Budget 2021 : ಸೂಪರ್ ಸುದ್ದಿ ..! ಚಿನ್ನ ಇನ್ನು ಅಗ್ಗವಾಗಲಿದೆ, ಮಾರ್ಕೆಟ್ ರೇಟ್ ಕೂಡಾ ಇಳಿದಿದೆ

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ (Budget 2021) ಭಾಷಣ ಮುಗಿಸುತ್ತಿದ್ದಂತೆ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಕುಸಿತ ದಾಖಲಾಗಿದೆ.   10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1500 ರೂ ಇಳಿಮುಖವಾಗಿದೆ  

Written by - Ranjitha R K | Last Updated : Feb 1, 2021, 04:57 PM IST
  • ಆಭರಣ ಪ್ರಿಯರಿಗೊಂದು ಸೂಪರ್ ಸುದ್ದಿ
  • ಚಿನ್ನ ಬೆಳ್ಳಿ ದರದಲ್ಲಿ ಭಾರೀ ಕುಸಿತ ದಾಖಲು
  • 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1500 ರೂ ಇಳಿಮುಖ
Budget 2021 : ಸೂಪರ್ ಸುದ್ದಿ ..! ಚಿನ್ನ ಇನ್ನು ಅಗ್ಗವಾಗಲಿದೆ, ಮಾರ್ಕೆಟ್ ರೇಟ್ ಕೂಡಾ ಇಳಿದಿದೆ title=
ಚಿನ್ನ ಬೆಳ್ಳಿ ದರದಲ್ಲಿ ಭಾರೀ ಕುಸಿತ (file photo)

ದೆಹಲಿ: ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ.. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ (Budget 2021) ಭಾಷಣ ಮುಗಿಸುತ್ತಿದ್ದಂತೆ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಕುಸಿತ ದಾಖಲಾಗಿದೆ.   10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1500 ರೂ ಇಳಿಮುಖವಾಗಿದೆ. ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ ಮೇಲಿನ ಬಜೆಟ್ ಭಾಷಣ ಮುಗಿಯುತ್ತಿದ್ದಂತೆ, ಚಿನ್ನ ಬೆಳ್ಳಿ ದರದಲ್ಲೂ ಕುಸಿತ ದಾಖಲಾಗಿದೆ. 

ಶೇ 5 ರಷ್ಟು ಕಸ್ಟಮ್ ಸುಂಕ ಕಡಿತ : 
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರ ತರ್ಕಬದ್ಧಗೊಳಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದರು. ಕಸ್ಟಮ್ ಸುಂಕದಲ್ಲಿ ಶೇ 5 ರಷ್ಟು ಕಡಿತವನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್  ಘೋಷಿಸಿದ್ದಾರೆ. ಇದರೊಂದಿಗೆ ಶೇ .2.5 ರಷ್ಟು ಕೃಷಿ ಸೆಸ್ ಅನ್ನು ಚಿನ್ನ ಮತ್ತು ಬೆಳ್ಳಿಯ ಮೇಲೆ  ವಿಧಿಸಲಾಗಿದೆ. 2019 ರ ಜುಲೈನಲ್ಲಿ ಸರ್ಕಾರವು ಚಿನ್ನದ ಮೇಲಿನ ಸೆಸನ್ನು ಶೇಕಡಾ 7.5 ರಿಂದ 2.5 ಕ್ಕೆಹೆಚ್ಚಿಸಿತ್ತು. ಇದಾದ ಮೇಲೆ ಚಿನ್ನ ಮತ್ತು ಬೆಳ್ಳಿಯ ಬೆಲೆ (Gold Rate) ಗಣನೀಯವಾಗಿ ಏರಿಕೆಯಾಗಿತ್ತು.

ಇದನ್ನೂ ಓದಿ : Budget 2021: Home Loan ಪಡೆಯಬೇಕೆನ್ನುವವರಿಗೆ ಇಲ್ಲಿದೆ ಸಂತಸದ ಸುದ್ದಿ

ಪ್ರಸ್ತುತ ಚಿನ್ನದ ಮೇಲಿದೆ 15 ಪ್ರತಿಶತಕ್ಕಿಂತ ಹೆಚ್ಚಿನ ತೆರಿಗೆ : 
ಬಜೆಟ್ (Budget) ಮಂಡನೆಯಾಗುತ್ತಿದ್ದಂತೆ ಇದೀಗ ಚಿನ್ನ ಮತ್ತು ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿಯಲು ಆರಂಭಿಸಿದೆ. ಇದಕ್ಕೂ ಮೊದಲು ಚಿನ್ನದ ಮೇಲಿನ ಕಸ್ಟಮ್ ಸುಂಕವು (Custom tax) ಬಹಳ ಹೆಚ್ಚಾಗಿತ್ತು. ಪ್ರಸ್ತುತ ಚಿನ್ನದ ಮೇಲಿನ ಕಸ್ಟಮ್ ಸುಂಕ ಶೇಕಡಾ 12.5 ರಷ್ಟಿದೆ. ಇದಲ್ಲದೆ, 3% ಜಿಎಸ್ಟಿಯನ್ನು  (GST)ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆ ತುಂಬಾ ಹೆಚ್ಚಾಗಿದೆ.

ಇದನ್ನೂ ಓದಿ : Budget 2021 : ನಿಮ್ಮ ಕಾರಿಗೆ ಎಷ್ಟು ವರ್ಷ ಆಯ್ತು? ಹಳೆಯ ಕಾರು ಇನ್ನು ರಸ್ತೆ ಮೇಲೆ ಓಡಲ್ಲ ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News