Trending News: ಪ್ರವಾಸಿಗರ ಕಣ್ಣಮುಂದೆಯೇ ಹಸುವನ್ನು ಕಚ್ಚಿ ಕಚ್ಚಿ ಎಳೆದಾಡಿ ಕೊಂದ ಹುಲಿ: ನಿಜವಾಗಲಿಲ್ಲ ‘ಪುಣ್ಯಕೋಟಿ’ ಕಥೆ!

Tiger Attack on Cow: ಈ ದೃಶ್ಯ ಒಂದು ಬಾರಿ ಪುಣ್ಯಕೋಟಿ ಕಥೆಯನ್ನು ನೆನಪು ಮಾಡಿದೆ. ಆದರೆ ಕಥೆಯಲ್ಲಿ ಹಸುವಿನ ಪ್ರಾಣ ಉಳಿದಂತೆ, ಇಲ್ಲಿ ನಡೆಯಲಿಲ್ಲ. ಬದಲಾಗಿ ನೆಲದ ಮೇಲೆ ಹಸುವನ್ನು ಹುಲಿ ಕಚ್ಚಿ ಕಚ್ಚಿ ಎಳೆದಾಡಿ ಕೊಂದಿದೆ ಪುಳಕಗೊಂಡರು. ಈ ಎಲ್ಲಾ ದೃಶ್ಯಗಳು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

Written by - Bhavishya Shetty | Last Updated : Jan 28, 2023, 07:40 PM IST
    • ಹುಲಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸರಿಸ್ಕಾಗೆ ಆಗಮಿಸುತ್ತಾರೆ
    • ಹುಲಿಯೊಂದು ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ
    • ಈ ದೃಶ್ಯ ಒಂದು ಬಾರಿ ಪುಣ್ಯಕೋಟಿ ಕಥೆಯನ್ನು ನೆನಪು ಮಾಡಿದೆ
Trending News: ಪ್ರವಾಸಿಗರ ಕಣ್ಣಮುಂದೆಯೇ ಹಸುವನ್ನು ಕಚ್ಚಿ ಕಚ್ಚಿ ಎಳೆದಾಡಿ ಕೊಂದ ಹುಲಿ: ನಿಜವಾಗಲಿಲ್ಲ ‘ಪುಣ್ಯಕೋಟಿ’ ಕಥೆ! title=
Tiger Attack on Cow

Tiger Attack on Cow: ರಾಜಸ್ಥಾನದ ರಣಥಂಬೋರ್ ನಂತರ ಇದೀಗ ಸರಿಸ್ಕಾ ಹುಲಿ ಅಭಯಾರಣ್ಯವೂ ಹುಲಿ ವೀಕ್ಷಣೆಗೆ ಪ್ರವಾಸಿಗರ ಆಯ್ಕೆಯಾಗಿದೆ. ಹುಲಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸರಿಸ್ಕಾಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಹುಲಿಯೊಂದು ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.

ಇದನ್ನೂ ಓದಿ: ಬದಲಾಯ್ತು ರಾಷ್ಟ್ರಪತಿಗಳ ಅಧಿಕೃತ ನಿವಾಸದ ಉದ್ಯಾನವನದ ಹೆಸರು ..!

ಈ ದೃಶ್ಯ ಒಂದು ಬಾರಿ ಪುಣ್ಯಕೋಟಿ ಕಥೆಯನ್ನು ನೆನಪು ಮಾಡಿದೆ. ಆದರೆ ಕಥೆಯಲ್ಲಿ ಹಸುವಿನ ಪ್ರಾಣ ಉಳಿದಂತೆ, ಇಲ್ಲಿ ನಡೆಯಲಿಲ್ಲ. ಬದಲಾಗಿ ನೆಲದ ಮೇಲೆ ಹಸುವನ್ನು ಹುಲಿ ಕಚ್ಚಿ ಕಚ್ಚಿ ಎಳೆದಾಡಿ ಕೊಂದಿದೆ ಪುಳಕಗೊಂಡರು. ಈ ಎಲ್ಲಾ ದೃಶ್ಯಗಳು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಸರಿಸ್ಕಾದ ಕಾಳಿ ಘಾಟಿ ಅರಣ್ಯದಲ್ಲಿ ಟೈಗರ್ ಎಸ್‌ಟಿ-15ರ ಕಾಣಿಸಿಕೊಳ್ಳುತ್ತಿದ್ದಂತೆ ಪ್ರವಾಸಿಗರು ಪುಳಕಿತರಾದರು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಹುಲಿ ಹಸುವನ್ನು ಬೇಟೆಯಾಡುತ್ತಿತ್ತು. ಈ ದೃಶ್ಯವನ್ನು ಪ್ರವಾಸಿಗರು ವಿಡಿಯೋ ಕೂಡ ಮಾಡಿದ್ದಾರೆ. ದಟ್ಟ ಕಾಡುಗಳಲ್ಲಿ ಹುಲಿ ಬೇಟೆ ಅಪರೂಪವಾಗಿ ಕಂಡುಬರುತ್ತದೆ. ದೆಹಲಿಯಿಂದ ಬಂದ ಪ್ರವಾಸಿಗರು ಬಹಳ ಹೊತ್ತಿನವರೆಗೆ ಈ ದೃಶ್ಯವನ್ನು ವೀಕ್ಷಿಸಿದ್ದಾರೆ.

ಪ್ರವಾಸಿಗರು ಕಾಳಿ ಘಾಟಿಯಲ್ಲಿ ಸಫಾರಿಗೆ ಹೊರಟಿದ್ದಾಗ ಎಸ್‌ಟಿ-15 ಹುಲಿ, ಪ್ರವಾಸಿಗರು ನೋಡ ನೋಡುತ್ತಿದ್ದಂತೆ ಕಾಡಿನಲ್ಲಿ ನಿಂತಿದ್ದ ಹಸುವಿನ ಮೇಲೆ ಎರಗಿದೆ ಎಂದು ಹೇಳಲಾಗುತ್ತಿದೆ. ನಂತರ ಹಸುವನ್ನು ತನ್ನ ದವಡೆಯಲ್ಲಿಟ್ಟುಕೊಂಡು ಬಹಳ ಕಾಲ ಕಚ್ಚಿ ಕಚ್ಚಿ ಎಳೆದಾಡಿದೆ. ಇದಾದ ಬಳಿಕ ಆ ಹಸುವನ್ನು ಎಳೆದೊಯ್ದು ಪೊದೆಯ ಸಮೀಪ ತೆರಳಿದೆ. ಸುಮಾರು 1 ಗಂಟೆಗಳ ಕಾಲ ಹುಲಿ ಈ ಹಸುವನ್ನು ಬೇಟೆಯಾಡಿದೆ.  

ಇದನ್ನೂ ಓದಿ: Trending News: ಪತ್ನಿ ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪತಿ: 48 ವರ್ಷದಿಂದ ತೀರದ ‘ಆ ಸೇಡು’ ಏನು ಗೊತ್ತಾ?

ಬಾಲಾ ಕ್ವಿಲಾ ಬಫರ್ ವಲಯದ ಸುತ್ತಲಿನ ಕಾಡಿನಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಎರಡು ಹುಲಿ ಮರಿಗಳು ಕಾಣಿಸಿಕೊಂಡಿವೆ. ಇದೀಗ ಸರಿಸ್ಕಾದಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News