Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!

ಭಯಾನಕ ಚಿತ್ರಗಳನ್ನು ವೀಕ್ಷಿಸಲಿಚ್ಛಿಸುವ ಪ್ರೇಕ್ಷಕನ ಹೃದಯ ಬಡಿತವನ್ನು ಪರಿಶೀಲಿಸಿಲು ಅವರಿಗೆ ಫಿಟ್‌ಬಿಟ್‌ ನೀಡಲಾಗುತ್ತದೆ ಅಂತಾ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Written by - Puttaraj K Alur | Last Updated : Sep 14, 2021, 03:21 PM IST
  • ಹಾರರ್ ಸಿನಿಮಾ ಪ್ರೇಮಿಗಳಿಗೆ ಅಮೆರಿಕದ ಕಂಪನಿ ನೀಡುತ್ತಿದೆ ಭರ್ಜರಿ ಆಫರ್
  • 10 ದಿನದಲ್ಲಿ 13 ಭಯಾನಕ ಸಿನಿಮಾ ವೀಕ್ಷಿಸುವವರಿಗೆ ಸಿಗಲಿದೆ 95 ಸಾವಿರ ರೂ.
  • ಪುಕ್ಕಟೆ ಮನರಂಜನೆ ಜೊತೆಗೆ ಕೈತುಂಬಾ ಹಣ ಗಳಿಸಲು ಸೆ.26ರೊಳಗೆ ಅರ್ಜಿ ಸಲ್ಲಿಸಿ
Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..! title=
ಹಾರರ್ ಸಿನಿಮಾ ವೀಕ್ಷಿಸುವವರಿಗೆ ಹಣ ಗಳಿಸುವ ಅವಕಾಶ(Photo Courtesy: @Zee News)

ನವದೆಹಲಿ: ನೀವು ಹಾರರ್ ಸಿನಿಮಾ(Horror Movies)ಗಳನ್ನು ನೊಡಲು ಇಷ್ಟಪಡುತ್ತೀರಾ..? ಭಯಾನಕ ಚಿತ್ರಗಳೆಂದರೆ ನಿಮಗೆ ಇಷ್ಟಾನಾ..? ದೆವ್ವ, ಭೂತ ಮತ್ತು ಕ್ರೈಂ ಆಧಾರಿತ ಸಿನಿಮಾಗಳನ್ನು ನೋಡುವ ಹವ್ಯಾಸ ನಿಮ್ಮದಾಗಿದ್ದರೆ ಒಂದು ಉತ್ತಮ ಹಣ ಗಳಿಸುವ ಅವಕಾಶ ಇಲ್ಲಿದೆ. ಹೌದು, ಅಕ್ಟೋಬರ್ ತಿಂಗಳಿನಲ್ಲಿ 13 ಹಾರರ್ ಸಿನಿಮಾಗಳನ್ನು ವೀಕ್ಷಿಸಲು ಗಟ್ಟಿ ಗುಂಡಿಗೆ ಇರುವವರಿಗೆ ಅಮೆರಿಕಾ ಕಂಪನಿಯೊಂದು ಈ ಸದಾವಕಾಶವನ್ನು ಕಲ್ಪಿಸಿದೆ.

ಭಯಾನಕ ಸಿನಿಮಾ(Horror Movies)ಗಳನ್ನು ವೀಕ್ಷಿಸಬಯಸುವವರು 10 ದಿನಗಳಲ್ಲಿ ಒಟ್ಟು 13 ಹಾರರ್ ಚಲನಚಿತ್ರಗಳನ್ನು ನೋಡಬೇಕು. ಇದಕ್ಕೆ ಕಂಪನಿ 1,300 ಡಾಲರ್(ಸುಮಾರು 95 ಸಾವಿರ ರೂ.) ಹಣವನ್ನು ಪಾವತಿಸುತ್ತದೆ. ಹಾರರ್ ಸಿನಿಮಾಗಳನ್ನು ನೋಡುತ್ತಾ ಸಖತ್ ಮನರಂಜನೆಯನ್ನು ನೀವು ಪಡೆಯಬಹುದು.

