ಭುವನೇಶ್ವರ: Yes ಬ್ಯಾಂಕ್‌ನಲ್ಲಿನ ಬಿಕ್ಕಟ್ಟಿನಿಂದ ಭಗವಾನ್ ಜಗನ್ನಾಥ ದೇವಾಲಯದ(Jagannath Temple) ಪುರೋಹಿತರು ಮತ್ತು ಭಕ್ತರು ಆತಂಕಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ಈ ದೇವಾಲಯದ 592 ಕೋಟಿ ರೂ.ಗಿಂತ ಹೆಚ್ಚಿನ ಹಣ Yes ಬ್ಯಾಂಕ್‌ನಲ್ಲಿದೆ.


COMMERCIAL BREAK
SCROLL TO CONTINUE READING

ಬಿಕ್ಕಟ್ಟಿನಲ್ಲಿರುವ Yes ಬ್ಯಾಂಕ್‌ಗೆ(Yes Bank) ಗುರುವಾರ ಆರ್‌ಬಿಐ ಹಲವು ನಿರ್ಬಂಧಗಳನ್ನು ವಿಧಿಸಿತು. ಇದರ ಅಡಿಯಲ್ಲಿ, ಖಾತೆದಾರರಿಗೆ ಇನ್ನು ಮುಂದೆ Yes ಬ್ಯಾಂಕ್‌ನಿಂದ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಈ ವಾಪಸಾತಿ ಮಿತಿ 3 ಏಪ್ರಿಲ್ 2020 ರವರೆಗೆ ಜಾರಿಯಲ್ಲಿರುತ್ತದೆ.


ಇದಲ್ಲದೆ, Yes  ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಹಕ್ಕುಗಳನ್ನು ಸ್ಥಗಿತಗೊಳಿಸುವಾಗ ಆರ್‌ಬಿಐ ಮಾಜಿ ಡಿಎಂಡಿ ಮತ್ತು ಎಸ್‌ಬಿಐನ ಸಿಎಫ್‌ಒ ಪ್ರಶಾಂತ್ ಕುಮಾರ್ ಅವರನ್ನು ಒಂದು ತಿಂಗಳ ಕಾಲ ನಿರ್ವಾಹಕರಾಗಿ ನೇಮಿಸಿದೆ.


ಈವರೆಗೆ ಬ್ಯಾಂಕ್ ಎರಡು ಹಂತಗಳಲ್ಲಿ 52 ಕೋಟಿ ರೂ.ಗಳನ್ನು ಹಿಂದಿರುಗಿಸಿದೆ. ಈ ಪೈಕಿ ಬ್ಯಾಂಕ್ ಮೊದಲ ಹಂತದಲ್ಲಿ 18 ಕೋಟಿ ಮತ್ತು ಎರಡನೇ ಹಂತದಲ್ಲಿ 34 ಕೋಟಿ ರೂ. ಹಿಂದಿರುಗಿಸಿದೆ. ಉಳಿದ ಮೊತ್ತವನ್ನು ಹಿಂದಿರುಗಿಸಲು ಮಾರ್ಚ್ 18 ರಂದು 371 ಕೋಟಿ ರೂ., ಮಾರ್ಚ್ 25 ರಂದು 33 ಕೋಟಿ ರೂ., ಮಾರ್ಚ್ 28 ರಂದು 123 ಕೋಟಿ ರೂ. ಹಿಂದಿರುಗಿಸುವುದಾಗಿ ಮಾತುಕತೆ ನಡೆದಿತ್ತು.


ಇನ್ನು ಪುರಿಯಾ ಜಗನ್ನಾಥ ದೇವಾಲಯದ ಭಕ್ತರ ಕಾಳಜಿಯನ್ನು ನೋಡಿದ ರಾಜ್ಯ ಕಾನೂನು ಸಚಿವ ಪ್ರತಾಪ್ ಜೆನಾ, ಹಣವನ್ನು ಸ್ಥಿರ ಠೇವಣಿಯಾಗಿ ಬ್ಯಾಂಕಿನಲ್ಲಿ ಇರಿಸಲಾಗಿದೆ, ಅದನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಲಾಗಿಲ್ಲ ಎಂದು ಹೇಳಿದರು. ಈ ಸ್ಥಿರ ಠೇವಣಿಯ ಅವಧಿ ಈ ತಿಂಗಳು ಕೊನೆಗೊಳ್ಳುತ್ತಿದೆ. ಈ ಹಣವನ್ನು Yes ಬ್ಯಾಂಕ್‌ನಿಂದ ರಾಷ್ಟ್ರೀಕೃತ ಬ್ಯಾಂಕ್‌ಗೆ ವರ್ಗಾಯಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ ಎಂದು ಅವರು ತಿಳಿಸಿದರು.


ಈ ವಿಷಯದಲ್ಲಿ ತಾನು ಇನ್ನೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿಲ್ಲ ಎಂದು ತಿಳಿಸಿದ ಸಚಿವರು,, ಆದರೆ ಯಾವುದೇ ತೊಂದರೆಯಿಲ್ಲದೆ Yes ಬ್ಯಾಂಕ್‌ನಿಂದ ಹಣವನ್ನು ವರ್ಗಾಯಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


ಪುರಿ ಜಗನ್ನಾಥ ದೇವಾಲಯದ ಹೆಸರಿನಲ್ಲಿ ಒಟ್ಟು 626.44 ಕೋಟಿ ರೂ. ನಗದು ಇದ್ದು, ಅದರಲ್ಲಿ 592 ಕೋಟಿ ರೂ.ಗಳನ್ನು ಯೆಸ್ ಬ್ಯಾಂಕ್‌ನಲ್ಲಿ ಇಡಲಾಗಿದೆ ಎಂದು ಕಾನೂನು ಸಚಿವರು ಕಳೆದ ತಿಂಗಳು ವಿಧಾನಸಭೆಗೆ ತಿಳಿಸಿದ್ದರು. 545 ಕೋಟಿ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ರೂಪದಲ್ಲಿದ್ದರೆ, ಉಳಿದ 47 ಕೋಟಿಗಳನ್ನು ಫ್ಲೆಕ್ಸಿ ಖಾತೆಗೆ ಜಮಾ ಮಾಡಲಾಗುತ್ತದೆ.