ನವದೆಹಲಿ: ಗೂಗಲ್ ಭಾರತ ವಿರೋಧಿ ಮೊಬೈಲ್ ಆ್ಯಪ್ '2020 ಸಿಖ್ ಜನಾಭಿಪ್ರಾಯ ಸಂಗ್ರಹವನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಮೊಬೈಲ್ ಫೋನ್ ಬಳಕೆದಾರರಿಗಾಗಿ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್ನು ಮುಂದೆ ಲಭ್ಯವಿಲ್ಲ ಎಂದು ಪಂಜಾಬ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.


ವಿದೇಶದಲ್ಲಿ ನೆಲೆಸಿರುವ ಮತ್ತು ಭಾರತದಿಂದ ನಿಷೇಧಿಸಲ್ಪಟ್ಟ ಸಿಖ್ಸ್ ಫಾರ್ ಜಸ್ಟೀಸ್, 2020 ರ ಸಿಖ್ ಜನಾಭಿಪ್ರಾಯ ಅಭಿಯಾನದ ಮೂಲಕ ಪಂಜಾಬ್ ದೇಶದಿಂದ ಪ್ರತ್ಯೇಕವಾಗಲು ಲಾಬಿ ನಡೆಸುತ್ತಿದೆ. ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಈ ಅಭಿಯಾನದಲ್ಲಿ ಭಾಗಿಯಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದರು. 


ಈ ತಿಂಗಳ ಆರಂಭದಲ್ಲಿ, ಅವರು ಗೂಗಲ್ ಅನ್ನು ಸಂಪರ್ಕಿಸಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಹೊಸ ಅಪ್ಲಿಕೇಶನ್ ಅನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಸಹಕಾರವನ್ನು ಕೇಳಿದ್ದರು.


ಐಸಿಟೆಕ್ ರಚಿಸಿದ ಅಪ್ಲಿಕೇಷನ್ ತೆಗೆದು ಹಾಕುವಂತೆ ಕೋರಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (3) ಬಿ ಅಡಿಯಲ್ಲಿ ಪಂಜಾಬ್ ಸರ್ಕಾರ ಗೂಗಲ್ ಗೆ ನೋಟಿಸ್ ಕಳುಹಿತ್ತು ಎನ್ನಲಾಗಿದೆ.