7th Pay Commission: ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?

7th Pay Commission Latest News: ಮೂಲಗಳ ಮಾಹಿತಿ ಪ್ರಕಾರ ಜೂನ್ 2021ರಲ್ಲಿಯೂ ಕೂಡ ಶೇ.3 ರಷ್ಟು DA ಏರಿಕೆಯಾಗಲಿದೆ. ಹೀಗಿರುವಾಗ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏಕಕಾಲಕ್ಕೆ ಶೇ.14 ರಷ್ಟು ಏರಿಕೆಯಾಗಲಿದೆ.

Written by - Nitin Tabib | Last Updated : Jul 2, 2021, 01:41 PM IST
  • ಕೇಂದ್ರ ಸರ್ಕಾರಿ ನೌಕರರಿಗೊಂದು ಒಳ್ಳೆಯ ಸುದ್ದಿ ಪ್ರಕಟಗೊಂಡಿದೆ.
  • ಸೆಪ್ಟೆಂಬರ್ 30 ರಂದು ಸಿಗುವ ಸಂಬಳದ ಜೊತೆಗೆ ನೌಕರರಿಗೆ ನಿಂತು ಹೋಗಿರುವ ತುಟ್ಟಿಭತ್ಯೆಯ ಮೂರು ಕಂತುಗಳು ಕೂಡ ಸಿಗಲಿವೆ.
  • ಇದಲ್ಲದೆ ಜೂನ್ 2021 ರಂದು ಬರಬೇಕಿರುವ ನಾಲ್ಕನೇ ತುಟ್ಟಿಭತ್ಯೆ, ಜುಲೈ-ಆಗಸ್ಟ್ ಅರಿಯರ್ ನೊಂದಿಗೆ ಸಿಗಲಿದೆ.
7th Pay Commission: ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ? title=
7th Pay Commission Calculation (File Photo)

7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೊಂದು ಒಳ್ಳೆಯ ಸುದ್ದಿ ಪ್ರಕಟಗೊಂಡಿದೆ. ಸೆಪ್ಟೆಂಬರ್ 30 ರಂದು ಸಿಗುವ ಸಂಬಳದ ಜೊತೆಗೆ ನೌಕರರಿಗೆ ನಿಂತು ಹೋಗಿರುವ ತುಟ್ಟಿಭತ್ಯೆಯ ಮೂರು ಕಂತುಗಳು ಕೂಡ ಸಿಗಲಿವೆ. ಇದಲ್ಲದೆ ಜೂನ್ 2021 ರಂದು ಬರಬೇಕಿರುವ ನಾಲ್ಕನೇ ತುಟ್ಟಿಭತ್ಯೆ, ಜುಲೈ-ಆಗಸ್ಟ್  ಅರಿಯರ್ ನೊಂದಿಗೆ ಸಿಗಲಿದೆ. ಜೂನ್ 2021 ತುಟ್ಟಿ ಭತ್ಯೆಯ ಘೋಷಣೆ ಜುಲೈ ತಿಂಗಳಿನಲ್ಲಿ ಮಾಡಲಾಗುವುದು. ಕ್ಯಾಬಿನೆಟ್ ಸಚಿವರ ಜೊತೆಗೆ ನಡೆದ ನ್ಯಾಷನಲ್ ಕೌನ್ಸಿಲ್ ಆಫ್ JCM ನಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು ಜೂನ್ 2021ರಲ್ಲಿಯೂ ಕೂಡ ಶೇ.3 ರಷ್ಟು ಏರಿಕೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇದರರ್ಥ ಕಳೆದ ಮೂರು ಕಂತುಗಳನ್ನು ಸೇರಿಸಿ ಏಕಕಾಲಕ್ಕೆ ಒಟ್ಟು ಶೇ.14ರಷ್ಟು ಏರಿಕೆಯಾಗಲಿದೆ. 

DA ಮೇಲಿನ ತಡೆ ತೆಗೆದುಹಾಕಲಾಗಿದೆ. 
ಕಳೆದ ವರ್ಷ ಕೊರೊನಾ ಪ್ರಕೋಪದ ಕಾರಣ DA ಮೇಲೆ ನೀಡಲಾಗಿದ್ದ ತಡೆಯನ್ನು ಜುಲೈ 1, 2021ರಿಂದ ತೆರವುಗೊಳಿಸಲಾಗುತ್ತಿದೆ. 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 60 ಲಕ್ಷ ಪಿಂಚಣಿದಾರರ ತುಟ್ಟಿಭತ್ಯೆ ಹಾಗೂ ಡಿಯರ್ನೆಸ್ ರಿಲೀಫ್ (Dearness Relief) ಅನ್ನು ಮತ್ತೆ ಆರಂಭಿಸಲಾಗುತ್ತಿದೆ. 

