ನವದೆಹಲಿ: Chance To Win 15 Lakh Rupees - ಒಂದು ವೇಳೆ ನೀವೂ ಕೂಡ ಮನೆಯಲ್ಲಿಯೇ ಕುಳಿತು ಬಂಪರ್ ಗಳಿಕೆ ಮಾಡಲು ಬಯಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಹೌದು ಸರ್ಕಾರ ನಿಮಗೆ 15 ಲಕ್ಷ ರೂ ಗೆಲ್ಲುವ ಅವಕಾಶ ನೀಡುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ 2021ರ (Union Budget 2021) ಮಂಡನೆಯ ವೇಳೆ, ಸರ್ಕಾರ ಇನ್ಫ್ರಾಸ್ಟ್ರಕ್ಚರ್ ಫಂಡಿಂಗ್ ಗಾಗಿ ಡೆವಲಪ್ಮೆಂಟ್ ಫೈನಾನ್ಸಿಯಲ್ ಇನ್ಸ್ಟಿಟ್ಯೂಶನ್ ರಚನೆಯ ಕುರಿತು ಘೋಷಣೆ ಮಾಡಿತ್ತು. ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್ ಲೈನ್ ಅಡಿ 2024-25ರವರೆಗೆ 7000ಕ್ಕೂ ಅಧಿಕ ಯೋಜನೆಗಳ ಮೇಲೆ ಸುಮಾರು 111 ಲಕ್ಷ ಕೋಟಿ ರೂ.ಹೂಡಿಕೆ ಮಾಡುವ ಗುರಿ ಸರ್ಕಾರ ಹೊಂದಿದೆ.


COMMERCIAL BREAK
SCROLL TO CONTINUE READING

15 ಲಕ್ಷ ಗೆಲ್ಲುವ ಅವಕಾಶ
My Gov India ರಾಷ್ಟ್ರೀಯ ಮಾಧ್ಯಮದ ಮೇಲೆ ಇದರ ಮಾಹಿತಿ ನೀಡಿದೆ. ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ವಿಭಾಗ ಇದಕ್ಕಾಗಿ ಹೆಸರು (Name), Logo ಹಾಗೂ ಟ್ಯಾಗ್ ಲೈನ್ (Tagline) ಸೂಚಿಸಲು ಜನರನ್ನು ಆಹ್ವಾನಿಸಿದೆ. ಇದಕ್ಕಾಗಿ ನೀವು 15 ಆಗಸ್ಟ್ 2021 ರವರೆಗೆ ನಿಮ್ಮ ಸಲಹೆಗಳನ್ನು ಸೂಚಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರಿಗೆ 15 ಲಕ್ಷ ರೂ. ಬಹುಮಾನದ ರೂಪದಲ್ಲಿ ನೀಡಲಾಗುವುದು ಎನ್ನಲಾಗಿದೆ. 


Cloudburst Hits J&K: ಜಮ್ಮು-ಕಾಶ್ಮೀರದಲ್ಲಿ ಮೋಡ ಸ್ಫೋಟ, 4 ಸಾವು, 39 ನಾಪತ್ತೆ


ಈ ರೀತಿ ಹೆಸರು ನೊಂದಾಯಿಸಿ
>> ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಎಲ್ಲಕ್ಕಿಂತ ಮೊದಲು mygov.in ಪೋರ್ಟಲ್ ಗೆ ಭೇಟಿ ನೀಡಿ.
>> ಈ ತಾಣದ ಕಾಂಟೆಸ್ಟ್ ವಿಭಾಗದಲ್ಲಿ ನೀಡಲಾಗಿರುವ ಲಾಗ್ ಇನ್ ಟು ಪಾರ್ಟಿಸಿಪೆಟ್ ಟ್ಯಾಬ್ ಮೇಲೆ ಕ್ಲಿಕ್ಕಿಸಿ. 
>> ಇದಾದ ಬಳಿಕ ರಿಜಿಸ್ಟ್ರೇಷನ್ ವಿವರ ಭರ್ತಿ ಮಾಡಬೇಕು. 
>> ನೋಂದಣಿ ಪೂರ್ಣಗೊಂಡ ಬಳಿಕ ನೀವು ನಿಮ್ಮ ಎಂಟ್ರಿ ದಾಖಲಿಸಬೇಕು.


ಇದನ್ನೂ ಓದಿ-WhatsApp: ವಾಟ್ಸಾಪ್‌ನ ಈ ಅಪಾಯಕಾರಿ ಸೆಟ್ಟಿಂಗ್‌ಗಳನ್ನು ತಕ್ಷಣ ಬದಲಾಯಿಸಿ, ಇಲ್ಲವೇ ನಷ್ಟವಾಗಬಹುದು


ಯಾರಿಗೆ ಎಷ್ಟು ಬಹುಮಾನ ಸಿಗಲಿದೆ?
ಸಂಸ್ಥೆಯ ಹೆಸರು ಸೂಚಿಸುವವರಿಗೆ ಮೊದಲನೆಯ ಬಹುಮಾನದ ರೂಪದಲ್ಲಿ 5 ಲಕ್ಷ ರೂ, ಎರಡನೇ ಬಹುಮಾನದ ರೂಪದಲ್ಲಿ 3 ಲಕ್ಷ ರೂ. ಹಾಗೂ ಮೂರನೇ ಬಹುಮಾನದ ರೂಪದಲ್ಲಿ 2 ಲಕ್ಷ ರೂ. ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ಟ್ಯಾಗ್ ಲೈನ್ ಹಾಗೂ ಲೋಗೋ ಸೂಚಿಸುವವರಿಗೂ ಕೂಡ ಮೊದಲ ಮೂರು ಸ್ಥಾನ ಪಡೆದವರಿಗೆ ತಲಾ 5, 3 ಹಾಗೂ 2 ಲಕ್ಷ ರೂ.ಗಳ ಬಹುಮಾನ್ನು ನೀಡಲಾಗುತ್ತಿದೆ.


ಇದನ್ನೂ ಓದಿ-Uttar Pradesh: ಬರಾಬಂಕಿಯಲ್ಲಿ ಭೀಕರ ರಸ್ತೆ ಅಪಘಾತ, 18 ಜನರು ಧಾರುಣ ಸಾವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