ನವದೆಹಲಿ: Vehicle Registration - ಕಾರು ಹಾಗೂ ಬೈಕುಗಳ ನೋಂದಣಿ ಸಂಖ್ಯೆಗಾಗಿ ಕೇಂದ್ರ ಸರ್ಕಾರ ನೂತನ ಯೋಜನೆಯೊಂದರ (New Vehicle Registration Policy) ಮೇಲೆ ಕೆಲಸ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ, ಕಾರುಗಳು ಅಥವಾ ಬೈಕುಗಳ ನೋಂದಣಿ ಸಂಖ್ಯೆಗಳು IN ನಿಂದ ಪ್ರಾರಂಭವಾಗಲಿವೆ ಎನ್ನಲಾಗಿದೆ. ಹಲವು ಬಾರಿ ತಮ್ಮ ತವರು ರಾಜ್ಯದಲ್ಲಿ ವಾಹನ ಹೊಂದಿರುವ ವಾಹನ ಸವಾರರು ತಮ್ಮ ನೌಕರಿ ಅಥವಾ ಕೌಟುಂಬಿಕ ಕಾರಣಗಳ ಹಿನ್ನೆಲೆ ಬೇರೆ ರಾಜ್ಯಗಳಿಗೆ ವಾಹನದೊಂದಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಬಳಿ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದಾಗಿ ತಮ್ಮ ಬಳಿ ಇರುವ ವಾಹನದ ಮಾರಾಟ ಮಾಡಿ ವಲಸೆ ಹೋಗುವ ರಾಜ್ಯದಲ್ಲಿ ಹೊಸ ವಾಹನ ಖರಿದಿರುವುದು. ಎರಡನೆಯದಾಗಿ ಇರುವ ವಾಹನವನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿ ಅಲ್ಲಿ ಮರು ನೋಂದಣಿ ಮಾಡಿಸುವುದು. ಹೆಚ್ಚುವರಿ ಪ್ರಕರಣಗಳಲ್ಲಿ ಜನರು ಮೊದಲಿನ ಆಯ್ಕೆಯನ್ನು ಆಯ್ದುಕೊಳ್ಳುತ್ತಾರೆ. ಏಕೆಂದರೆ, ಎರಡನೇ ಆಯ್ಕೆ ಅಷ್ಟೊಂದು ಸುಲಭವಾಗಿಲ್ಲ ಮತ್ತು ದುಬಾರಿ ಕೂಡ ಆಗಿದೆ. ಒಂದು ವೇಳೆ ಕೇಂದ್ರ ಸರ್ಕಾರದ ಈ ಪ್ರಸ್ತಾವನೆ ಜಾರಿಗೆ ಬಂದರೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನದ ಜೊತೆಗೆ ಶಿಫ್ಟ್ ಆದ ಸಂದರ್ಭಗಳಲ್ಲಿ ವಾಹನ ಮಾಲೀಕರಿಗಾಗುವ ತೊಂದರೆ ತಪ್ಪಲಿದೆ. ಮೂಲಗಳು ನೀಡಿರುವ ಒಂದು ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ಕೆಲ ನಾಗರಿಕ-ಕೇಂದ್ರಿತ ಹೆಜ್ಜೆ ಹಾಗೂ ವಾಹನಗಳ ನೋಂದಣಿಗಾಗಿ IT ಆಧಾರಿತ ಪರಿಹಾರದ ಸಂದರ್ಭದಲ್ಲಿ ಜಾರಿಗೆ ತಂದಿದೆ ಎನ್ನಲಾಗಿದೆ. ಅಂದರೆ, ಈ ವ್ಯವಸ್ಥೆಯ ಟ್ರಯಲ್ ಈಗಾಗಲೇ ಆರಂಭಗೊಂಡಿದೆ ಎನ್ನಲಾಗಿದೆ.
