China-Pakistan Relations:ತನ್ನ ಆಪ್ತಮಿತ್ರನಿಗೆಯೇ ದ್ರೋಹ ಬಗೆದ ಚೀನಾ ಇದೀಗ ತಿರುಗಿಯೂ ನೋಡುತ್ತಿಲ್ಲವಂತೆ!

China-Pakistan Relations - ಸುಳ್ಳು, ವಂಚನೆ ಮತ್ತು ಸ್ವಾರ್ಥದಿಂದ ಕೂಡಿದ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುತ್ತಾರೆ. ಚೀನಾ (China) ಮತ್ತು ಪಾಕಿಸ್ತಾನದ (Pakistan) ನಡುವಿನ ಸಂಬಂಧದಲ್ಲಿ ಅದು ನಿಜ ಎಂದು ಸಾಬೀತಾಗಿದೆ. 

Written by - Nitin Tabib | Last Updated : Oct 16, 2021, 01:46 PM IST
  • ಚೀನಾ-ಪಾಕಿಸ್ತಾನ್ ಸಂಬಂಧ ಈ ಮೊದಲಿನಂತೆ ಇಲ್ಲ
  • ಪಾಕ್ ಸೇನೆಗೆ ಕಳಪೆ ಗುಣಮಟ್ಟದ ಸಾಮಗ್ರಿಗಳ ಮಾರಾಟ ಮಾಡಿದೆ ಚೀನಾ
  • ಪಾಕ್ ಸೇನೆ ಮತ್ತು ಸರ್ಕಾರದಿಂದ ತೀವ್ರ ಆಕ್ಷೇಪ
China-Pakistan Relations:ತನ್ನ ಆಪ್ತಮಿತ್ರನಿಗೆಯೇ ದ್ರೋಹ ಬಗೆದ ಚೀನಾ ಇದೀಗ ತಿರುಗಿಯೂ ನೋಡುತ್ತಿಲ್ಲವಂತೆ!

China-Pakistan Relations - ಸುಳ್ಳು, ವಂಚನೆ ಮತ್ತು ಸ್ವಾರ್ಥದಿಂದ ಕೂಡಿದ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುತ್ತಾರೆ. ಚೀನಾ (China) ಮತ್ತು ಪಾಕಿಸ್ತಾನದ (Pakistan) ನಡುವಿನ ಸಂಬಂಧದಲ್ಲಿ ಅದು ನಿಜ ಎಂದು ಸಾಬೀತಾಗಿದೆ.  ಚೀನಾವನ್ನು ಸಾರ್ವಕಾಲಿಕ ಸ್ನೇಹಿತ ಎಂದು ಪಾಕಿಸ್ತಾನ ಪರಿಗಣಿಸಬಹುದು, ಆದರೆ ವಾಸ್ತವವೆಂದರೆ ಚೀನಾ ಅದನ್ನು ಆರ್ಥಿಕ ಗುಲಾಮನಂತೆ (Economic Slave) ನೋಡುತ್ತಿದೆ. ಕೆಲವು ಸಮಯದಿಂದ ಚೀನಾ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಬಿರುಕು  ಕಾಣಿಸಿಕೊಳ್ಳಲಾರಂಭಿಸಿದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಎಲ್ಲವೂ ಸರಿಯಿಲ್ಲ. ಪಾಕಿಸ್ತಾನದ ಸೇನೆಗೆ ಕಳಪೆ ಗುಣಮಟ್ಟದ ವಸ್ತುಗಳ ಪೂರೈಕೆಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧಕ್ಕೆ (China-Pakistan Military Relations) ಹುಳಿ ಬಿದ್ದಿದೆ. ಚೀನೀ ವಸ್ತುಗಳ ಖಾತರಿ ಇಲ್ಲ. ಎಲ್ಲಿಯವರೆಗೆ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಅಲ್ಲಿಯವರೆಗೆ ಎಲ್ಲವು ಓಕೆ. ನಂತರ ಅವುಗಳನ್ನು ಯಾರೂ ಕೇಳುವುದಿಲ್ಲ. ಪಾಕಿಸ್ತಾನ ಕೂಡ ಇದೀಗ ಚೀನಾ ಮಾಲ್ ಖರೀದಿಸಿ ಪಶ್ಚಾತಾಪಪಡುತ್ತಿದೆ.

