Indian Railways: ನಿಮ್ಮ ರೈಲ್ವೆ ಟಿಕೆಟಿನಲ್ಲಿ ಬೇರೆ ವ್ಯಕ್ತಿಯೂ ಪ್ರಯಾಣಿಸಬಹುದೇ! ರೈಲ್ವೆಯ ಈ ಸೌಲಭ್ಯ ತಿಳಿಯಿರಿ

Indian Railways: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ತಮ್ಮ ಟಿಕೆಟ್ ಅನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲು ಅವಕಾಶ ನೀಡುತ್ತದೆ. ಈ ಸೌಲಭ್ಯದ ಬಗ್ಗೆ ಇಲ್ಲಿದೆ ಮಾಹಿತಿ.

Written by - Yashaswini V | Last Updated : Aug 14, 2021, 10:50 AM IST
  • ರೈಲ್ವೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ
  • 24 ಗಂಟೆಗಳ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕು
  • ನಿಮ್ಮ ರೈಲು ಟಿಕೆಟ್ ಅನ್ನು ಬೇರೆಯವರಿಗೆ ಹೇಗೆ ವರ್ಗಾಯಿಸಬಹುದು? ತಿಳಿಯಿರಿ
Indian Railways: ನಿಮ್ಮ ರೈಲ್ವೆ ಟಿಕೆಟಿನಲ್ಲಿ ಬೇರೆ ವ್ಯಕ್ತಿಯೂ ಪ್ರಯಾಣಿಸಬಹುದೇ! ರೈಲ್ವೆಯ ಈ ಸೌಲಭ್ಯ ತಿಳಿಯಿರಿ title=
Here is How to Transfer Train Ticket

ನವದೆಹಲಿ: Indian Railways- ರೈಲ್ವೆ ಪ್ರಯಾಣಿಕರಿಗೆ ಒಂದು ಪ್ರಮುಖ ಸುದ್ದಿ ಇದೆ. ಈ ಸುದ್ದಿ ನಿಮಗೆ ಬಹಳ ಉಪಯುಕ್ತವಾಗಿದೆ. ನೀವು ರೈಲಿಗೆ ಕಾಯ್ದಿರಿಸಿದ ಮೀಸಲಾತಿ ಟಿಕೆಟ್ ಹೊಂದಿದ್ದರೆ, ಆದರೆ ಬೇರೆ ಯಾವುದಾದರೂ ಪ್ರಮುಖ ಕೆಲಸದ ಕಾರಣದಿಂದ ನೀವು ಪ್ರಯಾಣಿಸಲು ಸಾಧ್ಯವಾಗದಿದ್ದರೆ, ನೀವು ಈ ಟಿಕೆಟ್ ಅನ್ನು ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೆ ಅಥವಾ ಯಾವುದೇ ಇತರ ವ್ಯಕ್ತಿಗೆ ವರ್ಗಾಯಿಸಬಹುದು. ಅಥವಾ ನೀವು ಈ ಟಿಕೆಟ್‌ಗಳನ್ನು ಯಾವುದೇ ನಿರ್ಗತಿಕರಿಗೆ ನೀಡಬಹುದು. ಈ ವಿಶೇಷ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ.

ರೈಲ್ವೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ :
ರೈಲ್ವೆ (Railways) ಪ್ರಯಾಣಿಕರು ಆಗಾಗ್ಗೆ ಈ ಸಮಸ್ಯೆಯನ್ನು ಎದುರಿಸುತ್ತಾರೆ, ಟಿಕೆಟ್ ಬುಕ್ ಮಾಡಿದ ನಂತರ, ಅವರು ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಟಿಕೆಟ್ ರದ್ದುಗೊಳಿಸಬೇಕಾಗುತ್ತದೆ. ಒಂದೊಮ್ಮೆ ಅವರ ಬದಲಿಗೆ ಅವರ ಮನೆಯವರೋ ಅಥವಾ ಸಂಬಂಧಿಕರೋ ಪ್ರಯಾಣಿಸಬೇಕಾದ್ದಲ್ಲಿ ಆ ವ್ಯಕ್ತಿಗೆ ಹೊಸ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಂತರ ದೃಢೀಕರಿಸಿದ ಟಿಕೆಟ್ ಪಡೆಯುವುದು ತುಂಬಾ ಕಷ್ಟ. ಅದಕ್ಕಾಗಿಯೇ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಿದೆ. ಈ ಸೌಲಭ್ಯವು ಬಹಳ ಹಿಂದಿನಿಂದಲೂ ಇದ್ದರೂ, ಜನರಿಗೆ ಇದರ ಬಗ್ಗೆ ಬಹಳ ಕಡಿಮೆ ತಿಳಿದಿದೆ. ರೈಲ್ವೇಯ ಈ ಸೌಲಭ್ಯದ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯಿರಿ...

