Good News: ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ World Bank ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ ಸರ್ಕಾರ
Project Reward Implementation - ಭಾರತ ಸರ್ಕಾರ (Government Of India), ಕರ್ನಾಟಕ (Government Of Karnataka) ಮತ್ತು ಒಡಿಶಾ ರಾಜ್ಯ ಸರ್ಕಾರಗಳು (Government Of Odisha ) ಹಾಗೂ ವಿಶ್ವಬ್ಯಾಂಕ್ (World Bank) ಗಳು $115 ಮಿಲಿಯನ್ ಮೊತ್ತದ ಸಾಲ ಒಪ್ಪಂದಗಳಿಗೆ ಸಹಿ ಹಾಕಿವೆ, “ನವೀನ ಅಭಿವೃದ್ಧಿ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನವನ್ನು ಪುನರುಜ್ಜೀವನಗೊಳಿಸುವ ಯೋಜನೆಯ (Project REWARD) ಅನುಷ್ಠಾನಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದರೆ, ಕೃಷಿ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆಗಾಗಿ ನಡೆಯುತ್ತಿರುವ ಪ್ರಾಜೆಕ್ಟ್ ರಿವಾರ್ಡ್ ಅಡಿಯಲ್ಲಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ನಡುವೆ $115 ಮಿಲಿಯನ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
Project Reward - ಭಾರತ ಸರ್ಕಾರ (Government Of India) ಮತ್ತು ವಿಶ್ವಬ್ಯಾಂಕ್ ನಡುವೆ $ 115 ಮಿಲಿಯನ್ ಮಹತ್ವದ ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಲಾಗಿದೆ. ಇದರಡಿ ಈ ಮೊತ್ತವನ್ನು ವಿಶ್ವಬ್ಯಾಂಕ್ ಸರ್ಕಾರಕ್ಕೆ ಸಾಲವಾಗಿ ನೀಡಿದೆ. ಈ ಹಣವನ್ನು ಕೃಷಿ ಮತ್ತು ಜಲಾನಯನ ಯೋಜನೆಗಳನ್ನು ಸುಧಾರಿಸಲು ಬಳಸಲಾಗುತ್ತದೆ. Rejuvenating Watersheds for Agricultural Resilience through Innovative Development” (Project REWARD) Project ಅಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
Hijab Controversy Updates: 'ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ', ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ರಾಜ್ಯ ಸರ್ಕಾರ
ಹವಾಮಾನ ಬದಲಾವಣೆಯಿಂದಾಗಿ ವಿಶ್ವಾದ್ಯಂತ ಪ್ರಭಾವ
ಹವಾಮಾನ ಬದಲಾವಣೆಯಿಂದಾಗಿ, ಕೃಷಿ ಬಿಕ್ಕಟ್ಟು ಭಾರತ ಮಾತ್ರವಲ್ಲದೆ ಏಷ್ಯಾದ ಎಲ್ಲಾ ದೇಶಗಳನ್ನು ಎದುರಿಸುತ್ತಿದೆ. ಹವಾಮಾನ ಬಿಕ್ಕಟ್ಟಿನ ಸವಾಲುಗಳು ಪ್ರಪಂಚದಾದ್ಯಂತ ಮುನ್ನೆಲೆಗೆ ಬರುತ್ತಿವೆ ಮತ್ತು ಅವುಗಳನ್ನು ಕಡಿಮೆ ಮಾಡಲು ಕೆಲಸ ಮಾಡಲಾಗುತ್ತಿದೆ. ಹವಾಮಾನ ಬಿಕ್ಕಟ್ಟಿನ ಪರಿಣಾಮವು ಕೃಷಿಯ ಮೇಲೆ ಭಾರತದಲ್ಲಿ ಬಹಳ ಗೋಚರಿಸುತ್ತದೆ. ಮಣ್ಣಿನ ಸವಕಳಿ, ಅನಾವೃಷ್ಟಿ, ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲು ಕಾರಣಗಳಾಗಿವೆ.
ಇದನ್ನೂ ಓದಿ-ಸಚಿವ ಸಂಪುಟ ಸಭೆ : ಮಾರ್ಚ್ 4ಕ್ಕೆ ಬಜೆಟ್ ಮಂಡನೆ ಫಿಕ್ಸ್?!
ಕೃಷಿ ಕ್ಷೇತ್ರದ ಸುಧಾರಣೆಗೆ ಸರ್ಕಾರ ಒತ್ತು ನೀಡುತ್ತಿದೆ
ಮೋದಿ ಸರಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಬೆಳೆ ವಿಮೆ, ರೈತರ ಖಾತೆಗೆ ನಗದು ವರ್ಗಾವಣೆ, ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಗಳು ಇವುಗಳಲ್ಲ್ಲಿ ಶಾಮೀಲಾಗಿವೆ. ಇದಲ್ಲದೇ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 3 ಕೃಷಿ ಕಾನೂನನ್ನು ಸರ್ಕಾರ ಹಿಂಪಡೆದಿದೆ. ಪ್ರಧಾನಿ ಮೋದಿ ಪ್ರತಿ ಭಾಷಣದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಒತ್ತಿ ಹೇಳುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Malya-Modi ಹೆಸರನ್ನು ಉಲ್ಲೇಖಿಸಿ ತನ್ನದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ Varun Gandhi
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.