ವಾಸ್ತವದಲ್ಲಿ ಬೀಜಿಂಗ್‌ನಿಂದ (Bejing) ಇಸ್ಲಾಮಾಬಾದ್‌ನ (Islamabad) ರಕ್ಷಣಾ ಪಡೆಗಳಿಗೆ (Armed Forces) ಹಲವಾರು ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ. ಈ ಮೂಲಕ, ಅತ್ಯಂತ ಕೆಟ್ಟ ಮತ್ತು ಕಳಪೆ ಮಟ್ಟದ ಸರಕುಗಳನ್ನು ಪಾಕಿಸ್ತಾನದ ಸೇನೆಗೆ ಸರಬರಾಜು ಮಾಡಲಾಗಿದೆ. ಇದರೊಂದಿಗೆ, ಅವುಗಳ ಸೇವೆ ಮತ್ತು ನಿರ್ವಹಣೆಯ ಬಗ್ಗೆ ಸರಿಯಾದ ತಿಳುವಳಿಕೆಯ ಕೊರತೆಯಿದೆ. ಅದೇ ವಿಷಯ ಪಾಕ್ ಸೇನೆಯ (Pakistan Army) ಗಮನಕ್ಕೆ ಬಂದಿಲ್ಲ. ಇದೀಗ ಪಾಕಿಸ್ತಾನ ಸರ್ಕಾರವು ಪದೇ ಪದೇ ಚೀನಾವನ್ನು ಅವುಗಳನ್ನು ಸರಿಪಡಿಸುವಂತೆ ಮನವಿ ಮಾಡುತ್ತಿದೆ, ಆದರೆ ಡ್ರ್ಯಾಗನ್ ಕಡೆಯಿಂದ ಅದಕ್ಕೆ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ.

ಈ ಕುರಿತು ಅಲ್ ಮಯಾದೀನ್ ಬ್ಲಾಗ್ ವೊಂದರಲ್ಲಿ ಬರೆದುಕೊಂಡಿರುವ   ನಿಸಾರ್ ಅಹ್ಮದ್ ಚೀನಾ ಮತ್ತು ಪಾಕಿಸ್ತಾನಗಳು ವಿವಾದಿತ/ಆಕ್ರಮಿತ ಪ್ರದೇಶಗಳಲ್ಲಿ ಪರಸ್ಪರರ ನಿಲುವಿಗೆ ಆಗಾಗ್ಗೆ ಬೆಂಬಲವನ್ನು ವ್ಯಕ್ತಪಡಿಸುತ್ತವೆ. ಅಲ್ ಮಾಯಾದೀನ್ ಪ್ರಕಾರ, ಚೀನಾದ ಚೆಂಗ್ಡು ಏರ್‌ಕ್ರಾಫ್ಟ್ ಇಂಡಸ್ಟ್ರಿ ಗ್ರೂಪ್ ವಿನ್ಯಾಸಗೊಳಿಸಿದ ಮತ್ತು ಚೀನಾ ನ್ಯಾಷನಲ್ ಏರೋ-ಟೆಕ್ನಾಲಜಿ ಆಮದು ಮತ್ತು ರಫ್ತು ಕಾರ್ಪೋರೇಶನ್‌ನಿಂದ ಮಾರಾಟವಾದ ಮೂರು ಸಶಸ್ತ್ರ ಡ್ರೋನ್‌ಗಳನ್ನು ಇತ್ತೀಚಿನ ಸಹಯೋಗಕ್ಕೆ ಸಂಬಂಧಿಸಿದಂತೆ ಜನವರಿ 2021 ರಲ್ಲಿ ಪಾಕಿಸ್ತಾನದ ವಾಯುಪಡೆಗೆ ಸೇರಿಸಲಾಗಿದೆ. 

