ನವದೆಹಲಿ: E-Vehicles - ದೇಶಾದ್ಯಂತ  ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು  ಉತ್ತೇಜಿಸಲು, ಕೇಂದ್ರ ಸರ್ಕಾರವು ಈಗಾಗಲೇ ಹಲವು ನೀತಿಗಳನ್ನು (Electric Vehicle Policy) ಜಾರಿಗೊಳಿಸುತ್ತಿದೆ. ಅನೇಕ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡುತ್ತದೆ.  FAME-2 ನೀತಿಯ ಅಡಿಯಲ್ಲಿ, ಸರ್ಕಾರವು ಸಬ್ಸಿಡಿಯನ್ನು ಹೆಚ್ಚಿಸಿದೆ. ಇದರಿಂದ ಜನರು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದಾಗಿದೆ. ಈಗ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಮತ್ತೊಂದು ಪರಿಹಾರವನ್ನು ಘೋಷಿಸಿದೆ.


COMMERCIAL BREAK
SCROLL TO CONTINUE READING

E-Vehiclesಗಳಿಗೆ RC ಶುಲ್ಕ ಇಲ್ಲ
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಬ್ಯಾಟರಿ ಚಾಲಿತ ವಾಹನಗಳಿಗೆ ಅಂದರೆ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಪ್ರಮಾಣಪತ್ರ ಶುಲ್ಕವನ್ನು (e-Vehicle RC Fees) ಮನ್ನಾ ಮಾಡಿದೆ, ಅಂದರೆ ಒಂದು ವೇಳೆ ನೀವೂ ಕೂಡ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ದ್ವಿಚಕ್ರ ವಾಹನವಾಗಲಿ ಅಥವಾ ನಾಲ್ಕು ಚಕ್ರದ ವಾಹನವಾಗಲಿ, ಅದರ ನೋಂದಣಿಗಾಗಿ ನೀವು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೀವು ಈಗಾಗಲೇ ಇ-ವಾಹನವನ್ನು ಹೊಂದಿದ್ದರೆ, ಆರ್‌ಸಿ ನವೀಕರಣಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಕುರಿತು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.


ಇದನ್ನೂ ಓದಿ-Electric Vehicle Subsidy: ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸರ್ಕಾರ ನೀಡುತ್ತಿದೆ ಬಂಪರ್ ಸಬ್ಸಿಡಿ


ಹಲವು ರಾಜ್ಯಗಳು ಜಾರಿಗೊಲಿಸಿವೆ ಇ-ವೆಹಿಕಲ್ ಪಾಲಸಿ
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಚಿವಾಲಯ, ಹೊಸ ನೋಂದಣಿ ಅಂಕಗಳನ್ನು ನೀಡಲು ಬ್ಯಾಟರಿ ಚಾಲಿತ ವಾಹನಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದೆ. ಇ-ಮೊಬಿಲಿಟಿಯನ್ನು  ಉತ್ತೇಜಿಸಲು ಸಚಿವಾಲಯ ಈ ಕ್ರಮ ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು, ದೆಹಲಿ, ಮುಂಬೈ, ರಾಜಸ್ಥಾನ ಮತ್ತು ಗುಜರಾತ್‌ನಂತಹ ಅನೇಕ ದೊಡ್ಡ ರಾಜ್ಯಗಳು ತಮ್ಮದೇ ಆದ ಇ-ವಾಹನ ನೀತಿಯನ್ನು ಜಾರಿಗೆ ತಂದಿವೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Electric Vehicle ಖರೀದಿಯ ಮೇಲೆ ಬಂಪರ್ Subsidy, ಸರ್ಕಾರದ ಮಹತ್ವದ ಘೋಷಣೆ, ಇಲ್ಲಿದೆ ಡೀಟೇಲ್ಸ್


ರಾಜ್ಯಗಳು ಕೂಡ ಭಾರಿ ಸಬ್ಸಿಡಿ ನೀಡುತ್ತಿವೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇಡೀ ದೇಶದಲ್ಲಿ ಅತಿ ಹೆಚ್ಚು ಸಬ್ಸಿಡಿ ನೀಡಲಾಗುತ್ತಿದೆ. ಈ ಸಬ್ಸಿಡಿಯಲ್ಲಿ, ನೀವು 1 ಲಕ್ಷದ 50 ಸಾವಿರ ರೂಪಾಯಿಗಳವರೆಗೆ ಲಾಭ ಪಡೆಯಬಹುದು. ರಾಜಸ್ಥಾನ ಸಾರಿಗೆ ಇಲಾಖೆಯ ಪ್ರಕಾರ, ಸರ್ಕಾರವು ಎಲೆಕ್ಟ್ರಿಕ್ ವಾಹನದ ಖರೀದಿಯ (e-Vehicle Price) ಮೇಲೆ SGST ಮೊತ್ತವನ್ನು ಸರಿದೂಗಿಸಲಿದೆ. ಇದರ ಅಡಿಯಲ್ಲಿ, ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳಿಗೆ ಅವುಗಳ ಬ್ಯಾಟರಿ ಶಕ್ತಿಯನ್ನು ಆಧರಿಸಿ  ಒಂದು ಬಾರಿ ಅನುದಾನದ ಮೊತ್ತವನ್ನು ನೀಡಲಾಗುತ್ತದೆ. ಅದೇ ರೀತಿ, ಮಹಾರಾಷ್ಟ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಬ್ಸಿಡಿ ಮತ್ತು ಪ್ರೋತ್ಸಾಹವನ್ನು ನೀಡುತ್ತಿದೆ. ನೀತಿಯ ಪ್ರಕಾರ, 1 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ 10,000 ರೂಗಳವರೆಗೆ ಪ್ರೋತ್ಸಾಹಕ ಯೋಜನೆಯನ್ನು ಘೋಷಿಸಲಾಗಿದೆ. 15,000 ವಿದ್ಯುತ್ ತ್ರಿಚಕ್ರ ವಾಹನಗಳ ಮೇಲೆ ರೂ. 30,000 ವರೆಗಿನ ಪ್ರೋತ್ಸಾಹಧನ (e-Vehicle Incentives) ಘೋಷಿಸಲಾಗಿದೆ. ಇದಲ್ಲದೇ 10,000 ಗೂಡ್ಸ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮೇಲೆ ರೂ. 30,000 ವರೆಗಿನ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಲಾಗಿದೆ.


ಇದನ್ನೂ ಓದಿ-Ather Energy ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸೋರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