ನವದೆಹಲಿ: Driving License Latest Update: ನಿಮ್ಮ ಚಾಲನಾ ಪರವಾನಗಿ (Driving License) ಅಥವಾ ನೋಂದಣಿ ಪ್ರಮಾಣಪತ್ರ (RC) ಅಥವಾ ಫಿಟ್‌ನೆಸ್ ಪ್ರಮಾಣಪತ್ರ (Fitness Certificate) ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಅವಧಿ ಮುಗಿದಿದೆ ಅಥವಾ ಕೊನೆಗೊಳ್ಳುತ್ತಿದೆ ಎಂದರೆ ಇದೀಗ ನೀವು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಈ ತಿಂಗಳ ಅಂತ್ಯದವರೆಗೆ ನೀವು ಈ ದಾಖಲೆಗಳನ್ನು ನವೀಕರಿಸಬಹುದು.


COMMERCIAL BREAK
SCROLL TO CONTINUE READING

ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ (Corona Second Wave) ಹಿನ್ನೆಲೆ ಈ ಎಲ್ಲಾ ದಾಖಲೆಗಳು ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರಲಿವೆ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಮೊದಲು, ಈ ಎಲ್ಲಾ ದಾಖಲೆಗಳ ಸಿಂಧುತ್ವವು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ ಎನ್ನಲಾಗಿತ್ತು. ಸರ್ಕಾರದ ಈ ಹೆಜ್ಜೆಯಿಂದ ಕೋಟ್ಯಂತರ ವಾಹನ ಸವಾರರಿಗೆ ಭಾರಿ ನೆಮ್ಮದಿ ದೊರೆತಿದೆ.


ಸೆಪ್ಟೆಂಬರ್ 30ರವರೆಗೆ DL ಹಾಗೂ RCಗೆ ಮಾನ್ಯತೆ ಇರಲಿದೆ (DL and RC Renewal)
ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದ ಮತ್ತು ಲಾಕ್‌ಡೌನ್ ನಿರ್ಬಂಧಗಳಿಂದಾಗಿ ನವೀಕರಿಸಲಾಗದ ಈ ದಾಖಲೆಗಳನ್ನು ಇದೀಗ 30 ಸೆಪ್ಟೆಂಬರ್ 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಈ ಸಂಬಂಧ ಸಚಿವಾಲಯವು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಈ ಕಾರಣದಿಂದಾಗಿ, ನಾಗರಿಕರು ಸಾರಿಗೆ ಸಂಬಂಧಿತ ಸೇವೆಗಳಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಕೋರಲಾಗಿತ್ತು ಮತ್ತು  ಈ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡುವವವು, ಸಾಗಾಣಿಕೆದಾರರು ಮತ್ತು ಇತರ ಸಂಸ್ಥೆಗಳಿಗೆ  ಯಾವುದೇ ರೀತಿಯ ಕಿರುಕುಳ ಅಥವಾ ತೊಂದರೆಗಳು ಎದುರಾಗಬಾರದು ಎಂದು ಹೇಳಲಾಗಿತ್ತು.


ಇದನ್ನೂ ಓದಿ-ಏನಿದು ಹೊಸ 'ಬಿಎಚ್' ಭಾರತ್ ಸರಣಿ?: ಪ್ರಯೋಜನೆಗಳು, ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ…