ಇದನ್ನೂ ಓದಿ- ಅಫ್ಘಾನಿಸ್ತಾನದ ಕಂದಹಾರ್‌ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ, 32 ಸಾವು

ಆದರೆ ಕೆಲವು ದಿನಗಳ ಬಳಿಕ ಈ ಡ್ರೋನ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ ಮತ್ತು ಅಂತಿಮವಾಗಿ ಅವುಗಳನ್ನು ವಾಯುಪಡೆಯಿಂದ ಹೊರತೆಗೆಯಲಾಗಿದೆ ಮತ್ತು ಅವುಗಳನ್ನು ಬಳಸುವುದನ್ನು ನಿಲ್ಲಿಸಲಾಯಿತು. ವರದಿಯು ಚೀನಾ ಡ್ರೋನ್ ಖರೀದಿ ಪಾಕಿಸ್ತಾನದ ಸೇನೆ ಪಾಲಿಗೆ  ಒಂದು ದುಃಸ್ವಪ್ನ ಎಂದು ವಿವರಿಸಿದೆ. ಇದೀಗ ಚೀನಾದ ಡ್ರೋನ್‌ಗಳನ್ನು ಮಾರಾಟ ಮಾಡುವ ಚೀನಾ ನ್ಯಾಷನಲ್ ಏರೋ-ಟೆಕ್ನಾಲಜಿ ಆಮದು ಮತ್ತು ರಫ್ತು ನಿಗಮ (CATIC), ನೆಲಸಮ ಡ್ರೋನ್‌ಗಳ ದುರಸ್ತಿ ಮತ್ತುನಿರ್ವಹಣೆಯಿಂದ ಮುಖ ತಿರುಗಿಸಿದೆ. ಕಂಪನಿಯು ಸರಬರಾಜು ಮಾಡಿದ ಸರಕುಗಳು ಕಳಪೆಗುಣಮಟ್ಟದ್ದಾಗಿದ್ದು ಮತ್ತು ಹೆಚ್ಚಾಗಿ ಬಳಕೆಗೆ ಸೂಕ್ತವಾಗಿಲ್ಲ. ಪಾಕಿಸ್ತಾನಿ ಸೇನೆಯು ಕಳುಹಿಸಿದ ಎಂಜಿನಿಯರ್‌ಗಳನ್ನು ಸಹ ಅಸಮರ್ಥರು ಚೀನಾ ಹೇಳಿದೆ.

ಇದನ್ನೂ ಓದಿ-ಹಿಂದು ದೇಗುಲಗಳ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ- ಬಾಂಗ್ಲಾ ಪ್ರಧಾನಿ

ಅಹ್ಮದ್ ಪ್ರಕಾರ, ಪಾಕಿಸ್ತಾನದ ಅಧಿಕಾರಿಗಳು ಇದೀಗ ಡ್ರೋನ್ ಅನ್ನು ಸರಿಪಡಿಸಲು ವೃತ್ತಿಪರರ ತಂಡವನ್ನು ಕಳುಹಿಸುವಂತೆ ಚೀನಾ ಕಂಪನಿಗೆ ಕೇಳಿದ್ದಾರೆ. ಇದಷ್ಟೇ ಅಲ್ಲ, ಪಾಕಿಸ್ತಾನ ವಾಯುಪಡೆಯು ಅದನ್ನು ಬದಲಿಸುವಂತೆ ಒತ್ತಾಯಿಸಿದೆ. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಡ್ರೋನ್‌ಗಳಲ್ಲಿನ ಅತ್ಯಂತ ಗಂಭೀರ ಸಮಸ್ಯೆ ಇಂಧನ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-Bill Clinton: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News