ನವದೆಹಲಿ: ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ  ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆ ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ಹಿನ್ನಲೆಯಲ್ಲಿ ಈಗ ಕಾಶ್ಮೀರದಲ್ಲಿ ಬೀಗಿ ಬಂದೋ ಬಸ್ತ್ ಮಾಡಲಾಗಿದೆ. ಶ್ರೀನಗರಕ್ಕೆ ಪ್ರಯಾಣ ಬೆಳೆಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದ ಆಜಾದ್ ' ಜಮ್ಮು ಮತ್ತು ಕಾಶ್ಮೀರದ ಜನರು ದುಃಖಿತರಾಗಿದ್ದಾರೆ, ಅವರ ದುಃಖದ ಒಂದು ಭಾಗವಾಗಿರಲು ನಾನು ಅವರೊಂದಿಗೆ ಹೋಗುತ್ತಿದ್ದೇನೆ. ಬಹುಶಃ ಮೊದಲ ಬಾರಿಗೆ, ಎಲ್ಲಾ 22 ಜಿಲ್ಲೆಗಳು ಕರ್ಫ್ಯೂ ಕಂಡಿವೆ. ನೀವು ಇದನ್ನು  ಈ ಮೊದಲು ಕೇಳಿದ್ದೀರಾ?" ಎಂದು ಹೇಳಿದರು.


ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶ್ರೀನಗರದ ಬೀದಿಗಳಲ್ಲಿ ಕಾಶ್ಮೀರಿಗಳೊಂದಿಗೆ ಮಾತನಾಡುತ್ತಿರುವುದು ಮಾಡುತ್ತಿರುವುದು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸುವ ಪ್ರಯತ್ನದ ಸೆಟ್ ಅಪ್ ನಂತಿದೆ ಎಂದು ಅವರು ಹೇಳಿದರು. ಇದನ್ನು ಯಾರಿಗಾದರೂ ದುಡ್ಡು ನೀಡಿ ಕೂಡ ಮಾಡಬಹುದು ಎಂದು ಗುಲಾಂ ನಬಿ ಅಜಾದ್ ಹೇಳಿದರು.


370 ವಿಧಿ ರದ್ದು ಮಾಡುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಸುಮಾರು 400 ಜನರನ್ನು ಬಂಧಿಸಲಾಗಿದೆ, ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.