ನವದೆಹಲಿ: ಕೋವಿಡ್ -19 ಏಕಾಏಕಿ ಹಿನ್ನಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಕೇಂದ್ರ ಸರ್ಕಾರ ಈ ವರ್ಷ ಡಿಸೆಂಬರ್ 31 ರವರೆಗೆ ಸಾರಿಗೆ ನಿಯಮಗಳಲ್ಲಿ ಸಡಿಲಿಕೆ ನೀಡಿತ್ತು. ಈ ಕಾರಣಕ್ಕಾಗಿ 2020 ರ ಮಾರ್ಚ್‌ನಿಂದ ಅಮಾನ್ಯ ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ಹೊಂದಿರದ ವಾಹನಗಳ ಮೇಲೆ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಡಿಸೆಂಬರ್ 31 ರಿಂದ ಅಕ್ರಮ ಪರವಾನಗಿ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ನಿಮ್ಮ ಚಾಲನಾ ಪರವಾನಗಿ (Driving Licence) ಆರ್‌ಸಿಯ ಮಾನ್ಯತೆ ಅವಧಿ ಮೀರಿದ್ದರೆ ಹೊಸ ವರ್ಷಕ್ಕಿಂತ ಮೊದಲು ಅವುಗಳನ್ನು ನವೀಕರಿಸಿ, ಇಲ್ಲದಿದ್ದರೆ ವಾಹನವನ್ನು ಚಾಲನೆ ಮಾಡುವವರ ಸಮಸ್ಯೆಗಳು ಹೆಚ್ಚಾಗಬಹುದು.


COMMERCIAL BREAK
SCROLL TO CONTINUE READING

ಪರವಾನಗಿ ಇಲ್ಲದವರಿಗೆ 5 ಸಾವಿರ ದಂಡ ವಿಧಿಸಲಾಗುತ್ತದೆ:
ಹೊಸ ಮೋಟಾರು ವಾಹನ ನಿಯಮ (Motor vehicle Act)ಗಳ ಪ್ರಕಾರ ಕಾರು ಅಥವಾ ದ್ವಿಚಕ್ರ ವಾಹನ ಚಾಲಕನಿಗೆ ಮಾನ್ಯ ಪರವಾನಗಿ ಇಲ್ಲದಿದ್ದರೆ ಅಥವಾ ಅವರ ಡಿಎಲ್ ಅವಧಿ ಮುಗಿದಿದ್ದು ಅದನ್ನು ನವೀಕರಿಸದಿದ್ದರೆ 5,000 ರೂ ದಂಡವನ್ನು ಪಾವತಿಸಬೇಕಾಗುತ್ತದೆ. 


ಸಾರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡಿಸೆಂಬರ್ 31 ರ ನಂತರ ಸಂಚಾರ ನಿಯಮಗಳಲ್ಲಿ ಸಡಿಲಿಕೆಯನ್ನು ವಿಸ್ತರಿಸದಿದ್ದರೆ ಚಾಲಕರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ: 4 ವರ್ಷದ ಮಗುವಿಗೂ ಹೆಲ್ಮೆಟ್ ಕಡ್ಡಾಯ, ಇಲ್ಲದಿದ್ರೆ ರದ್ದಾಗುತ್ತೆ ಲೈಸೆನ್ಸ್


ಡಿಎಲ್ ಮತ್ತು ಆರ್‌ಸಿಯನ್ನು ಈ ರೀತಿ ನವೀಕರಿಸಿ: 
ನಿಮ್ಮ ಡಿಎಲ್ ಮತ್ತು ಆರ್‌ಸಿಯನ್ನು ನವೀಕರಿಸಲು ನೀವು ಬಯಸಿದರೆ, ಇದಕ್ಕಾಗಿ ನೀವು ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ parivahan.gov.in ಗೆ ಭೇಟಿ ನೀಡಬೇಕಾಗುತ್ತದೆ. ಇದರ ನಂತರ, ನೀವು ಸೈಟ್ನಲ್ಲಿ ಚಾಲನಾ ಪರವಾನಗಿ ಸೇವೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದನ್ನು ಕ್ಲಿಕ್ ಮಾಡಿದಾಗ ನಿಮಗೆ ಡಿಎಲ್ ಸಂಖ್ಯೆಯ ವಿವರಗಳನ್ನು ಕೇಳಲಾಗುತ್ತದೆ. ಅದನ್ನು ಭರ್ತಿ ಮಾಡಿದ ನಂತರ ನೀವು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಮತ್ತು ನಂತರ ಹತ್ತಿರದ ಆರ್‌ಟಿಒ (RTO) ಕಚೇರಿಗೆ ಹೋಗಿ ಸ್ಲಾಟ್ ಕಾಯ್ದಿರಿಸಲು ಪಾವತಿಸಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಆರ್‌ಟಿಒ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇದರ ನಂತರ ನಿಮ್ಮ ಪರವಾನಗಿಯನ್ನು ನವೀಕರಿಸಲಾಗುತ್ತದೆ. 


ಇದನ್ನೂ ಓದಿ: ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.