ನವದೆಹಲಿ: ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಅಕ್ಟೋಬರ್ 31 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಟೇಲ್ ಅವರ ಜಗತ್ತಿನ ಅತಿ ಎತ್ತರದ  ಪ್ರತಿಮೆಯನ್ನು ಉದ್ಘಾಟಿಸಿದ್ದರು.


COMMERCIAL BREAK
SCROLL TO CONTINUE READING

ಈಗ ಪಟೇಲ್ ಮೂರ್ತಿ ನಿರ್ಮಾಣದಲ್ಲಿ ಉಳಿದಿರುವ ವಸ್ತುಗಳಲ್ಲಿ ರಾಜಸ್ತಾನದ ಸಿಕರ್ ಬಳಿ 'ಗೇಟ್ ಆಫ್ ಯೂನಿಟಿ' ನಿರ್ಮಿಸಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.46 ಅಡಿ ಗೇಟ್ ಎತ್ತರದಲ್ಲಿರುವ ಈ ಗೇಟ್ ನ್ನು ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಈಗಾಗಲೇ ಗುಂಗರಾ ರಸ್ತೆಯ ಬಳಿ ಗೇಟ್ ನಿರ್ಮಾಣಕ್ಕಾಗಿ ಪಿಡಬ್ಲ್ಯೂಡಿ  ಅನುಮತಿ ನೀಡಿದೆ ಎಂದು ವರದಿಯಾಗಿದೆ.


ಪ್ರತಿಮೆಯ ನಿರ್ಮಾಣಕ್ಕಾಗಿ ಒಟ್ಟು 1.5 ಲಕ್ಷದಷ್ಟು ಕೆಂಪು ಕಲ್ಲುಗಳನ್ನು ಯೂನಿಟಿ ಪ್ರತಿಮೆಯ ನಿರ್ಮಾಣಕ್ಕೆ ತರಲಾಗಿತ್ತು ಈಗ ಅಲ್ಲಿ ಉಳಿದಿರುವ ವಸ್ತುಗಳಲ್ಲಿ ಸಿಕರ್  ಗೇಟ್ ನಿರ್ಮಿಸಲು ಬಳಸಲಾಗುವುದು ಎಂದು ತಿಳಿದು ಬಂದಿದೆ.