ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬಡೋದಾದಲ್ಲಿ ಮಹಿಳಾ ಗ್ರಾಹಕರು ಸೇವಿಂಗ್ ಅಕೌಂಟ್ ತೆರೆದರೆ ಅವರಿಗೆ ರೂ.50000 ಮೌಲ್ಯದ ಆರೋಗ್ಯ ವಿಮೆ ಉಚಿತವಾಗಿ ನೀಡಲಾಗುತ್ತಿದೆ. ಈ ಆಫರ್ ನ ಲಾಭವನ್ನು ಮಾರ್ಚ್ 20, 2020ರವರೆಗೆ ಪಡೆಯಬಹುದಾಗಿದೆ. ಈ ವಿಶೇಷ ಸೇವಿಂಗ್ ಖಾತೆಗೆ ಬ್ಯಾಂಕ್, ಬಡೋದಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ಎಂಬ ಹೆಸರನ್ನು ಇಟ್ಟಿದೆ. ಈ ರೀತಿಯ ಅಕೌಂಟ್ ನ ಹಲವು ಲಾಭಗಳಿವೆ.


COMMERCIAL BREAK
SCROLL TO CONTINUE READING

ಈ ಅಕೌಂಟ್ ನ ಲಾಭಗಳು
ಮಹಿಳಾ ಗ್ರಾಹಕರು ಒಂದು ವೇಳೆ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆದರೆ, ಅಂತಹ ಮಹಿಳಾ ಗ್ರಾಹಕರಿಗೆ ರೂ. 2 ಲಕ್ಷ ಮೌಲ್ಯದ ಪರ್ಸನಲ್ ಇನ್ಸೂರೆನ್ಸ್ ಲಾಭದ ಜೊತೆಗೆ ಪ್ಲಾಟಿನಂ ಕಾರ್ಡ್ ಲಾಭ ಕೂಡ ಸಿಗಲಿದೆ. ಈ ಖಾತೆಯನ್ನು ಮೂಲವಾಗಿರಿಸಿ ಮಹಿಳೆಯರು ತಮ್ಮ ಮಕ್ಕಳ ಹೆಸರಿನಲ್ಲಿ ಝಿರೋ ಬ್ಯಾಲೆನ್ಸ್ ಅಕೌಂಟ್ ತೆರೆಯುವ ಸೌಲಭ್ಯದ ಜೊತೆಗೆ ಉಚಿತವಾಗಿ ಲಾಕರ್ ವ್ಯವಸ್ಥೆ ಕೂಡ ಪಡೆಯಬಹುದು. ಅಷ್ಟೇ ಅಲ್ಲ ದ್ವಿಚಕ್ರ ವಾಹನ ಹಾಗೂ ಶೈಕ್ಷಣಿಕ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು. ಇವುಗಳನ್ನು ಹೊರತುಪಡಿಸಿ ಬ್ಯೂಟಿ, ಗ್ರಾಸರಿ ಹಾಗೂ ಲೈಫ್ ಸ್ಟೈಲ್ ವಸ್ತುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಸಹ ಪಡೆಯಬಹುದು.



ಪರ್ಸನಲ್ ಲೋನ್ ಮೇಲೆ ಪ್ರೊಸೆಸಿಂಗ್ ಚಾರ್ಜ್ ನೀಡಬೇಕಾಗಿಲ್ಲ
ಬ್ಯಾಂಕ್ ಆಫ್ ಬಡೋದಾ ವೆಬ್ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ, ಈ ರೀತಿಯ ಅಕೌಂಟ್ ಹೊಂದಿರುವ ಮಹಿಳಾ ಗ್ರಾಹಕರು ಒಂದು ವೇಳೆ ವೈಯಕ್ತಿಕ ಸಾಲ ಪಡೆದರೆ ಈ ಸಾಲ ಪಡೆಯಲು ಪ್ರೊಸೆಸಿಂಗ್ ಚಾರ್ಜ್ ನೀಡುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.


ಇದರ ಜೊತೆಗೆ ಬ್ಯಾಂಕ್ ಆಫ್ ಬಡೋದಾ ಈಜಿ ಕ್ರೆಡಿಟ್ ಕಾರ್ಡ್ ಮೇಲೆ ಜಾಯ್ನಿಂಗ್ ಶುಲ್ಕ ನೀಡುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಮೊದಲ ಒಂದು ವರ್ಷದ ಅವಧಿಯವರೆಗೆ DMAT ಅಕೌಂಟ್ ಮೇಲೆ ಬೀಳುವ ಮೆಂಟೆನೆಂಸ್ ಚಾರ್ಜ್ ಕೂಡ ನೀಡುವದು ಅಗತ್ಯವಿಲ್ಲ. ಈ ಖಾತೆಗಳಿಗೆ ಮೊದಲು ಒಂದು ವರ್ಷದ ಅವಧಿಗಾಗಿ SMS ಶುಲ್ಕ ನೀಡುವುದು ಕೂಡ ಅಗತ್ಯವಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.


ಈ ವಿಷಯಗಳನ್ನು ಗಮನದಲ್ಲಿಡಿ
ಈ ಸ್ಪೆಷಲ್ ಅಕೌಂಟ್ ನಲ್ಲಿ ಹೋಮ್ ಅಥವಾ ಲೋಕಲ್ ಬ್ರಾಂಚ್ ನಲ್ಲಿ ಹಣ ಜಮಾ ಮಾಡಲು ಕೂಡ ಯಾವುದೇ ಚಾರ್ಜ್ ನೀಡಬೇಕಾಗಿಲ್ಲ. ಈ ಖಾತೆ ಮೂಲಕ ನಿತ್ಯ ರೂ.20000ವರೆಗೆ ಕ್ಯಾಶ್ಲೆಸ್ ವಹಿವಾಟು ನಡೆಸಬಹುದಾಗಿದೆ. ಆದರೆ, ಡೂಪ್ಲಿಕೇಟ್ ಪಾಸ್ ಬುಕ್ ಪಡೆಯಲು ರೂ.100ವರೆಗೆ ಶುಲ್ಕ ನೀಡಬೇಕಾಗಲಿದೆ. ಇಲ್ಲಿ ನಿಮಗೆ ನಾಮಿನೇಷನ್ ಸೌಲಭ್ಯ ಕೂಡ ದೊರೆಯಲಿದೆ.