ಪ್ರಸ್ತುತ ಕೇವಲ 12 ತಿಂಗಳ ಅವಧಿಗಾಗಿ ಮಾತ್ರ ಎರಡನೇ ರಾಜ್ಯದಲ್ಲಿ ವಾಹನ ಕೊಂಡೊಯ್ಯಬಹುದು
ಪ್ರಸ್ತುತ ವಾಹನ ನೋಂದಣಿಗಾಗಿ ಇರುವ ನಿಯಮಗಳ ಪ್ರಕಾರ, ಒಂದು ವೇಳೆ ನೀವು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಮ್ಮ ವಾಹನವನ್ನು ಕೊಂಡೊಯ್ಯುತ್ತಿದ್ದರೆ, ಆ ರಾಜ್ಯದಲ್ಲಿ ಕೇವಲ 12 ತಿಂಗಳ ಅವಧಿಗಾಗಿ ಮಾತ್ರ ನೀವು ನಿಮ್ಮ ಹಳೆ ನಂಬರ್ ಪ್ಲೇಟ್ ನಿಂದ ವಾಹನ ಚಲಾಯಿಸಬಹುದು. ಈ ಅವಧಿಯ ಬಳಿಕ ವಾಹನ ಮಾಲೀಕರು ಆ ರಾಜ್ಯದಲ್ಲಿ ತಮ್ಮ ಕಾರ್ ಅಥವಾ ಬೈಕನ್ನು ಹೊಸದಾಗಿ ನೋಂದಣಿ ಮಾಡಬೇಕು. ಇದರಲ್ಲಿ ನೀವು ಶಿಫ್ಟ್ ಆಗ ಬಯಸುವ ರಾಜ್ಯದಲ್ಲಿ ಅನ್ವಯವಾಗುವ ರೋಡ್ ಟ್ಯಾಕ್ಸ್ ನೀವು ಭರಿಸಬೇಕು.
ಉದಾಹರಣೆಗಾಗಿ ಬೆಂಗಳೂರಿನಲ್ಲಿ ರೋಡ್ ಟ್ಯಾಕ್ಸ್ ಹೆಚ್ಚಾಗಿದ್ದರೆ, ಬೆಂಗಳೂರಿಗೆ ಶಿಫ್ಟ್ ಆಗಲು ಬಯಸುವವರು ತಮ್ಮ ವಾಹನ ಮರು ನೋಂದಣಿ ಮಾಡುವ ವೇಳೆ ಅಧಿಕ ಮೊತ್ತ ಪಾವತಿಸಬೇಕಾಗಲಿದೆ. ಇದಲ್ಲದೆ ಹಳೆ ರಾಜ್ಯದಲ್ಲಿ ಹೊಸ ರಾಜ್ಯದಲ್ಲಿ ಶಿಫ್ಟ ಆಗಲು NOC ಕೂಡ ಪಡೆಯಬೇಕು ಮತ್ತು ರೋಡ್ ಟ್ಯಾಕ್ಸ್ ಮರುಪಾವತಿಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಸಂಪೂರ್ಣ ಪ್ರಕ್ರಿಯೆ ದೀರ್ಘಕಾಲದ ಪ್ರಕ್ರಿಯೆಯಾಗಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ನಿಯಮದ ಪ್ರಕಾರ ವಾಹನ ನೋಂದಣಿಯ (Vehicle Registration) ಸಮಯದಲ್ಲಿ ಎರಡು ವರ್ಷಗಳ ಅಥವಾ ರಸ್ತೆ ತೆರಿಗೆಯ ದುಪ್ಪಟ್ಟು ಶುಲ್ಕ ವಿಧಿಸಲಾಗುವುದು ಎನ್ನಲಾಗುತ್ತಿದೆ.