ಒಟ್ಟು ತುಟ್ಟಿಭತ್ಯೆ ಎಷ್ಟಾಗಲಿದೆ?
ನ್ಯಾಷನಲ್ ಕೌನ್ಸಿಲ್ ಆಫ್ JCM (National Counsil Of JCM) ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ (Shiv Gopal Mishra) ಅವರು ನೀಡಿರುವ ಮಾಹಿತಿಯ ಪ್ರಕಾರ. 7 ನೇ ವೇತನ ಆಯೋಗದ ಅಡಿ ಸಿಗುವ ತುಟ್ಟಿಭತ್ಯೆ ಶೇ.17 ರಷ್ಟಿದೆ. ನಿಂತುಹೋಗಿರುವ ಮೂರು ಕಂತುಗಳನ್ನು ಇದಕ್ಕೆ ಸೇರಿಸಿದರೆ ಸರ್ಕಾರಿ ನೌಕರರ ಒಟ್ಟು ತುಟ್ಟಿಭತ್ಯೆ ಶೇ.28 ರಷ್ಟಾಗಲಿದೆ. ಇದಕ್ಕೆ ಜೂನ್ 2021ರ ಶೇ.3 ರಷ್ಟು DA (Dearness Allowance) ಏರಿಕೆಯನ್ನು ಸೇರಿಸಿದರೆ , ಅದು ಶೇ.31 ರಷ್ಟಾಗಲಿದೆ. ಅಂದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಅವರ ಮೂಲ ವೇತನದ ಶೇ.31 ರಷ್ಟಾಗುವುದು.

ವೇತನದ ಲೆಕ್ಕಾಚಾರ ಹೇಗಿರಲಿದೆ?
7 ನೇ ವೇತನ ಆಯೋಗದ (7th Pay Commission) ಅಡಿ ನೌಕರರ ಬೇಸಿಕ್ ಸ್ಯಾಲರಿ ಮೇಲೆ DA ಲೆಕ್ಕಾಚಾರ ನಡೆಯಲಿದೆ.  ಉದಾಹರಣೆಗೆ ಓರ್ವ ನೌಕರನ ಮೂಲ ಮಾಸಿಕ ವೇತನ ರೂ.25,000 ಇದೆ ಎಂದು ಭಾವಿಸಿ. ಹೀಗಿರುವಾಗ ಆತನ ತುಟ್ಟಿಭತ್ಯೆ 25,000 ರೂ.ಗಳ ಶೇ.31ರಷ್ಟು ಹೆಚ್ಚಾಗಲಿದೆ. ಅಂದರೆ, ಆ ನೌಕರನ ವೇತನ ರೂ.7750 ಪ್ರತಿ ತಿಂಗಳು ಹೆಚ್ಚಾದಂತಾಗಲಿದೆ.ಇದೆ ರೀತಿ ಉಳಿದ ಕೇಂದ್ರ ಸರ್ಕಾರಿ ನೌಕರರ ವೇತನ ಕೂಡ 7th CPC Pay Matrix ಅನ್ವಯ ವೇತನ ಹೆಚ್ಚಾಗಲಿದೆ. ಅವರವರ ಬೇಸಿಕ್ ಪೇ ಆಧಾರದ ಮೇಲೆ ವೇತನ ಹೆಚ್ಚಾಗಲಿದೆ.

ಇದನ್ನೂ ಓದಿ- LICಯಿಂದ ಹೊಸ ಪಿಂಚಣಿ ಯೋಜನೆ : ಒಮ್ಮೆ ಮಾತ್ರ ಹಣ ಠೇವಣಿ, ವೃದ್ದಾಪ್ಯದಲ್ಲಿ ಪಿಂಚಣಿ!

ಲೆಕ್ಕಾಚಾರ
>> Level 1 Basic Pay =18,000 ರೂ. / ತಿಂಗಳು
>> 31% DA Increase   =05,580 ರೂ. / ತಿಂಗಳು
>> Level 2 Basic Pay =25,000 ರೂ. / ತಿಂಗಳು
>> 31% DA Increase   =07,750 ರೂ. / ತಿಂಗಳು

ಇದನ್ನೂ ಓದಿ- LPG ಗ್ಯಾಸ್ ಬಳಕೆದಾರರಿಗೆ ಬಿಗ್ ಶಾಕ್ :  ₹25.50 LPG ಸಿಲಿಂಡರ್ ಬೆಲೆ ಹೆಚ್ಚಳ!

ಪ್ರಸ್ತುತ ಸರ್ಕಾರಿ ನೌಕರರಿಗೆ ಅವರ ಬೇಸಿಕ್ ವೇತನದ ಶೇ.17 ರಷ್ಟು DA ಸಿಗುತ್ತಿದೆ. ಅಂದರೆ, 18,000 ಬೇಸಿಕ್ ವೇತನ ಹೊಂದಿದವರಿಗೆ ರೂ.3060 ತುಟ್ಟಿಭತ್ಯೆ ಸಿಗುತ್ತಿದೆ. ಇನ್ನೊಂದೆಡೆ ರೂ.25,000 ಬೇಸಿಕ್ ವೇತನ ಇರುವವರಿಗೆ ರೂ. 4250 ಸಿಗುತ್ತಿದೆ. ಒಟ್ಟಾರೆ ಹೇಳುವುದಾದರೆ, ಈ ಬರಿಯ ತುಟ್ಟಿಭತ್ಯೆ ಏರಿಕೆಯಿಂದ ನೌಕರರಿಗೆ ಭಾರಿ ಲಾಭವಾಗಲಿದೆ ಎಂಬುದು ಮಾತ್ರ ನಿಜ.

ಇದನ್ನೂ ಓದಿ- Bank ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಹರಿದ ನೋಟು ಸಿಕ್ಕರೆ ಅದನ್ನು ಈ ರೀತಿ ಬದಲಾಯಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News