Goa New Rules : ಗೋವಾಗೆ ಹೋಗ್ತೀರಾ..? ಎಣ್ಣೆ ಹೊಡೆದ್ರೆ 50 ಸಾವಿರ ದಂಡ.. ಹುಷಾರ್..!
ನೀವು ಗೋವಾಗೆ ಹೋಗಲು ಪ್ಲಾನ್ ಮಾಡ್ತೀದಿರಾ..? ಬೀಚ್‌ನಲ್ಲಿ ಬಿಯರ್ ಕುಡಿದು, ವಿದೇಶಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಐಡಿಯಾ ಮಾಡಿದ್ರೆ ಇವಾಗ್ಲೇ ಅದನ್ನು ನಿಮ್ಮ ಮೈಂಡ್ ಇಂದ ಅದನ್ನು ತೆಗೆದುಹಾಕಿಬಿಡಿ. ಗೋವಾದಲ್ಲಿ ಪ್ರವಾಸಿಗರ ಗೌಪ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ.
Goa New Rules : ನೀವು ಗೋವಾಗೆ ಹೋಗಲು ಪ್ಲಾನ್ ಮಾಡ್ತೀದಿರಾ..? ಬೀಚ್‌ನಲ್ಲಿ ಬಿಯರ್ ಕುಡಿದು, ವಿದೇಶಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಐಡಿಯಾ ಮಾಡಿದ್ರೆ ಇವಾಗ್ಲೇ ಅದನ್ನು ನಿಮ್ಮ ಮೈಂಡ್ ಇಂದ ಅದನ್ನು ತೆಗೆದುಹಾಕಿಬಿಡಿ. ಗೋವಾದಲ್ಲಿ ಪ್ರವಾಸಿಗರ ಗೌಪ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ.
ಹೌದು.. ಗೋವಾ ಕಪಲ್ಸ್‌ಗೆ ಹನಿಮೂನ್ ಪ್ರೇಸ್ ಆದ್ರೆ, ಮದ್ಯಪ್ರಿಯರ ಪಾಲಿಗೆ ಅದು ಸ್ವರ್ಗ. ಇದೀಗ ಗೋವಾ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ, ಅಡುಗೆ ಮಾಡಿದ್ರೆ 50 ಸಾವಿರ ರೂ. ದಂಡ ವಿಧಿಸಲಾಗುವುದು. ಅಲ್ಲದೆ, ಬೀಚ್‌ನಲ್ಲಿ ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅದೇ ರೀತಿ ಪ್ರವಾಸಿಗರ ಅನುಮತಿ ಇಲ್ಲದೇ ಫೋಟೋ ತೆಗೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಅಸ್ಸಾಂ ಸಿಎಂ ಪ್ರಕಾರ ತಾಯ್ತನ ಹೊಂದಲು ಸೂಕ್ತ ವಯಸ್ಸೆಷ್ಟು ಗೊತ್ತೇ?
ವಿದೇಶಿ ಪ್ರವಾಸಿಗರು ಬಿಸಿಲಿನಲ್ಲಿ ಮಲಗಿದಾಗ ಅಥವಾ ಸಮುದ್ರದಲ್ಲಿ ಮೋಜು ಮಾಡುವಾಗ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ. ಜತೆಗೆ ಹೆಚ್ಚಿನ ಶುಲ್ಕ ವಸೂಲಿ ಮಾಡದಂತೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರು ಟ್ಯಾಕ್ಸಿ ಮೀಟರ್ ನೋಡಿ ಮತ್ತು ಶುಲ್ಕವನ್ನು ಪಾವತಿಸಲು ಸಲಹೆ ನೀಡಿದ್ದಾರೆ. ಪ್ರವಾಸಿಗರ ಗೌಪ್ಯತೆಯನ್ನು ಕಾಪಾಡಲು.. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರು ಮೋಸ ಹೋಗುವುದನ್ನು ತಡೆಯಲು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಗೋವಾ ಸರ್ಕಾರ ತಿಳಿಸಿದೆ.
ಬಂಡೆಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಅಧಿಕಾರಿಗಳು ಪ್ರವಾಸಿಗರಿಗೆ ಸಲಹೆ ನೀಡಿದ್ದಾರೆ. ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಗೋವಾಕ್ಕೆ ಬರುವ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಹೋಟೆಲ್‌ಗಳಲ್ಲಿ ತಂಗಲು ತಿಳಿಸಲಾಗಿದೆ. ಅನೇಕ ಪ್ರವಾಸಿಗರು ನೋಂದಣಿಯಾಗಿದ್ದರೂ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ.. ಇದರಿಂದ ವಿವಾದಗಳು ಉಂಟಾಗುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Trending News: ಪ್ರವಾಸಿಗರ ಕಣ್ಣಮುಂದೆಯೇ ಹಸುವನ್ನು ಕಚ್ಚಿ ಕಚ್ಚಿ ಎಳೆದಾಡಿ ಕೊಂದ ಹುಲಿ: ನಿಜವಾಗಲಿಲ್ಲ ‘ಪುಣ್ಯಕೋಟಿ’ ಕಥೆ!
ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮುಂತಾದ ಪರವಾನಗಿ ಪಡೆದ ಸ್ಥಳಗಳಲ್ಲಿ ಮಾತ್ರ ಮದ್ಯ ಸೇವಿಸಬೇಕು. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಪ್ರತಿ ವರ್ಷ ರಜೆಯ ಪ್ರವಾಸಕ್ಕಾಗಿ ಗೋವಾಕ್ಕೆ ಬರುತ್ತಾರೆ. ಖಾಸಗಿ ವಾಹನಗಳು, ಬಾಡಿಗೆ ಕ್ಯಾಬ್‌ಗಳು ಮತ್ತು ಮೋಟಾರ್ ಬೈಕ್‌ಗಳನ್ನು ಬಾಡಿಗೆಗೆ ಪಡೆಯಬಾರದು ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಸೂಚಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.