ಇದನ್ನೂ ಓದಿ- Indian Railways: ರೈಲು ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಟಿಕೆಟ್ ರದ್ದುಗೊಳಿಸದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿ

ನಿಮ್ಮ ಟಿಕೆಟ್ ಅನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಿ:
ಒಬ್ಬ ಪ್ರಯಾಣಿಕನು ತನ್ನ ಕುಟುಂಬದ ಇತರ ಸದಸ್ಯರಾದ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಗಂಡ ಮತ್ತು ಹೆಂಡತಿಯ ಹೆಸರಿನಲ್ಲಿ ತನ್ನ ದೃಢೀಕರಿಸಿದ ಟಿಕೆಟ್ (Confirm Ticket) ಅನ್ನು ವರ್ಗಾಯಿಸಬಹುದು. ಇದಕ್ಕಾಗಿ, ಪ್ರಯಾಣಿಕರು ರೈಲು ಹೊರಡುವ 24 ಗಂಟೆಗಳ ಮೊದಲು ವಿನಂತಿಯನ್ನು ನೀಡಬೇಕು. ಇದರ ನಂತರ, ಮೊದಲು ಯಾರ ಹೆಸರಿನಲ್ಲಿ ಟಿಕೆಟ್ ಪಡೆಯಲಾಗಿದೆಯೋ ಅವರ ಹೆಸರಿನ ಬದಲಿಗೆ ಹೊಸ ಪ್ರಯಾಣಿಕರ ಹೆಸರನ್ನು ಹಾಕಲಾಗುತ್ತದೆ.

24 ಗಂಟೆಗಳ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕು:
ಪ್ರಯಾಣಿಕನು ಸರ್ಕಾರಿ ನೌಕರನಾಗಿದ್ದರೆ ಮತ್ತು ಅವನ ಕರ್ತವ್ಯಕ್ಕೆ ಹೋಗುತ್ತಿದ್ದರೆ, ಅವನು ರೈಲು ಹೊರಡುವ 24 ಗಂಟೆಗಳ ಮೊದಲು ವಿನಂತಿಸಬಹುದು. ಈ ಟಿಕೆಟ್ ಅನ್ನು ವಿನಂತಿಸಿದ ವ್ಯಕ್ತಿಯ ಹೆಸರಿನಲ್ಲಿ ವರ್ಗಾಯಿಸಲಾಗುತ್ತದೆ. ಮದುವೆಗೆ ಹೋಗುವ ಜನರ ಮುಂದೆ ಇಂತಹ ಪರಿಸ್ಥಿತಿ ಬಂದರೆ, ಮದುವೆ ಮತ್ತು ಪಾರ್ಟಿಯನ್ನು ಆಯೋಜಿಸುವವರು ಅಗತ್ಯ ದಾಖಲೆಗಳೊಂದಿಗೆ 48 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು. ನೀವು ಆನ್‌ಲೈನ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯ NCC ಕೆಡೆಟ್‌ಗಳಿಗೂ ಲಭ್ಯವಿದೆ.

ಇದನ್ನೂ ಓದಿ- IRCTC iPay: ಐಆರ್‌ಸಿಟಿಸಿ ಪಾವತಿ ಗೇಟ್‌ವೇ ಬಳಸುವುದು ಹೇಗೆ? ಅದರ ಪ್ರಯೋಜನಗಳೇನು?

ಒಮ್ಮೆ ಮಾತ್ರ ಅವಕಾಶ ಪಡೆಯಿರಿ:
ಭಾರತೀಯ ರೈಲ್ವೇ (Indian Railways) ಟಿಕೆಟ್‌ಗಳ ವರ್ಗಾವಣೆಯನ್ನು ಒಮ್ಮೆ ಮಾತ್ರ ಮಾಡಬಹುದು ಎಂದು ಹೇಳುತ್ತದೆ. ಅಂದರೆ, ಪ್ರಯಾಣಿಕನು ತನ್ನ ಟಿಕೆಟ್ ಅನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿದ್ದರೆ, ಅವನು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂದರೆ, ಈಗ ಈ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸಲಾಗುವುದಿಲ್ಲ.

ನಿಮ್ಮ ರೈಲು ಟಿಕೆಟ್ ಅನ್ನು ಬೇರೆಯವರಿಗೆ ಹೇಗೆ ವರ್ಗಾಯಿಸಬಹುದು?
1. ಟಿಕೆಟ್ ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
2. ಹತ್ತಿರದ ರೈಲ್ವೇ ನಿಲ್ದಾಣದ ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಿ.
3. ಯಾರ ಹೆಸರಿನಲ್ಲಿ ಟಿಕೆಟ್ ವರ್ಗಾಯಿಸಬೇಕು ಆತನ ಗುರುತಿನ ಚೀಟಿಯನ್ನು ಆಧಾರ್ ಅಥವಾ ವೋಟರ್ ಗುರುತಿನ ಚೀಟಿಯನ್ನು ಹೊಂದಿರಬೇಕು.
4. ಕೌಂಟರ್ ಮೂಲಕ ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News