ನವದೆಹಲಿ: ರಾಜ್ಯ ಅನುಧಾನಿತ ಕೇಂದ್ರ ಮೆಡಿಕಲ್ ಕಾಲೇಜುಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರದಂದು ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇದ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ "ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಯನ್ನು ಪ್ರತಿ ವರ್ಷ 25,000 ಎಂಬಿಬಿಎಸ್ ಸ್ಥಾನಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಅಂಕಗಳ ಆಧಾರದ ಮೇಲೆ ಪಟ್ಟಿಯನ್ನು ತಯಾರಿಸಲಾಗುತ್ತದೆ ಮತ್ತು ಅದರ ಅಡಿಯಲ್ಲಿ 85% ರಷ್ಟು ಸ್ಥಾನಗಳನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಿಗೆ ಮೀಸಲಿಡಲಾಗುತ್ತದೆ, ಇದರಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡಲಾಗುತ್ತದೆ."


1/4 ನೇ ಭಾಗವನ್ನು ಕೇಂದ್ರ ಅನುದಾನಿತ ಕಾಲೇಜುಗಳಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.ಆದರೆ ಉಳಿದ ರಾಜ್ಯದ ಅನುದಾನಿತ ಕಾಲೇಜುಗಳಲ್ಲಿನ 3/4 ಸೀಟಗಳಲ್ಲಿ ಒಬಿಸಿಗೆ ಮೀಸಲಾತಿಯನ್ನು ನೀಡುತ್ತಿಲ್ಲ" ಎಂದು ಯಾದವ್ ಆರೋಪಿಸಿದರು.ಇದೇ ಕಾರಣದಿಂದಾಗಿ ಪ್ರತಿ ವರ್ಷ 700 ಒಬಿಸಿ ವಿದ್ಯಾರ್ಥಿಗಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಸಚಿವರು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ತಿಳಿಸಿದರು.