ನವದೆಹಲಿ: ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್(Ghaziabad) 2ನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ರಿಟಿಷ್ ಕಂಪನಿ ಹೌಸ್ ಫ್ರೆಶ್ ಸಿದ್ಧಪಡಿಸಿದ ವರದಿಯ ಪ್ರಕಾರ 2020ರಲ್ಲಿ ಗಾಜಿಯಾಬಾದ್ ಪ್ರಪಂಚಲ್ಲಿಯೇ 2ನೇ ಅತ್ಯಂತ ಕಲುಷಿತ ನಗರವಾಗಿ ಆಯ್ಕೆಯಾಗಿದೆ. ಗಾಜಿಯಾಬಾದ್ 106.6µg/m3 ನಲ್ಲಿ 2.5 ಕಣಗಳ (PM) ಸರಾಸರಿ ವಾಯು ಗುಣಮಟ್ಟದ ಸೂಚಿಯನ್ನು (AQI) ವರದಿ ಮಾಡಿದೆ ಅಂತಾ ವರದಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಹೋಟಾನ್(Hotan)ನಗರವು 110.2µg/m3 ನ PM 2.5 ನೊಂದಿಗೆ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿಗೆ ಗುರಿಯಾಗಿದೆ. ಹೊಟಾನ್‌ನಲ್ಲಿನ ವಾಯು ಮಾಲಿನ್ಯವು ಮರಳಿನ ಬಿರುಗಾಳಿಯ ಕಾರಣದಿಂದಾಗಿದೆ ಅಂತಾ ವರದಿ ತಿಳಿಸಿದೆ. ಇದು ತಕ್ಲಿಮಾಕನ್ ಮರುಭೂಮಿಗೆ ಹತ್ತಿರದಲ್ಲಿದ್ದು, ಇದು ವಿಶ್ವದ ಅತಿದೊಡ್ಡ ಮರಳು ಮರುಭೂಮಿಯಾಗಿದೆ.


ಇದನ್ನೂ ಓದಿ: Indian Railways: ನಿಮ್ಮ ರೈಲ್ವೆ ಟಿಕೆಟಿನಲ್ಲಿ ಬೇರೆ ವ್ಯಕ್ತಿಯೂ ಪ್ರಯಾಣಿಸಬಹುದೇ! ರೈಲ್ವೆಯ ಈ ಸೌಲಭ್ಯ ತಿಳಿಯಿರಿ


ಉತ್ತರಪ್ರದೇಶ(Uttar Pradesh)ದ ‘ಗೇಟ್‌ವೇ’ದಲ್ಲಿನ ಅತಿಹೆಚ್ಚಿನ ಟ್ರಾಫಿಕ್ ಸಮಸ್ಯೆಯು ಗಾಜಿಯಾಬಾದ್‌ನಲ್ಲಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗಲು ಕಾರಣವಾಗಿದೆ. PM2.5 ಅನ್ನು ಗಾಳಿಯಲ್ಲಿನ ಸೂಕ್ಷ್ಮ ಕಣಗಳ ವಸ್ತು ಎಂದು ವ್ಯಾಖ್ಯಾನಿಸಲಾಗಿದ್ದು, ಅದು ಎರಡೂವರೆ ಮೈಕ್ರಾನ್‌ಗಳು ಅಥವಾ ಕಡಿಮೆ ಅಗಲವಾಗಿರುತ್ತದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ಮಾಣಿಕ್ ಗಂಜ್ 80.2µg/m3 ನ PM2.5 ನೊಂದಿಗೆ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ‘ವಿಶ್ವದಾದ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದ ಕೈಗಾರಿಕಾ ವಲಯವು ವರ್ಷಕ್ಕೆ ಶೇ.13ರ ದರದಲ್ಲಿ ಬೆಳೆಯುತ್ತಿದೆ. 165 ಮಿಲಿಯನ್ ಜನರಿರುವ ಈ ದೇಶದಲ್ಲಿ ವಾಯು ಮಾಲಿನ್ಯಕ್ಕೆ ವಾಹನಗಳು ಮತ್ತು ಕೈಗಾರಿಕಾ ಹೊರಸೂಸುವಿಕೆಗಳು ಪ್ರಮುಖ ಕೊಡುಗೆ ನೀಡುತ್ತಿವೆ’ ಎಂದು ಅಧ್ಯಯನದ ವರದಿ ಉಲ್ಲೇಖಿಸಿದೆ. 


