Good News! Petrol-Diesel ನಿಂದ ಹೆಚ್ಚಾಗುತ್ತಿರುವ ಹಣದುಬ್ಬರಕ್ಕೆ ಬೀಳುತ್ತಾ ಕಡಿವಾಣ? ಸರ್ಕಾರದಿಂದ ಈ ಮಹತ್ವದ ನಿರ್ಧಾರ ಸಾಧ್ಯತೆ
Petrol-Diesel Price: ದೀರ್ಘಕಾಲದಿಂದ ಹೆಚ್ಚಾಗುತ್ತಿರುವ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ನ (Petrol-Diesel Price) ಹಣದುಬ್ಬರದಿಂದ (Inflation) ಶ್ರೀಸಾಮಾನ್ಯರಿಗೆ ಶೀಘ್ರದಲ್ಲಿಯೇ ನೆಮ್ಮದಿ ಸಿಗುವ ನಿರೀಕ್ಷೆ ಇದೆ. ಹೌದು, ಪೆಟ್ರೋಲ್-ಡಿಸೇಲ್ ಗೆ ಸಂಬಂಧಿಸಿದ ಪ್ರಸ್ತಾವನೆಯನ್ನು 45 ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ (GST Council) ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ನವದೆಹಲಿ: Petrol- Diesel Price - ಪೆಟ್ರೋಲ್-ಡಿಸೇಲ್ ನಿಂದ ಹೆಚ್ಚಾಗುತ್ತಿರುವ ಹಣದುಬ್ಬರಕ್ಕೆ (Inflation) ಶೀಘ್ರದಲ್ಲೇ ಕಡಿವಾಣ ಬೀಳುವ ಸಾಧ್ಯತೆ ಇದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೇಲೆ ಒಂದೇ ರಾಷ್ಟ್ರೀಯ ದರದ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ (Petroleum Products) ಮೇಲಿನ ತೆರಿಗೆಯನ್ನು ಮಂತ್ರಿಗಳ ಸಮಿತಿ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ. ವಿಷಯ ತಜ್ಞರ ಪ್ರಕಾರ, ಮುಂದಿನ ಸಭೆಯ ವೇಳೆ ಗ್ರಾಹಕ ಬೆಲೆ (Consumer Price) ಹಾಗೂ ಸರ್ಕಾರದ ಆದಾಯದಲ್ಲಿ (Government Revenue) ಸಂಭಾವ್ಯ ದೊಡ್ಡ ಬದಲಾವಣೆಗೆ ಹೆಜ್ಜೆಯನ್ನಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಶುಕ್ರವಾರ ಲಖನೌನಲ್ಲಿ ನಡೆಯಬೇಕಿರುವ 45 ನೇ ಜಿಎಸ್ಟಿ ಕೌನ್ಸಿಲ್ (GST Council) ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರ ಅಧ್ಯಕ್ಷತೆಯ ಪ್ಯಾನೆಲ್ ಈ ಕುರಿತು ವಿಚಾರ-ವಿಮರ್ಶೆ ನಡೆಸಲಿದೆ.
