Vaccination To Pregnant Women - ಇನ್ಮುಂದೆ ದೇಶದ ಗರ್ಭವತಿ ಮಹಿಳೆಯರಿಗೂ ಕೂಡ ಕೊರೊನಾದಿಂದ (Coronavirus) ರಕ್ಷಣೆ ನೀಡಲು ಲಸಿಕೆಯನ್ನು ಹಾಕಲಾಗುವುದು. ಕೇಂದ್ರ ಆರೋಗ್ಯ ಸಚಿವಾಲಯ ಗರ್ಭವತಿ ಮಹಿಳೆಯರಿಗೂ (Pregnant Ladies) ಕೂಡ ಲಸಿಕೆ ಹಾಕಲು ಅನುಮತಿ ನೀಡಿದೆ. ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ(Union Health Ministry), ಇನ್ಮುಂದೆ ಗರ್ಭವತಿ ಮಹಿಳೆಯರೂ ಕೂಡ ಕೊವಿನ್ ಪ್ಲಾಟ್ಫಾರ್ಮ್ ನಲ್ಲಿ ತಮ್ಮ ಹೆಸರು ನೊಂದಾಯಿಸುವ ಮೂಲಕ ಅಥವಾ ನೇರವಾಗಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ನೀತಿ ಆಯೋಗದ (Niti Aayog) ಶಿಫಾರಸ್ಸಿನ ಪ್ರಕಾರ ಗರ್ಭವತಿ ಮಹಿಳೆಯರಿಗೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ಇತ್ತೀಚೆಗಷ್ಟೇ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ (Luv Agarwal) ಹೇಳಿದ್ದರು. ಏತನ್ಮಧ್ಯೆ ಶುಕ್ರವಾರದವರೆಗೆ ದೇಶದಲ್ಲಿ 34 ಕೋಟಿಗೂ ಅಧಿಕ ಜನರಿಗೆ ಲಸಿಕೆಯ ಪ್ರಮಾಣವನ್ನು ನೀಡಲಾಗಿದೆ. 


ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ (Health Ministry) ದೇಶದಲ್ಲಿ ಸುಮಾರು 34 ಕೋಟಿಗೂ ಅಧಿಕ ಜನರಿಗೆ ಕೊವಿಡ್-19 ಲಸಿಕೆಯ ಪ್ರಮಾಣ ನೀಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ರಿಂದ ಮೇಲ್ಪಟ್ಟ ಸುಮಾರು 9,41,03,985 ನಾಗರಿಕರಿಗೆ ಲಸಿಕೆಯ ಮೊದಲ ಪ್ರಮಾಣ ನೀಡಲಾಗಿದ್ದರೆ, 22,73,477 ನಾಗರಿಕರಿಗೆ ಲಸಿಕೆಯ ಎರಡು ಪ್ರಮಾಣಗಳನ್ನೂ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ-WhatsAppನಲ್ಲಿ ಬರುತ್ತಿರುವ ಈ ವಿಡಿಯೋ ಮೂಲಕ ನೀವು ಹೈ ಕ್ವಾಲಿಟಿ ವಿಡಿಯೋ ಕಳುಹಿಸಬಹುದು


ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ದೊರೆತ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 34,00,76,232 ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ. ವ್ಯಾಕ್ಸಿನೆಶನ್ ಅಭಿಯಾನದ (Vaccination Campaign) 167 ದಿನ (ಜುಲೈ1 ರಂದು) 42,64,123 ಪ್ರಮಾಣಗಳನ್ನು ನೀಡಲಾಗಿದ್ದು, ಇದರಲ್ಲಿ 32,80,998 ಜನರು ಲಸಿಕೆಯ ಮೊದಲ ಪ್ರಮಾಣ ಪಡೆದುಕೊಂಡಿದ್ದಾರೆ ಮತ್ತು 9,83,125 ಜನರು ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.


ಇದನ್ನೂ ಓದಿ-ಮೊಬೈಲ್, ಬ್ರಾಡ್ಬ್ಯಾಂಡ್ ಹಾಗೂ DTH ಸೇವೆಗಳಿಗೆ ಒಂದೇ ಯೋಜನೆ, Airtelನಿಂದ ಮಹತ್ವದ ಘೋಷಣೆ


"ಗುರುವಾರ, 18-44 ವಯಸ್ಸಿನ ಸುಮಾರು 24,51,539 ಜನರು ಲಸಿಕೆಯ (Covid-19 Vaccine)ಮೊದಲ ಪ್ರಮಾಣವನ್ನು ಪಡೆದಿದ್ದಾರೆ ಮತ್ತು 89,027 ಜನರು ಎರಡನೇ ಪ್ರಮಾಣವನ್ನು ಪಡೆದಿದ್ದಾರೆ ಎಂದು ಸಚಿವಾಲಯ ಹೇಳಿದೆ. "ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಬಿಹಾರ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದ 8 ರಾಜ್ಯಗಳಲ್ಲಿ 18-44 ವಯಸ್ಸಿನವರಿಗೆ 50 ಲಕ್ಷಕ್ಕೂ ಹೆಚ್ಚು ಲಸಿಕೆಯ (Corona Vaccine) ಪ್ರಮಾಣವನ್ನು ನೀಡಲಾಗಿದೆ" ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.


ಇದನ್ನೂ ಓದಿ-ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.