ಪ್ರಪಂಚದ 50 ಅತ್ಯಂತ ಮಾಲಿನ್ಯ ನಗರಗ(World Most Polluted City)ಳ ಪೈಕಿ ಬಾಂಗ್ಲಾದೇಶ, ಚೀನಾ, ಭಾರತ ಮತ್ತು ಪಾಕಿಸ್ತಾನ 49ರಷ್ಟು ನಗರಗಳನ್ನು ಕೊಡುಗೆ ನೀಡುತ್ತವೆ. ವರದಿಯ ಪ್ರಕಾರ 2020ರಲ್ಲಿ ಬಾಂಗ್ಲಾದೇಶವು ವಿಶ್ವದಾದ್ಯಂತ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಪಾಕಿಸ್ತಾನ, ಭಾರತ ಮತ್ತು ಮಂಗೋಲಿಯಾ ನಂತರದ ಸ್ಥಾನದಲ್ಲಿವೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Independence Day 2021: ಈ ಸ್ವಾತಂತ್ರ್ಯ ದಿನದಂದು, ಪ್ಲಾಸ್ಟಿಕ್ ಧ್ವಜಕ್ಕೆ ಹೇಳಿ 'NO'


 ಈ ಮಧ್ಯೆ ಆಸ್ಟ್ರೇಲಿಯಾದ ಜಡ್‌ಬರಿ ನಗರವು ಸ್ವಚ್ಛವಾದ ಗಾಳಿ(Quality Air) ಹೊಂದಿರುವ ನಗರಗಳ ಪಟ್ಟಿಯಲ್ಲಿ PM2.5 ಮಟ್ಟ 2.4µg/m3 ನೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕದ ಹವಾಯಿಯಲ್ಲಿರುವ ಕೈಲುವಾ ಕೋನಾ ಮತ್ತು ಫಿನ್ ಲ್ಯಾಂಡ್ ನ ಮುಯೋನಿಯೊ ಕ್ರಮವಾಗಿ 2.6µg/m3 ಮತ್ತು 2.8µg/m3 ಪಿಎಮ್ 2.5 ಸಾಂದ್ರತೆಗಳೊಂದಿಗೆ ಶುದ್ಧ ಗಾಳಿಯೊಂದಿಗೆ 2020 ರ ಅಗ್ರ ನಗರಗಳಾಗಿ ಸ್ಥಾನ ಪಡೆದುಕೊಂಡಿವೆ.


ಸ್ವಿಸ್ ವಾಯು ಗುಣಮಟ್ಟದ ತಜ್ಞ IQAir ಅವರ ಇನ್ನೊಂದು ವರದಿಯ ಪ್ರಕಾರ ಭಾರತ ಅತಿಹೆಚ್ಚಿನ ಕಲುಷಿತ ನಗರಗಳನ್ನು ಹೊಂದಿದೆ ಎಂದು ತಿಳಿಸಿದೆ. ಬುಲಂದ್ ಶಹರ್, ಭಿವಂಡಿ, ನೋಯ್ಡಾ, ಗ್ರೇಟರ್ ನೋಯ್ಡಾ, ಕಾನ್ಪುರ, ಲಕ್ನೋ, ದೆಹಲಿ, ಫರೀದಾಬಾದ್ ಮತ್ತು ಮೀರತ್ ಸೇರಿದಂತೆ 22 ಭಾರತೀಯ ನಗರಗಳನ್ನು ಮೊದಲ 30 ಅತ್ಯಂತ ಕಲುಷಿತ ಪಟ್ಟಿಯಲ್ಲಿ ಇರಿಸಿದೆ. ದೇಶದಲ್ಲಿನ ವಾಯುಮಾಲಿನ್ಯವು ನಿಧಾನವಾಗಿ ಜನರನ್ನು ಮರಣ ಕೂಪಕ್ಕೆ ತಳ್ಳುತ್ತಿದೆ ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