ಇದನ್ನೂ ಓದಿ- ವಾಹನ ಮಾಲೀಕರೇ ದಯವಿಟ್ಟು ಗಮನಿಸಿ... ಇಲ್ಲದೆ ಹೋದಲ್ಲಿ ಇಂತಹ ವಾಹನಗಳ ಬಳಕೆ ಕಾನೂನುಬಾಹಿರವಾಗಲಿದೆ
ಟ್ರಯಲ್ ಆರಂಭಗೊಂಡಿದೆ
ಪ್ರಸ್ತುತ ಇದರ ಟ್ರಯಲ್ ಸರ್ಕಾರಿ, PSU ಹಾಗೂ ರಕ್ಷಣಾ ವಿಭಾಗದ ವಾಹನಗಳಿಗೆ ಜಾರಿಗೆ ತರಲಾಗಿದೆ ಎನ್ನಲಾಗಿದೆ. ಇದಲ್ಲದೆ ದೇಶದ ಐದು ರಾಜ್ಯಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿ ಹೊಂದಿರುವ ಸಂಸ್ಥೆಗಳು ಕೂಡ ಈ ಟ್ರಯಲ್ ನಲ್ಲಿ ಶಾಮೀಲಾಗಬಹುದಾಗಿದೆ. ಎಲ್ಲ RTO ಅರ್ಹ ಅಭ್ಯರ್ಥಿಗಳಿಗೆ IN ನಿಂದ ಆರಂಭಗೊಳ್ಳುವ ನಂಬರ್ ಪ್ಲೇಟ್ ಗಳನ್ನು ಜಾರಿಗೊಳಿಸಲಾಗುವುದು ಎನ್ನಲಾಗಿದೆ. ಇದರಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ಶಿಫ್ಟ್ ಆಗುವುದು ಸುಲಭವಾಗಲಿದೆ.
ಇದನ್ನೂ ಓದಿ- ಇನ್ಮುಂದೆ DL-RCಗಾಗಿ RTO ಕಚೇರಿಯ ಚಕ್ಕರ್ ಹೊಡೆಯಬೇಕಾಗಿಲ್ಲ... ಕಾರಣ ಇಲ್ಲಿದೆ
ಇದರಿಂದ ನಾಗರಿಕರಿಗೆ ಅತಿ ಹೆಚ್ಚು ಲಾಭವಾಗಲಿದೆ. ಈ ನಿಯಮ ಒಂದೊಮ್ಮೆ ಜಾರಿಗೆ ಬಂದರೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಶಿಫ್ಟ್ ಆಗುವ ವೇಳೆ ಅವರು ಮರು ನೋಂದಣಿ ಮಾಡಿಸಬೇಕಾದ ಅವಶ್ಯಕತೆ ಇಲ್ಲ. ಇನ್ನೊಂದೆಡೆ ಇದರ ಹಾನಿ (IN Number Plate Benefits, IN Number Plate Disadvantages) ಎಂದರೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯ ವೇಳೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಿಗುತ್ತಿದ್ದ ಆದಾಯದಲ್ಲಿ ಇಳಿಕೆಯಾಗಲಿದೆ. ಇದಲ್ಲದೆ, ಎಲ್ಲ ವಾಹನಗಳು IN ಮೂಲಕ ಆರಂಭಗೊಳ್ಳುವ ನಂಬರ್ ಪ್ಲೇಟ್ ಇರುವ ಕಾರಣ ವಂಚನೆ ಹೆಚ್ಚಾಗುವ ಸಾಧ್ಯತೆ ಇದೆ. IN ನಿಂದ ಆರಂಭಗೊಳ್ಳುವ ರಿಜಿಸ್ಟ್ರೇಷನ್ ಪ್ಲೇಟ್ ಗಳಿಂದ (IN Registered Number Plates) MH, DL, RJ, KA ಹಾಗೂ UP ಇತ್ಯಾದಿಗಳಿಂದ ಆರಂಭಗೊಳ್ಳುವ ನಂಬರ್ ಪ್ಲೇಟ್ ಗಳ ಅಸ್ತಿತ್ವಕ್ಕೆ ಕುತ್ತು ಬರುವ ಸಾಧ್ಯತೆ ಕೂಡ ವರ್ತಿಸಲಾಗುತ್ತಿದೆ.
ಇದನ್ನೂ ಓದಿ- ವಾಹನ ಸವಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.