ಹಲವು ಬಾರಿ ವ್ಯಾಲಿಡಿಟಿ ವಿಸ್ತರಣೆಯಾಗಿದೆ
ಕರೋನಾ ಸಾಂಕ್ರಾಮಿಕದ (Corona Pandemic) ದೃಷ್ಟಿಯಿಂದ, ಚಾಲನಾ ಪರವಾನಗಿ (DL Renewal), ಆರ್‌ಸಿ (RC) ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ (Fitness Certificate) ದಾಖಲೆಗಳ ಸಿಂಧುತ್ವವನ್ನು ಹಲವು ಬಾರಿ ಹೆಚ್ಚಿಸಲಾಗಿದೆ. ಮೊದಲು, ಈ ಎಲ್ಲಾ ದಾಖಲೆಗಳು ಜೂನ್ 30, 2021 ರವರೆಗೆ ಮಾನ್ಯವಾಗಿರುಲಿವೆ ಎನ್ನಲಾಗಿತ್ತು. ಇದಕ್ಕೂ ಮೊದಲು ಕೂಡ ಈ ಕುರಿತು  ರಸ್ತೆ ಮತ್ತು ಸಾರಿಗೆ ಸಚಿವಾಲಯವು 30 ಮಾರ್ಚ್ 2020, 9 ಜೂನ್ 2020, 24 ಆಗಸ್ಟ್  2020, 27 ಡಿಸೆಂಬರ್ 2020 ಹಾಗೂ  26  ಮಾರ್ಚ್ 2021 ರಂದು  ಅಡ್ವೈಸರಿ ಜಾರಿಗೊಳಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಲಾಕ್‌ಡೌನ್‌ನ (Lockdown) ನಿರ್ಬಂಧಗಳಿಂದಾಗಿ, ಅಗತ್ಯ ವಸ್ತುಗಳ ಸಾಗಣೆ ಮತ್ತು ಉತ್ಪಾದನೆಯು ಸುಗಮವಾಗಿ ನಡೆಯಬೇಕು ಎಂಬುದು ಸರ್ಕಾರದ ಇದರ ಹಿಂದಿನ ಉದ್ದೇಶವಾಗಿದ್ದು,  ಈ  ದಾಖಲೆಗಳ ಸಿಂಧುತ್ವವನ್ನು ವಿಸ್ತರಿಸಲಾಗಿದೆ ಎಂದಿತ್ತು. ಮೋಟಾರು ವಾಹನ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಮನವರಿಕೆಯಾದಾಗ ಸರ್ಕಾರ ಅವುಗಳ ಸಿಂಧುತ್ವ ಹೆಚ್ಚಳದ ನಿರ್ಧಾರವನ್ನು ಕೈಗೊಂಡಿದೆ.


ಇದನ್ನೂ ಓದಿ- Vehicle Re-Registration : ಕೇಂದ್ರ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ : ವಾಹನ ಮಾಲೀಕತ್ವದ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ!


ಹೊಸ ಲೈಸನ್ಸ್ ಜಾರಿ ಕೆಲಸ ಆರಂಭಗೊಂಡಿದೆ
ಪ್ರಸ್ತುತ, ಯುಪಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾಲನಾ ಪರವಾನಗಿ ಜಾರಿಗೊಳಿಸುವ ಕೆಲಸ ಆರಂಭವಾಗಿದೆ, ಆದರೆ ಪ್ರಸ್ತುತ ಹೊಸ ಪರವಾನಗಿಗಳನ್ನು ಮಾತ್ರ ನೀಡಲಾಗುತ್ತಿದ್ದು, ಪರವಾನಗಿ ನವೀಕರಣ, ಕಲಿಕಾ ಪರವಾನಗಿಗಾಗಿ ಇನ್ನಷ್ಟು ಕಾಯಬೇಕಾಗಲಿದೆ. ಅವಧಿ ಮೀರಿದ ಮೋಟಾರು ವಾಹನ ದಾಖಲೆಗಳ ಸಿಂಧುತ್ವವು ಜೂನ್ 30 ರಂದು ಕೊನೆಗೊಳ್ಳುತ್ತಿತ್ತು,  ಈ ಹಿನ್ನೆಲೆಯಲ್ಲಿ ಮುಂದೆ ತಮ್ಮ ದಾಖಲೆಗಳ ಗತಿ ಏನಾಗಲಿದೆ ಎಂಬ ಆತಂಕ ಜನರ ಮನದಲ್ಲಿ ಮನೆ ಮಾಡಿತ್ತು. ಆದರೆ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಕೋಟ್ಯಂತರ ಜನರಿಗೆ ಭಾರಿ ನೆಮ್ಮದಿ ಸಿಗಲಿದೆ ಎಂಬುದು ಮಾತ್ರ ನಿಜ.


ಇದನ್ನೂ ಓದಿ-Vehicle Registration: ದೇಶದಲ್ಲಿ ವಾಹನ ನೋಂದಣಿ ಸಂಖ್ಯೆ IN ನಿಂದ ಆರಂಭಿಸಲು ಕೇಂದ್ರ ನಡೆಸುತ್ತಿದೆ ಟ್ರಯಲ್! ಏನು ಲಾಭ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.