Electric Vehicle ಖರೀದಿಯ ಮೇಲೆ ಬಂಪರ್ Subsidy, ಸರ್ಕಾರದ ಮಹತ್ವದ ಘೋಷಣೆ, ಇಲ್ಲಿದೆ ಡೀಟೇಲ್ಸ್

Electric Vehicle Subsidy - ಒಂದು ವೇಳೆ ನೀವೂ ಕೂಡ ಎಲೆಕ್ಟ್ರಿಕ್ ವಾಹನ ಖರೀದಿಸಬೇಕು ಎಂದಾದಲ್ಲಿ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಹೌದು, ಸರ್ಕಾರದ ಹೊಸ ನೀತಿಯ ಅಡಿ ಒಂದು ವೇಳೆ ನೀವೂ ಕೂಡ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ನಿಮಗೆ ಸರ್ಕಾರ ಸಹಾಯ ಧನ ನೀಡಲಿದೆ. ಇಲ್ಲಿದೆ ಸಂಪೂರ್ಣ ವಿವರ.

Written by - Nitin Tabib | Last Updated : Jul 19, 2021, 05:17 PM IST
  • ಇಲೆಕ್ಟ್ರಿಕ್ ವಾಹನ ಖರೀದಿಯ ಮೇಲೆ ಸಿಗುತ್ತದೆ ಸಬ್ಸಿಡಿ.
  • ಇದೀಗ ರಾಜಸ್ಥಾನ ಕೂಡ ಸಬ್ಸಿಡಿ ನೀಡುವ ಘೋಷಣೆ ಮಾಡಿದೆ.
  • ಫೇಮ್ 2 ನೀತಿಯ ಅನುಸಾರ ಈ ಘೋಷಣೆ ಮಾಡಲಾಗಿದೆ.
Electric Vehicle ಖರೀದಿಯ ಮೇಲೆ ಬಂಪರ್ Subsidy, ಸರ್ಕಾರದ ಮಹತ್ವದ ಘೋಷಣೆ, ಇಲ್ಲಿದೆ ಡೀಟೇಲ್ಸ್  title=
Electric Vehicle Subsidy (File Photo)

ನವದೆಹಲಿ: ElectricVehicleUpdate - ಒಂದು ವೇಳೆ ನೀವೂ ಕೂಡ ಹೊಸ ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಸರ್ಕಾರದ Fame-2 ನೀತಿ ಜಾರಿಯಾದ ಬಳಿಕ ಎಲೆಕ್ಟ್ರಿಕ್ ವಾಹನ ಖರೀದಿಯ ಮೇಲೆ ಸರ್ಕಾರ ನಿಮಗೆ ಸಬ್ಸಿಡಿ ಕೊಡಲಿದೆ. ಇದುವೆರೆಗೆ ಕೇವಲ ಗುಜರಾತ್, ಮಹಾರಾಷ್ಟ್ರ, ದೆಹಲಿ ಹಾಗೂ ತೆಲಂಗಾಣ ರಾಜ್ಯಗಳಿಗೆ ಮಾತ್ರ ಈ ಲಾಭ ಸಿಗುತ್ತಿತ್ತು. ಆದರೆ, ಇದೀಗ ಈ ಹೊಸ ನೀತಿ ರಾಜಸ್ಥಾನದಲ್ಲಿಯೂ ಕೂಡ ಜಾರಿಗೆ ಬಂದಿದೆ. ಅಲ್ಲಿನ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿಸಬಯಸುವ ಜನರಿಗೆ ನೇರವಾಗಿ ಸಬ್ಸಿಡಿ ನೀಡಲಿದೆ. 

ಇದನ್ನೂ ಓದಿ-

ಎಷ್ಟು ಸಿಗಲಿದೆ ಸಬ್ಸಿಡಿ? (Electric Vehicle Subsidy Latest News Updat)
ರಾಜಸ್ಥಾನದ ಸಾರಿಗೆ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಎಲೆಕ್ತ್ರಿಕ್ ವಾಹನ ಖರೀದಿಸಲು ಬಯಸುವವರಿಗೆ ರಾಜ್ಯ ಸರ್ಕಾರ SGST ಭರಿಸಲಿದೆ . ಇದರ ಅಡಿ ಎಲ್ಲಾ ದ್ವಿಚಕ್ರ, ಮೂರು ಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಬ್ಯಾಟರಿ ಪವರ್ ಗೆ ಅನುಗುಣವಾಗಿ ಒನ್ ಟೈಮ್ ಅನುದಾನ ನೀಡಲಾಗುವುದು ಎಂದಿದೆ. ಈ ಅನುದಾನದ ರಾಶಿ ಏಪ್ರಿಲ್ 1,2021ರಿಂದ ಮಾರ್ಚ್ 31, 2022 ರವರೆಗೆ ಖರೀದಿಸಲಾಗುವ ಹಾಗೂ ನೋಂದಣಿ ನಡೆಸಲಾಗಿರುವ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ಅನ್ವಯಿಸಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಇದನ್ನೂ ಓದಿ-Electric Vehicle Battery: ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ನಿಮ್ಮ ವಾಹನ

ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ಸಬ್ಸಿಡಿ ಸಿಗಲಿದೆ (Electric Vehicle Subsidy Latest News)
ರಾಜಸ್ಥಾನ ಸಾರಿಗೆ ಇಲಾಖೆಯ ಪ್ರಕಾರ, ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು 5 ಸಾವಿರ ರೂ.ಗಳ ಕನಿಷ್ಠ ಸಬ್ಸಿಡಿ ಲಭ್ಯವಿದ್ದು, ಇದು 2 ಕಿ.ವ್ಯಾ.ವರೆಗಿನ ಬ್ಯಾಟರಿ ಹೊಂದಿರುವ ದ್ವಿಚಕ್ರ ವಾಹನಗಳ ಮೇಲೆ ಅನ್ವಯಿಸಲಿದೆ.  ಅದೇ ಸಮಯದಲ್ಲಿ, 5 ಕಿಲೋವ್ಯಾಟ್ ವರೆಗಿನ ವಾಹನಗಳಿಗೆ ಸರ್ಕಾರವು 20 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದೆ. ಈ ರೀತಿಯಾಗಿ ನಿಮಗೆ ಸರ್ಕಾರದವತಿಯಿಂದ ಉತ್ತಮ ಲಾಭ ಸಿಗಲಿದೆ.

ಇದನ್ನೂ ಓದಿ- Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?

ದೆಹಲಿಯಲ್ಲಿ ಅತಿ ಹೆಚ್ಚು ಸಬ್ಸಿಡಿ ಸಿಗುತ್ತದೆ (Electric Vehicle Subsidy)
ದೆಹಲಿಯಲ್ಲಿ ಇಲೆಕ್ಟ್ರಿಕ್ ವಾಹನಗಳ ಮೇಲೆ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಸಬ್ಸಿಡಿ ಸಿಗುತ್ತದೆ. ದೆಹಲಿಯಲ್ಲಿ ನೀಡಲಾಗುವ ಸಬ್ಸಿಡಿಯಲ್ಲಿ ನಿಮಗೆ 1.50 ಲಕ್ಷ ರೂ.ವರೆಗೆ ಲಾಭ ಸಿಗುತ್ತದೆ. ಹೀಗಾಗಿ ಒಂದು ವೇಳೆ ನೀವು ಕೂಡ ವಾಹನ ಖರೀದಿಸಲು ಬಯಸುತ್ತಿದ್ದರೆ ಹಾಗೂ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಇದು ನಿಮಗೊಂದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News