ನವದೆಹಲಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರಿಗೆ GoAir ಬಂಪರ್ ಕೊಡುಗೆ ಘೋಷಣೆ ಮಾಡಿದೆ. ಈ ಕೊಡುಗೆಯಲ್ಲಿ ಯಾತ್ರಿಕರು ಕೇವಲ 1199 ರೂ.ಗಳಿಗೆ ವಿಮಾನದಲ್ಲಿ ಪ್ರಯಾಣಿಸಬಹುದು.


COMMERCIAL BREAK
SCROLL TO CONTINUE READING

ಯಾವ ಮಾರ್ಗಕ್ಕೆ ಎಷ್ಟು ಶುಲ್ಕ, ಎಲ್ಲಿಯವರೆಗೆ ಬುಕ್ಕಿಂಗ್ ತೆರೆದಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು GoAir ತನ್ನ ವೆಬ್ ಸೈಟ್'ನಲ್ಲಿ ನೀಡಿದೆ. ಈ ಕೊಡುಗೆ ಅಡಿಯಲ್ಲಿ ಜನವರಿ 3 ಮತ್ತು 4 ರಂದು ಟಿಕೆಟ್ ಬುಕ್ಕಿಂಗ್ ಮಾಡಬಹುದು. ಈ ಟಿಕೆಟ್'ಗಳು ಅಹಮದಾಬಾದ್, ಬೆಂಗಳೂರು, ಮುಂಬೈ, ಕೋಲ್ಕತಾ, ದೆಹಲಿ ಗೋವಾ, ಹೈದರಾಬಾದ್, ಚಂಡೀಘಢ, ರಾಂಚಿ, ಲಕ್ನೋ, ನಾಗ್ಪುರ, ಪಟ್ನಾ, ಪುಣೆ ಮತ್ತು ಚೆನೈ ಪ್ರಯಾಣಕ್ಕೆ ಮಾತ್ರ ಲಭ್ಯವಿರುತ್ತವೆ.


ಟಿಕೆಟ್ ಬೆಲೆ ಎಷ್ಟು?
ಅಹಮದಾಬಾದ್-ಗೋವಾ 1499 ರೂ., ಅಹಮದಾಬಾದ್-ಜೈಪುರ 1499 ರೂ., ಬೆಂಗಳೂರು-ಲಖನೌ 2699ರೂ., ಮುಂಬೈ-ಲಖನೌಗೆ 1599 ರೂ, ದೆಹಲಿ-ಶ್ರೀನಗರಕ್ಕೆ 1299ರೂ., ಕೊಲ್ಕತ್ತಾ-ನಾಗ್ಪುರ 2499ರೂ., ದೆಹಲಿ-ಗೋವಾ 1599 ರೂ., ಹೈದರಾಬಾದ್-ಗೋವಾ 1699ರೂ., ಚಂಡೀಘಢ-ಮುಂಬೈ 3399 ರೂ. ಮತ್ತು ಲಕ್ನೋ- ದೆಹಲಿ 1299 ರೂ.ಗೆ ಟಿಕೆಟ್ ದೊರೆಯಲಿದೆ.


ಯಾವ ಅವಧಿಯಲ್ಲಿ ಪ್ರಯಾಣಿಸಬಹುದು?
ದೆಹಲಿಯಿಂದ ನಾಗಪುರಕ್ಕೆ ಪ್ರಯಾಣ ಬೆಳೆಸಬೇಕಿದ್ದರೆ ನೀವು ಜನವರಿ 18 ರಿಂದ ಜನವರಿ 31ರ ನಡುವೆ ಟಿಕೆಟ್ ಖರೀದಿಸಬೇಕು. ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸಲು ಜುಲೈ 1 ರಿಂದ ಸೆಪ್ಟೆಂಬರ್ 1ರ ಅವಧಿಯಲ್ಲಿ ಟಿಕೆಟ್ ಖರೀದಿಸಬಹುದು. 


ಈ ಕೊಡುಗೆಯಲ್ಲಿ ಯಾವ ನಗರದಿಂದ ಯಾವ ನಗರಕ್ಕೆ ಯಾವಾಗ ಪ್ರಯಾಣಿಸಬಹುದು ಎಂಬುದರ ಪೂರ್ಣ ವಿವರ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.