General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಹಂಪಿ ನಗರವು ಯಾವ ನದಿ ದಂಡೆಯಲ್ಲಿದೆ?


ಉತ್ತರ: ತುಂಗಭದ್ರಾ ನದಿ


ಪ್ರಶ್ನೆ 2: 1894ರಲ್ಲಿ ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?


ಉತ್ತರ: ಫರ್ಡಿನಾಂಡ್ ಕಿಟೆಲ್


ಪ್ರಶ್ನೆ 3: ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವಾಗ ಸ್ಥಾಪಿಸಲಾಯಿತು?


ಉತ್ತರ: 3 ಮೇ 1915


ಪ್ರಶ್ನೆ 4: ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಯಾರು?


ಉತ್ತರ: ಎಚ್.ವಿ.ನಂಜುಂಡಯ್ಯ


ಪ್ರಶ್ನೆ 5: ಕೊನೆಯ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?


ಉತ್ತರ: 1798


ಇದನ್ನೂ ಓದಿ: Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ


ಪ್ರಶ್ನೆ 6: ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮವನ್ನು ಹೆಸರಿಸಿ?


ಉತ್ತರ: ಈಸೂರು


ಪ್ರಶ್ನೆ 7: ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?


ಉತ್ತರ: ಕೆ.ಎಸ್.ನಾಗರತ್ನಮ್ಮ


ಪ್ರಶ್ನೆ 8: ಕರ್ನಾಟಕದ ಕಬಡ್ಡಿ ರಾಣಿ ಎಂದು ಯಾರು ಕರೆಯುತ್ತಾರೆ?


ಉತ್ತರ: ಮಮತಾ ಪೂಜಾರಿ


ಪ್ರಶ್ನೆ 9: ಕರ್ನಾಟಕ ಏಕೀಕರಣ ಯಾರ ನೇತೃತ್ವದಲ್ಲಿ ಪ್ರಾರಂಭವಾಯಿತು?


ಉತ್ತರ: ಆಲೂರು ವೆಂಕಟರಾಯರು


ಪ್ರಶ್ನೆ 10: ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು?


ಉತ್ತರ: ಮುಳ್ಳಯ್ಯನಗಿರಿ (1,930 ಮೀ)


ಇದನ್ನೂ ಓದಿ: Covid variant JN.1: ದೇಶದಲ್ಲಿ ಕೋವಿಡ್ ರೂಪಾಂತರಿ JN.1 ಉಲ್ಬಣ: ಕರ್ನಾಟಕದಲ್ಲಿ 1 ಸಾವು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.