ಇದನ್ನೂ ಓದಿ: ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ

ನೀವು ಪುಕ್ಕಟೆಯಾಗಿ 13 ಹಾರರ್ ಸಿನಿಮಾ(Horror Movies)ಗಳನ್ನು ವೀಕ್ಷಿಸಬಹುದು. ಭಯಾನಕ ಚಿತ್ರಗಳನ್ನು ವೀಕ್ಷಿಸಲಿಚ್ಛಿಸುವ ಪ್ರೇಕ್ಷಕನ ಹೃದಯ ಬಡಿತವನ್ನು ಪರಿಶೀಲಿಸಿಲು ಅವರಿಗೆ ಫಿಟ್‌ಬಿಟ್‌ ನೀಡಲಾಗುತ್ತದೆ ಅಂತಾ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಿನಿಮಾ ಬಜೆಟ್​ನ ಮೌಲ್ಯವು ಅದು ನೀಡುವ ಪರಿಣಾಮದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಅಂತಾ ಪರಿಶೀಲಿಸುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. 13 ಸಿನಿಮಾ ನೋಡುವ ಪ್ರೇಕ್ಷಕನನ್ನು ‘ಭಯಾನಕ ಚಲನಚಿತ್ರ ಹೃದಯದ ವಿಶ್ಲೇಷಕ’ ಎಂದು ಹೆಸರಿಸಲಾಗುವುದು.

‘ಮುಂಬರುವ ಭಯಾನಕ ಚಿತ್ರಗಳನ್ನು ಆಧರಿಸಿ ಫೈನಾನ್ಸ್(ಹಣಕಾಸು) ವಿಷಯದಲ್ಲಿ ಹೆಚ್ಚಿನ ಬಜೆಟ್​ನಿಂದ ತಯಾರಾದ ಹಾರರ್ ಸಿನಿಮಾಗಳು ಕಡಿಮೆ ಬಜೆಟ್​ನಿಂದ ತಯಾರಾದ ಹಾರರ್ ಚಿತ್ರಗಳಿಗಿಂದ ಹೆಚ್ಚಿನ ಭಯ ಸೃಷ್ಟಿಸುತ್ತಿವೆಯೇ ಎಂದು ತಿಳಿಯುವ ಪ್ರಯತ್ನದಲ್ಲಿದ್ದೇವೆ. ಇದನ್ನು ತಿಳಿಯಲು ನಮಗೆ ನೀವು ಸಹಾಯ ಮಾಡುತ್ತೀರಾ? ಫಿಟ್​ಬಿಟ್(Fit Bit​)ಧರಿಸುವ ಮೂಲಕ ಸಿನಿಮಾಗೆ ಅನುಗುಣವಾಗಿ ಎಷ್ಟು ಭಯವನ್ನು ಉಂಟುಮಾಡುತ್ತದೆ ಎಂಬುದರ ಮೇಲ್ವಿಚಾರಣೆಗೆ ಸಹಾಯಕರಾಗುತ್ತೀರಾ?’ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

ಹಾಗಾದರೆ ಈ 13 ಭಯಾನಕ ಚಿತ್ರಗಳು ಯಾವುವು? ಅದರ ಪಟ್ಟಿ ಇಲ್ಲಿದೆ ನೋಡಿ: 1) Amityville Horror, 2) A Quiet Place, 3) A Quiet Place Part 2, 4) Candyman, 5)Insidious, 6)The Blair Witch Project, 7) Sinister, 8) Get Out, 9) The Purge, 10) Halloween(2018), 11) Paranormal Activity 12) Annabelle, ಮತ್ತು 13ನೇ ಸಿನಿಮಾ Saw ಆಗಿದೆ.

10 ದಿನಗಳಲ್ಲಿ 13 ಹಾರರ್ ಸಿನಿಮಾಗಳನ್ನು ವೀಕ್ಷಿಸುವವರಿಗೆ 95 ಸಾವಿರ ರೂ. ನಗದು ಜೊತೆಗೆ ಫ್ರೈಟ್ ಫೆಸ್ಟ್ ನ ಬಾಡಿಗೆ ವೆಚ್ಚವನ್ನು ಭರಿಸಲು 50 ಡಾಲರ್(3,680 ರೂ.) ಗಿಫ್ಟ್ ಕಾರ್ಡ್ ಅನ್ನು ನೀಡುವುದಾಗಿ ಕಂಪನಿ ಹೇಳಿದೆ. ಆಸಕ್ತ ಹಾರರ್ ಸಿನಿಮಾ ಪ್ರೇಮಿಗಳು ಅರ್ಜಿ ಸಲ್ಲಿಸಬಹುದು. ಅದೃಷ್ಟವಂತರಿಗೆ ಪುಕ್ಕಟೆ ಮನರಂಜನೆಯ ಜೊತೆಗೆ ಕೈತುಂಬಾ ಹಣವೂ ಸಿಗಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ ದಿನಾಂಕವಾಗಿದೆ. ಆದರೆ ಈ ಸ್ಪರ್ಧೆಯಲ್ಲಿ ಕೇವಲ ಅಮೆರಿಕದಲ್ಲಿರುವ 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News