ನವದೆಹಲಿ : ಕೊರೊನಾವೈರಸ್  ಕೋವಿಡ್ -19 (Covid-19)  ಪ್ರಕರಣ ಮತ್ತು ರೋಗಿಗಳ ಸಾವಿನ ನಡುವೆ ಒಳ್ಳೆಯ ಸುದ್ದಿ ಬಂದಿದೆ. ದೆಹಲಿಯಲ್ಲಿ ಈಗ ಕರೋನದ ಚಿಕಿತ್ಸೆಯು ಮೊದಲಿಗಿಂತ 3 ಪಟ್ಟು ಅಗ್ಗವಾಗಿದೆ. ಗೃಹ ಸಚಿವಾಲಯವು ಪಿಪಿಇ ಕಿಟ್‌ನೊಂದಿಗೆ ಪ್ರತ್ಯೇಕ ಹಾಸಿಗೆಗಳಿಗೆ 8000 ರಿಂದ 10 ಸಾವಿರ ರೂಪಾಯಿ, ವೆಂಟಿಲೇಟರ್‌ಗಳಿಲ್ಲದ ಐಸಿಯು ಹಾಸಿಗೆಗಳಿಗೆ 13000-15000 ಮತ್ತು ವೆಂಟಿಲೇಟರ್ ಹಾಸಿಗೆಗಳೊಂದಿಗೆ 15000-18000 ರೂಪಾಯಿ ದರವನ್ನು ಜಾರಿಗೆ ತರಲು ಶಿಫಾರಸು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಈ ಶಿಫಾರಸುಗಳನ್ನು ಜಾರಿಗೆ ತರಲು ದೆಹಲಿ ಸರ್ಕಾರದ ಔಪಚಾರಿಕ ಆದೇಶ ಶೀಘ್ರದಲ್ಲೇ ಜಾರಿಗೆ ಬರಲಿದೆ. ಈಗ ಈ ಬೆಲೆಗಳು ಪಿಪಿಇ ಕಿಟ್ ಹೊರತುಪಡಿಸಿ 24000-25000, 34000-43000 ಮತ್ತು 44000-54000 ರೂಪಾಯಿಗಳಾಗಿವೆ. ಗೃಹ ಸಚಿವಾಲಯವು ನೀತಿ ಆಯೋಗ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು, ಅದು ಹೊಸ ದರಗಳನ್ನು ಶಿಫಾರಸು ಮಾಡಿತು.


ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಕ್ವಾರೆಂಟೈನ್ ಪ್ರೊಟೊಕಾಲ್ ಬದಲಾವಣೆ


ಚೇತರಿಕೆಗೊಳ್ಳುತ್ತಿರುವವರ ದರ ಸುಧಾರಿಸಿದೆ:
ಇದು ಮಾತ್ರವಲ್ಲ ಸರ್ಕಾರದ ಪ್ರಕಾರ ಭಾರತದಲ್ಲಿ ಕರೋನಾದಿಂದ ಚೇತರಿಕೆ ಪ್ರಮಾಣವು 53.79%ಕ್ಕೆ ಏರಿದೆ. ಇದಲ್ಲದೆ 1 ದಿನದಲ್ಲಿ ಸುಮಾರು 10386 ರೋಗಿಗಳನ್ನು ಗುಣಪಡಿಸಲಾಗಿದೆ. ಇದರೊಂದಿಗೆ ರೋಗದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 204710ಕ್ಕೆ ತಲುಪಿದೆ. ಪ್ರಸ್ತುತ ಸುಮಾರು 163248 ಜನರನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಅಥವಾ ಅವರಿಗೆ ಮನೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ.


13586 ಹೊಸ ಪ್ರಕರಣಗಳು:
ಆದಾಗ್ಯೂ ಕಳೆದ 24 ಗಂಟೆಗಳಲ್ಲಿ 13586 ಹೊಸ  ಕರೋನವೈರಸ್ (Coronavirus)  ಸೋಂಕಿನ ಪ್ರಕರಣಗಳು ದಾಖಲಾಗಿರುವ ಬಗ್ಗೆ ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದು ಬಂದಿದೆ. ಇದು ಇದುವರೆಗಿನ ದಾಖಲಾದ ರೋಗಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು. 336 ರೋಗಿಗಳು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 380532 ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ. ಚೇತರಿಕೆ ಕಂಡ ರೋಗಿಗಳ ಸಂಖ್ಯೆ 204710ಕ್ಕೆ ತಲುಪಿದೆ. ಈವರೆಗೆ 12573 ರೋಗಿಗಳು ಸಾವನ್ನಪ್ಪಿದ್ದಾರೆ.


ದೆಹಲಿಯಲ್ಲಿ  2877 ಹೊಸ ಪ್ರಕರಣಗಳು :
ದೆಹಲಿಯಲ್ಲಿ ಹೊಸದಾಗಿ 2877 ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕರೋನಾ ವೈರಸ್ ಸೋಂಕಿತ ವ್ಯಕ್ತಿಗಳ ಸಂಖ್ಯೆ 49,979ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಕರೋನಾ ವೈರಸ್‌ನಿಂದ ದೆಹಲಿಯಲ್ಲಿ 65 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕರೋನಾದಿಂದ ಇದುವರೆಗೆ 1969 ಜನರು ಸಾವನ್ನಪ್ಪಿದ್ದಾರೆ.