ನವದೆಹಲಿ: ಪ್ರತಿ ವರ್ಷ ಆಗಸ್ಟ್ 29 ರಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ತಂಡದ ಮಾಜಿ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಅವರು ಮೇಜರ್ ಧ್ಯಾಂಚಂದ್ ಅವರನ್ನು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಸಾಧನೆಗಳನ್ನು ಹೊಗಳಿರುವ ಗೌತಮ್ ಗಂಭೀರ್, ಇವರಿಗಿಂತ ದೊಡ್ಡ ಆಟಗಾರ ಇದುವರೆಗೆ ಹುಟ್ಟಿಲ್ಲ ಹಾಗೂ ಮುಂದೆಯೂ ಇಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ಭಾರತದ ಇತಿಹಾಸದಲ್ಲಿ, ಮೇಜರ್ ಧ್ಯಾನ್‌ಚಂದ್‌ಗಿಂತ ದೊಡ್ಡ ಆಟಗಾರ ಹುಟ್ಟಿಲ್ಲ ಅಥವಾ ಹುಟ್ಟುವುದು ಇಲ್ಲ. ಅವರು ದೇಶಕ್ಕೆ ಅನೇಕ ಚಿನ್ನದ ಪದಕಗಳನ್ನುತಂದು ಕೊಟ್ಟಿದ್ದಾರೆ, ಅದೂ ಹಾಕಿ ಕ್ರೀಡೆ ಅಷ್ಟೊಂದು ಜನಪ್ರೀಯವಲ್ಲದ ಕಾಲದಲ್ಲಿ. ಮೇಜರ್ ಧ್ಯಾನ್‌ಚಂದ್ ಅವರಿಗೆ ಶೀಘ್ರದಲ್ಲಿಯೇ ಭಾರತ ರತ್ನ ಪ್ರಶಸ್ತಿ ಲಭಿಸಲು ಎಂದು ನಾನು ಆಶಿಸುತ್ತೇನೆ. ಇದರಿಂದ ಇಡೀ ದೇಶವೇ ಸಂತಸ ವ್ಯಕ್ತಪಡಿಸಲಿದೆ" ಎಂದು ಗಂಭೀರ್ ಹೇಳಿದ್ದಾರೆ.


ಹಾಕಿ ಮಾತ್ರಿಕ ಧ್ಯಾನ್ ಚಂದ್
ಮೇಜರ್ ಧ್ಯಾನ್‌ಚಂದ್ ಅವರನ್ನು ಹಾಕಿಯ ಮಾಂತ್ರಿಕ ಎಂದು ಕರೆಯಲು  ಮೈದಾನದಲ್ಲಿ ಅವರು ತೋರಿದ  ಸಾಧನೆ. ಅವರು 1928, 1932 ಮತ್ತು 1936ರಲ್ಲಿ ಒಟ್ಟು ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಆಟಗಾರನ ಯಶಸ್ಸಿನ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಧ್ಯಾಂಚಂದ್ ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ. ಭಾರತ ಸರ್ಕಾರ ಧ್ಯಾನ್‌ಚಂದ್ ಅವರನ್ನು 1956 ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣದೊಂದಿಗೆ ಗೌರವಿಸಿದೆ. ಆದ್ದರಿಂದ ಅವರ ಜನ್ಮದಿನ ಅಂದರೆ ಆಗಸ್ಟ್ 29 ಅನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತದೆ.


ಮೇಜರ್ ಧ್ಯಾನ್‌ಚಂದ್ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಲಭಿಸಿದೆ. 1956 ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಧ್ಯಾನ್‌ಚಂದ್ ಅವರು ಹಾಕಿಯಲ್ಲಿ ಒಂದರ ನಂತರ ಒಂದು ದಾಖಲೆಯನ್ನು ರಚಿಸಿದ್ದಾರೆ, ಇಂದಿಗೂ ಯಾವುದೇ ಆಟಗಾರ ಅವರ ದಾಖಲೆಯನ್ನು ತಲುಪಿಲ್ಲ. ಈ ಮಹಾನ್ ಆಟಗಾರನ ನೆನಪಿಗಾಗಿ ಇಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ.