ತಿರುಚಿರಾಪಳ್ಳಿ: ಇಲ್ಲಿನ ತಿರುವನಾಯ್ಕವಾಲ್‌ನ ಜಂಬುಕೇಶ್ವರ ದೇವಸ್ಥಾನದ ಬಳಿ ಭೂಮಿಯನ್ನು ಅಗೆಯುವಾಗ 1.716 ಕಿಲೋಗ್ರಾಂಗಳಷ್ಟು ತೂಕದ 505 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.


COMMERCIAL BREAK
SCROLL TO CONTINUE READING

ಪತ್ತೆಯಾದ ನಾಣ್ಯಗಳಲ್ಲಿ, 504 ಸಣ್ಣ ಮತ್ತು ಒಂದು ದೊಡ್ಡ ಚಿನ್ನದ ನಾಣ್ಯ ಇವೆ, ಅರೇಬಿಕ್ ಲಿಪಿಯಲ್ಲಿ ಅಕ್ಷರಗಳನ್ನು ಹೊಂದಿದ್ದು, ಅವು ಕ್ರಿ.ಶ 1000-1200ರ ಹಿಂದಿನವು ಎಂದು ಹೇಳಲಾಗಿದೆ. ಈ ನಾಣ್ಯಗಳು ಸುಮಾರು ಏಳು ಅಡಿ ಆಳದಲ್ಲಿ ಕಂಡುಬಂದಿವೆ ಎನ್ನಲಾಗಿದೆ.


ಈಗ ಚಿನ್ನದ ನಾಣ್ಯಗಳನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.