ಹೇಗಾಗುತ್ತದೆ GST System ನಲ್ಲಿನ ಬದಲಾವಣೆ? (Petrol-Disel Latest News)
ಜಿಎಸ್‌ಟಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಪ್ಯಾನಲ್‌ನ ನಾಲ್ಕನೇ ಮೂರು ಭಾಗದ ಸದಸ್ಯರ ಅನುಮೋದನೆ ಅಗತ್ಯವಿದೆ. ಎಲ್ಲಾ ರಾಜ್ಯಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗುತ್ತಾರೆ. ಆದರೆ, ಇಂಧನವನ್ನು GST ವ್ಯಾಪ್ತಿಗೆ (Petrol-Disel Under GST) ತರುವುದಕ್ಕೆ ಕೆಲ ಪ್ರತಿನಿಧಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಇದರಿಂದ ಕೇಂದ್ರ ಸರ್ಕಾರಕ್ಕೆ ಆದಾಯ ಗಳಿಕೆ ಮಾಡಿ ಕೊಡುವ ಒಂದು ದೊಡ್ಡ ಸಾಧನವನ್ನೇ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದಂತಾಗಲಿದೆ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ- Big Update: Covishield-Covaxin ಲಸಿಕೆ ಹಾಕಿಸಿಕೊಂಡವರಲ್ಲಿ ಕ್ರಮೇಣ 3-2 ತಿಂಗಳಲ್ಲಿ Antibodies ಡೌನ್: ಅಧ್ಯಯನ
ಶ್ರೀಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಹಾಕುತ್ತಿವೆ ಪೆಟ್ರೋಲ್-ಡಿಸೇಲ್ ಬೆಲೆ
ದೇಶಾದ್ಯಂತ ಪೆಟ್ರೋಲ್-ಡಿಸೇಲ್ ಬೆಲೆಗಳು (Government On Inflation) ನಿರಂತರವಾಗಿ ಏರಿಕೆಯಾಗುತ್ತಿವೆ. ಇದರಿಂದ ದೇಶದ ಶ್ರೀಸಾಮಾನ್ಯ ಕಂಗಾಲಾಗಿದ್ದಾನೆ. ಆದರೆ, ಏತನ್ಮಧ್ಯೆ ಮಂಗಳವಾರ ಸೆಪ್ಟೆಂಬರ್ 14ರಂದು ಸತದ 9 ದಿನಗಳವರೆಗೆ ಬೆಲೆಗಳು ಸ್ಥಿರವಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರ ಹೊರತಾಗಿಯೂ ಕೂಡ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.101.19 ಇದ್ದಾರೆ. ಡಿಸೇಲ್ ಲೀಟರ್ ಗೆ ರೂ.88.62ರಷ್ಟಿದೆ. ಇನ್ನೊಂದೆಡೆ ಮುಂಬೈನಲ್ಲಿ ಕ್ರಮವಾಗಿ ಈ ಬೆಲೆ 107.26 ರೂ. ಹಾಗೂ 96.19ರೂ ಪ್ರತಿ ಲೀಟರ್ ಆಗಿದೆ.
ಇದನ್ನೂ ಓದಿ-Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!
ದುಬಾರಿ ಪೆಟ್ರೋಲಿಯಮ್ ಉತ್ಪನ್ನಗಳಿಂದ ತುಂಬಿದೆ ಸರ್ಕಾರಿ ಖಜಾನೆ
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸರ್ಕಾರದ (Central Government) ಅಬಕಾರಿ ಸುಂಕ ಸಂಗ್ರಹವು ಶೇ. 48 ರಷ್ಟು ಹೆಚ್ಚಾಗಿದೆ. ಅಂದರೆ, ಬೆಲೆ ಏರಿಕೆಯ ನಡುವೆಯೂ, ಪೆಟ್ರೋಲ್ ಮತ್ತು ಡೀಸೆಲ್ ಸರ್ಕಾರದ ಬೊಕ್ಕಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ಅಬಕಾರಿ ಸುಂಕ ಸಂಗ್ರಹವು 2021 ರ ಏಪ್ರಿಲ್ ನಿಂದ ಜುಲೈವರೆಗೆ 1 ಲಕ್ಷ ಕೋಟಿ ದಾಟಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 67,895 ಕೋಟಿ ರೂ. ಗಳಷ್ಟಿತ್ತು. ಇದೇ ವೇಳೆ 2020-21ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿದ ತೆರಿಗೆಯಲ್ಲಿ ಶೇ.88 ರಷ್ಟು ಏರಿಕೆಯಾಗಿದೆ ಮತ್ತು ಈ ಮೊತ್ತವು 3.35 ಲಕ್ಷ ಕೋಟಿಗಳಷ್ಟಿದೆ.
ಇದನ್ನೂ ಓದಿ-ಇಂದು ಆಗಸ ಅದ್ಭುತ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ, ಭೂಮಿಯ ತೀರಾ ಹತ್ತಿರಕ್ಕೆ ಬರಲಿದೆ ಈ ನಿಗೂಢ ಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.