ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ನಿರಂತರವಾಗಿ ಹೆಚ್ಚುತ್ತಿದ್ದು ಜನಸಾಮಾನ್ಯರಿಗೆ ಹಳದಿ ಲೋಹ ಆಕಾಶಕ್ಕೆ ಏಣಿ ಹಾಕಿದಂತಾಗುತ್ತಿದೆ. ಮಂಗಳವಾರ ಚಿನ್ನದ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರ (Gold price) ಈ ಮೊದಲೂ ಹೆಚ್ಚಾಗಿಯೇ ಇತ್ತು. ಆದರೆ ಮಂಗಳವಾರ ಸಂಜೆಯ ಹೊತ್ತಿಗೆ ಚಿನ್ನ ಐತಿಹಾಸಿಕ ದರ ದಾಖಲಿಸಿದ್ದು 10 ಗ್ರಾಂಗೆ 49,500 ರೂ.ಗಳ ಗಡಿ ಮುಟ್ಟಿದೆ.


COMMERCIAL BREAK
SCROLL TO CONTINUE READING

ಮಂಗಳವಾರ ಬೆಳಿಗ್ಗೆ 09.40 ರ ಸುಮಾರಿಗೆ, ಬಹು ಸರಕು ವಿನಿಮಯ ಕೇಂದ್ರದಲ್ಲಿ (ಎಂಸಿಎಕ್ಸ್) ಚಿನ್ನವು 10 ಗ್ರಾಂಗೆ 49120.00 ರೂ.ಗೆ ವಹಿವಾಟು ನಡೆಸುತ್ತಿದ್ದು, ಸುಮಾರು 93.00 ರೂ. ಏರಿಕೆಯಾಗಿ ಎಂಸಿಎಕ್ಸ್‌ನಲ್ಲಿನ ಚಿನ್ನ ಹತ್ತು ಗ್ರಾಂಗೆ 49,078 ರೂ. ತಲುಪಿದೆ.


ಮನೆ ಆಭರಣಗಳಲ್ಲೂ ಹಾಲ್‌ಮಾರ್ಕಿಂಗ್ ಮಾಡಬಹುದು! ಅದಕ್ಕೆ ತಗಲುವ ವೆಚ್ಚ?


ಮಂಗಳವಾರ ಸಂಜೆಯವರೆಗೂ ಚಿನ್ನದಲ್ಲಿ ಉತ್ತಮ ವ್ಯವಹಾರ ಮುಂದುವರೆದು ಸಂಜೆ ಚಿನ್ನದ ಬೆಲೆ 49,500 ರೂ.ಗೆ ಏರಿತು. ಬೆಲೆಗಳಲ್ಲಿನ ಈ ಉಲ್ಬಣವು ನಿರಂತರವಾಗಿ ಮುಂದುವರಿಯಿತು ಮತ್ತು ಸ್ವಲ್ಪ ಸಮಯದ ನಂತರ ಮತ್ತೆ ಬೆಲೆ ಪ್ರತಿ ಗ್ರಾಂಗೆ 49,579 ರೂ.ಗಳ ದಾಖಲೆಯ ಮಟ್ಟ ತಲುಪಿತು.


ಒಂದು ವರ್ಷದಲ್ಲಿ 25% ಏರಿಕೆ ಕಂಡ ಚಿನ್ನ:
 ನಮ್ಮ ಪಾಲುದಾರ ವೆಬ್ಸೈಟ್ ಝೀಬಿಜ್ ಡಾಟ್ ಕಾಮ್ ಪ್ರಕಾರ ಈ ವರ್ಷದ ಆರಂಭದಲ್ಲಿ ಚಿನ್ನವು ಹತ್ತು ಗ್ರಾಂಗೆ 39 ಸಾವಿರ ರೂ. ಇತ್ತು. ಇದು ಇಲ್ಲಿಯವರೆಗೆ ಹತ್ತು ಗ್ರಾಂಗೆ 49500 ರೂ. ತಲುಪಿದ್ದು ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇಕಡಾ 25 ರಷ್ಟು ಏರಿಕೆಯಾಗಿದೆ.


ಚಿನ್ನದ ಜೊತೆಗೆ ಬೆಳ್ಳಿ ಕೂಡ ಗಗನದತ್ತ ಮುಖಮಾದಿದ್ದು ಪ್ರತಿ ಕೆ.ಜಿ.ಗೆ 56881 ರೂ. ತಲುಪಿದೆ.


ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೀವ್ರ ಏರಿಕೆಯಿಂದಾಗಿ ಭಾರತೀಯ ಭವಿಷ್ಯದ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಸೆಪ್ಟೆಂಬರ್ 2013ರ ನಂತರ ಮೊದಲ ಬಾರಿಗೆ ಅಂತಹ ಗರಿಷ್ಠ ಮಟ್ಟವನ್ನು ತಲುಪಿದೆ.