Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ

JN.1 Variant: ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಗೆ ಕಾರಣವಾಗಿರುವ  ಕರೋನಾ ವೈರಸ್‌ನ ಜೆಎನ್.1 ರೂಪಾಂತರವು ಇದೀಗ ಕೇರಳ ಬಳಿಕ ಇನ್ನೂ ಎರಡು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. 

Written by - Yashaswini V | Last Updated : Dec 20, 2023, 10:59 AM IST
  • ಡಿಸೆಂಬರ್ 11 ರಂದು, ದೇಶದಲ್ಲಿ ಒಟ್ಟು 938 ಕರೋನಾ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು.
  • ನಿನ್ನೆ (ಡಿ.19) ವೇಳೆಗೆ ಈ ಅಂಕಿಅಂಶಗಳು ಎರಡು ಸಾವಿರದತ್ತ ಸಮೀಪಿಸಿದೆ
  • ಕೇವಲ 9 ದಿನಗಳಲ್ಲಿ ಕೊರೊನಾ ಪ್ರಕರಣಗಳು ದ್ವಿಗುಣಗೊಂಡಿದೆ.
Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ title=

JN.1 Variant: ಭಾರತದಲ್ಲಿ ಮೊತ್ತ ಮೊದಲಿಗೆ ಕೇರಳದಲ್ಲಿ ಪತ್ತೆಯಾದ ಕರೋನಾ ವೈರಸ್‌ನ ಜೆಎನ್.1 ರೂಪಾಂತರ ಇದೀಗ ಮತ್ತೆರಡು ರಾಜ್ಯಗಳಲ್ಲೂ ಕಾಣಿಸಿಕೊಂಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಒಂದು ಮತ್ತು ಗೋವಾದಲ್ಲಿ 18  JN.1 ಪ್ರಕರಣ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಕಳವಳ ಹೆಚ್ಚಾಗುವಂತೆ ಮಾಡಿದೆ. 

ಕೇವಲ 9ದಿನಗಳಲ್ಲಿ ದ್ವಿಗುಣಗೊಂಡ ಕೊರೊನಾ ಪ್ರಕರಣ: 
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಕರೋನಾ ವೈರಸ್‌ನ ಜೆಎನ್.1 ರೂಪಾಂತರವು ಇದೀಗ ಭಾರತದಲ್ಲೂ ದಾಪುಗಾಲಿಟ್ಟಿದ್ದು ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಗಮನಾರ್ಹವಾಗಿ, ಡಿಸೆಂಬರ್ 11 ರಂದು, ದೇಶದಲ್ಲಿ ಒಟ್ಟು 938 ಕರೋನಾ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ನಿನ್ನೆ (ಡಿ.19) ವೇಳೆಗೆ ಈ  ಅಂಕಿಅಂಶಗಳು ಎರಡು ಸಾವಿರದತ್ತ ಸಮೀಪಿಸಿದ್ದು ಕೇವಲ 9 ದಿನಗಳಲ್ಲಿ ಕೊರೊನಾ ಪ್ರಕರಣಗಳು ದ್ವಿಗುಣಗೊಂಡಿದೆ. ಆದಾಗ್ಯೂ, ಪ್ರಸ್ತುತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಕಾಲೋಚಿತ ಮಾದರಿಯಾಗಿ ನೋಡಬೇಕು ಎಂದು INSACOG (ಸೆಂಟ್ರಲ್ ಗೌರ್ನಮೆಂಟ್ ಫೋರಂ ಲ್ಯಾಬ್ಸ್)  ಹೇಳುತ್ತದೆ.

ಇದನ್ನೂ ಓದಿ- ಕೇರಳದಲ್ಲಿ ಕೋರೋನಾ ಸಬ್ ವೇರಿಯಂಟ್ JN.1 ಪತ್ತೆ ಖಚಿತ, ಹೆಚ್ಚಾಗಲಿದೆಯಾ ಟೆನ್ಷನ್?

ಏನಿದು ಕೊರೊನಾವೈರಲ್ ಜೆ‌ಎನ್.1 ವೇರಿಯೆಂಟ್: 
ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿರುವ JN.1 ಹೆಸರಿನ ಕೊರೊನಾವೈರಸ್ ರೂಪಾಂತರವು ಲಕ್ಸೆಂಬರ್ಗ್‌ನಲ್ಲಿ ಮೊದಲು ಗುರುತಿಸಲಾದ ಸಬ್ ವೇರಿಯೆಂಟ್ ಪಿರೋಲಾ ರೂಪಾಂತರದ (BA.2.86) ವಂಶಸ್ಥವಾಗಿದೆ.  ಇದು ಸ್ವತಃ ಒಮಿಕ್ರಾನ್  ಸಬ್ ವೇರಿಯೆಂಟ್ ಎಂಬುದು ಗಮನಾರ್ಹವಾಗಿದೆ. 

ಹೊಸ ಕೋವಿಡ್ ರೂಪಾಂತರವು ಗಮನಾರ್ಹ ಸಂಖ್ಯೆಯ ವಿಶಿಷ್ಟ ರೂಪಾಂತರಗಳನ್ನು ಹೊಂದಿದೆ, ವಿಶೇಷವಾಗಿ ಸ್ಪೈಕ್ ಪ್ರೋಟೀನ್‌ನಲ್ಲಿ, ಇದು ಹೆಚ್ಚಿದ ಸೋಂಕು ಮತ್ತು ಪ್ರತಿರಕ್ಷಣಾ ತಪ್ಪಿಸಿಕೊಳ್ಳುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ- ಕಾಫಿನಾಡಿನಲ್ಲಿ ಕೊರೊನಾ ಭೀತಿ

JN.1 ಹೊಸ ಕೋವಿಡ್ ರೂಪಾಂತರದ ಲಕ್ಷಣಗಳು :
ಕೊರೊನಾವೈರಲ್ ಜೆ‌ಎನ್.1 ವೇರಿಯೆಂಟ್ ನ ಪ್ರಮುಖ ಲಕ್ಷಣಗಳೆಂದರೆ, ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು. ಇದಲ್ಲದೆ, ಹೆಚ್ಚಿನವರಲ್ಲಿ ಇದು ಸೌಮ್ಯ ಮೇಲ್ಭಾಗದ ಉಸಿರಾಟದ ರೋಗಲಕ್ಷಣಗಳನ್ನು ಹೊಂದಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News