ನವದೆಹಲಿ: ಈಗಾಗಲೇ ಮಹಾದಾಯಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಆದಾಗ್ಯೂ ಕೂಡ ಈಗ ಗೋವಾ ಮತ್ತೆ ಈ ವಿಚಾರದಲ್ಲಿ ಕ್ಯಾತೆ ತೆಗೆದಿದೆ.


COMMERCIAL BREAK
SCROLL TO CONTINUE READING

ಸೋಮವಾರದಂದು ಈ ವಿಚಾರವಾಗಿ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ 'ಮಹಾದಾಯಿ ನ್ಯಾಯಾಧೀಕರಣ ಕೇಂದ್ರ ಸರ್ಕಾರ ಸಂಪೂರ್ಣ ಒಪ್ಪಿಗೆ ಕೊಡುವವರೆಗೆ ಚಾಲನೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.



ಈ ಕುರಿತಾಗಿ ಪ್ರಕಟಣೆಯಲ್ಲಿ ತಿಳಿಸಿರುವ ಸಿಎಂ ಗೋವಾ, ಸುಪ್ರೀಂ ಕೋರ್ಟ್ ಗೆ ಮಾಡಿರುವ ಮನವಿ ಹಿನ್ನಲೆಯಲ್ಲಿ ಸುಪ್ರೀಂ 17/04/2014 ರಂದು ನೀಡಿರುವ ಆದೇಶದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಒಪ್ಪಿಗೆ ಇಲ್ಲದೆ ಈ ಯೋಜನೆಗೆ ವಿವರವಾದ ದಾಖಲೆಯನ್ನು ಸಿದ್ಧಪಡಿಸದ ಹೊರತು ಯಾವುದೇ ಕೆಲಸವನ್ನು ಆರಂಭಿಸುವಂತಿಲ್ಲ ಎಂದು ಅವರು ಸುಪ್ರೀಂ ಆದೇಶವನ್ನು ಉಲ್ಲೇಖಿಸಿದ್ದಾರೆ.


ಇತ್ತೀಚಿಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಆದೇಶಿಸಿತ್ತು, ಇದರ ಅನುಗುಣವಾಗಿ ಕೇಂದ್ರ ಸರ್ಕಾರ ಮಹಾದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ನಲ್ಲಿ ಪ್ರಕಟಿಸಿತ್ತು.