ನವದೆಹಲಿ: Global Hunger Index - ಜಾಗತಿಕ ಹಸಿವು ಸೂಚ್ಯಂಕದಲ್ಲಿ (Global Hunger Index-2021) ಭಾರತದ ಶ್ರೇಯಾಂಕ (India's Rank) ಕುಸಿತವು ಆಘಾತಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನು ಮಾಡುವ ವಿಧಾನ ಅವೈಜ್ಞಾನಿಕ ಎಂದು ಸರ್ಕಾರ ಹೇಳಿದೆ. ಜಾಗತಿಕ ಹಸಿವಿನ ಸೂಚ್ಯಂಕ (Global Hunger Index (GHI) 2021) 116 ದೇಶಗಳ ಪಟ್ಟಿಯಲ್ಲಿ  ಭಾರತ 101 ನೇ ಸ್ಥಾನದಲ್ಲಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ ನೇಪಾಳಕ್ಕಿಂತ ಕಳಪೆ ಮಟ್ಟದ ಶ್ರೇಯಾಂಕವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Global Hunger Index: ಹಸಿವಿನಿಂದ ವಿಶ್ವಾದ್ಯಂತ ನಿಮಿಷಕ್ಕೆ 11 ಜನರ ಸಾವು - ವರದಿ


'ಗ್ರೌಂಡ್ ರಿಯಾಲಿಟಿ ಮತ್ತು ವಾಸ್ತವಿಕ ಸತ್ಯಕ್ಕೆ ವರದಿ ದೂರವಾಗಿದೆ'
ಈ ವರದಿಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು, ಅಪೌಷ್ಟಿಕ ಜನಸಂಖ್ಯೆಯ (Malnugrition) ಅನುಪಾತದ ಮೇಲೆ FAO ನೀಡಿರುವ ಅಂದಾಜಿನ ಆಧಾರದ ಮೇಲೆ ಜಾಗತಿಕ ಹಸಿವು ಸೂಚ್ಯಂಕ 2021 ರಲ್ಲಿ (GHI-2021)ಭಾರತದ ಶ್ರೇಯಾಂಕ ಕಡಿಮೆ ಮಾಡಿರುವುದು ಆಘಾತಕಾರಿ ಎಂದು ಸಚಿವಾಲಯ ಹೇಳಿದೆ. ಈ ಅಂದಾಜು ಗ್ರೌಂಡ್ ರಿಯಾಲಿಟಿ ಮತ್ತು ವಾಸ್ತವಿಕ ಸತ್ಯಗಳಿಂದ ದೂರ ಇದೆ. ಅದನ್ನು ತಯಾರಿಸುವ ಮಾರ್ಗದಲ್ಲಿ ಗಂಭೀರ ಸಮಸ್ಯೆಗಳಿವೆ. ಜಾಗತಿಕ ಹಸಿವಿನ ಸೂಚಿಯನ್ನು ಐರ್ಲೆಂಡ್ ಮೂಲದ ಏಜೆನ್ಸಿಯ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಮೂಲದ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ಸಿದ್ಧಪಡಿಸುತ್ತಿವೆ. ಇದರಲ್ಲಿ, ಭಾರತವು ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್‌ಗಳಿಗಿಂತ ಹಸಿವಿನ ವಿಷಯದಲ್ಲಿ ಕಳಪೆ ಮಟ್ಟದ ಪ್ರದರ್ಶನ ತೋರಿದೆ.


ಇದನ್ನೂ ಓದಿ-ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಪಾಕ್ ಗಿಂತಲೂ ಹಿಂದೆ..!


ವರದಿಯನ್ನು ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ
ಸಚಿವಾಲಯದ ಪ್ರಕಾರ, FAOನ ಹಸಿವು ಅಳೆಯುವ (India's Hunger Measure) ವಿಧಾನವು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. "ನಾಲ್ಕು ಪ್ರಶ್ನೆಗಳ" ಮೇಲೆ ನಡೆಸಿದ ಮುಕ್ತ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಅದು ತನ್ನ ಮೌಲ್ಯಮಾಪನವನ್ನು ಸಿದ್ಧಪಡಿಸುತ್ತದೆ. ಈ ಸಮೀಕ್ಷೆಯನ್ನು ದೂರವಾಣಿ ಮೂಲಕ ಗ್ಯಾಲೋಪ್ ಹೆಸರಿನ ಸರ್ವೇ ಏಜೆನ್ಸಿ ಕೂಡ ಮಾಡಿದೆ. ನಿರ್ದಿಷ್ಟ ಅವಧಿಯಲ್ಲಿ ಒಬ್ಬ ವ್ಯಕ್ತಿಗೆ ಲಭ್ಯವಿರುವ ಧಾನ್ಯವನ್ನು ಸುಲಭವಾಗಿ ಅಳೆಯಬಹುದು. ಆದರೆ ಯಾವುದೇ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳದೆ ನಿರ್ದಿಷ್ಟ ಅವಧಿಯಲ್ಲಿ ಅಪೌಷ್ಟಿಕತೆಯನ್ನು ಅಳೆಯಲಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ.


ಇದನ್ನು ಓದಿ-China-Pakistan Relations:ತನ್ನ ಆಪ್ತಮಿತ್ರನಿಗೆಯೇ ದ್ರೋಹ ಬಗೆದ ಚೀನಾ ಇದೀಗ ತಿರುಗಿಯೂ ನೋಡುತ್ತಿಲ್ಲವಂತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