ್ ಮೌಲ್ಯವಿದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾ ಇಲ್ಲದೆ ಪ್ರಸ್ತುತ ಬಿಜೆಪಿಯನ್ನು ನೋಡಿದರೆ ಅದು ಸುಗಮವಾಗಿ ಕಾರ್ಯನಿರ್ವಹಿಸುತ್ತದೆಯೇ? ಉತ್ತರ. ಇಲ್ಲ ಎನ್ನಬಹುದು. ಆದರೆ ರೀತಿಯಾಗಿ ನಮ್ಮ ಕಾಂಗ್ರೆಸ್ ಪಕ್ಷದಲ್ಲೂ ಗಾಂಧಿ ಕುಟುಂಬದ ಬ್ರಾಂಡ್ ಮೌಲ್ಯವಿದೆ. ಅದೇನು ತಪ್ಪಲ್ಲ. ನಮ್ಮ ಪಕ್ಷದಲ್ಲಿ ಬೇರೆ ಯಾರಿಗೂ ಗಾಂಧಿ ಕುಟುಂಬ ಹೊಂದಿರುವ ವರ್ಚಸ್ಸು ಇಲ್ಲ. ಇದು ವಾಸ್ತವ" ಎಂದು ಅವರು ಹೇಳಿದರು.