Google Pay ಇನ್ಮುಂದೆ Tap To Pay ವೈಶಿಷ್ಟ್ಯವನ್ನು ಸಪೋರ್ಟ್ ಮಾಡಲಿದೆ... ಏನಿದು?
ಗೂಗಲ್ ಪೇ (Google Pay) ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳಲ್ಲಿ ಒಂದು. ಇದೀಗ ನೀವು ಈ ಡಿಜಿಟಲ್ ಪಾವತಿ ಅಪ್ಲಿಕೇಶನ್‌ನಲ್ಲಿ ಮತ್ತೊಂದು ಹೊಸ ವೈಶಿಷ್ಟ್ಯವನ್ನುಜೋಡಣೆಯಾಗಲಿದೆ.
ನವದೆಹಲಿ: ಗೂಗಲ್ ಪೇ (Google Pay) ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳಲ್ಲಿ ಒಂದು. ಇದೀಗ ನೀವು ಈ ಡಿಜಿಟಲ್ ಪಾವತಿ ಅಪ್ಲಿಕೇಶನ್‌ನಲ್ಲಿ ಮತ್ತೊಂದು ಹೊಸ ವೈಶಿಷ್ಟ್ಯವನ್ನುಜೋಡಣೆಯಾಗಲಿದೆ. ಭಾರತದಲ್ಲಿ ಗೂಗಲ್ ಪೇನ ಟ್ಯಾಪ್-ಟು-ಪೇ ವೈಶಿಷ್ಟ್ಯವು ಇದೀಗ ಆಕ್ಸಿಸ್ ಬ್ಯಾಂಕ್ (Axis Bank) ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗಳು ಜಾರಿಗೊಳಿಸುವ ವಿಸಾ ಕಾರ್ಡ್ ಗಳನ್ನು ಸಪೋರ್ಟ್ ಮಾಡಲಿದೆ ಎಂದು ಗೂಗಲ್ ಹೇಳಿದೆ.
ಇದನ್ನು ಓದಿ- Google Pay ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಕಾಂಟಾಕ್ಟ್ ಲೆಸ್ ಹಣ ಪಾವತಿ
ಈ ವೈಶಿಷ್ಟ್ಯದ ಬಳಕೆ NFC Enabled POSಗೆ ಸಂಬಂಧಿಸಿದ ಕಾಂಟಾಕ್ಟ್ ಲೆಸ್ ಹಣ ಪಾವತಿಗಾಗಿ ಮಾಡಬಹುದು. ಈ ವೈಶಿಷ್ಟ್ಯದ ವಿಶೇಷತೆಯೆಂದರೆ ಕಾರ್ಡ್‌ನ ವಿವರಗಳನ್ನು ಹಂಚಿಕೊಳ್ಳದೆ ನೀವು ಡಿಜಿಟಲ್ ಟೋಕನ್ ಮೂಲಕ ಪಾವತಿ ಮಾಡಬಹುದು. ಕಂಪನಿಯ ಪ್ರಕಾರ, ಈ ಹೊಸ ವೈಶಿಷ್ಟ್ಯವು ಗೂಗಲ್ ಪೇ ಬಳಕೆದಾರರಿಗೆ 2.5 ಮಿಲಿಯನ್ ವೀಸಾ ವ್ಯಾಪಾರಿಗಳಿಂದ ಮತ್ತು 1.5 ದಶಲಕ್ಷಕ್ಕೂ ಹೆಚ್ಚಿನ ಭಾರತ್ ಕ್ಯೂಆರ್ ಹೊಂದಿರುವ ವ್ಯಾಪಾರಿಗಳಿಂದ ಸಂಪರ್ಕವಿಲ್ಲದ ಪಾವತಿಗಳನ್ನು ಮಾಡಲು ಅನುಮತಿ ನೀಡುತ್ತದೆ.
ಇದನ್ನು ಓದಿ- 2 ವರ್ಷಗಳವರೆಗೆ ಎಲ್ಲಾ ರೀತಿಯ ಲೋನ್ ಮರುಪಾವತಿಸಲು ಸಿಗಲಿದೆ ನೆಮ್ಮದಿ, SBI ತಂದಿದೆ ಈ ಸ್ಕೀಮ್
ಆದರೆ ಈ ವೈಶಿಷ್ಟ್ಯ ಇದುವರೆಗೆ ಕೇವಲ ಆಕ್ಸಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ವಿಸಾ ಕಾರ್ಡ್ ಹೊಂದಿರುವ ಬಳಕೆದಾರರಿಗೆ ಲಭ್ಯವಿದೆ. ಶೀಘ್ರದಲ್ಲಿಯೇ ಈ ವೈಶಿಷ್ಟ್ಯವನ್ನು ಇತರೆ ಬ್ಯಾಂಕ್ ಗಳಿಗೂ ಕೂಡ ವಿಸ್ತರಿಸಲಾಗುವುದು ಎಂದು ಗೂಗಲ್ ಹೇಳಿದೆ.
"ನಮ್ಮ ಗ್ರಾಹಕರಿಗೆ ಸುರಕ್ಷಿತ ಪಾವತಿ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ ಮತ್ತು ಟೋಕನ್‌ಗಳ ಬಳಕೆಯು ವಂಚನೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ" ಎಂದು ಗೂಗಲ್ ಪೇ ಮತ್ತು ಎನ್‌ಬಿಯು ಇಂಡಿಯಾದ ಉದ್ಯಮ ಮುಖ್ಯಸ್ಥ ಸಜಿತ್ ಶಿವಾನಂದನ್ ಹೇಳಿದ್ದಾರೆ. ಟೋಕನ್ ಸೌಲಭ್ಯವು ಪ್ರಸ್ತುತ ಸಮಯದಲ್ಲಿ ಸುರಕ್ಷಿತವಾಗಿ ವಹಿವಾಟು ನಡೆಸಲು ಗ್ರಾಹಕರನ್ನು ಉತ್ತೇಜಿಸುತ್ತದೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವ್ಯಾಪಾರಿ ವಹಿವಾಟುಗಳನ್ನು ವಿಸ್ತರಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಹಣ ಪಾವತಿಯ ಮೇಲೆ ಜಬರ್ದಸ್ತ್ ಆಫರ್ ನೀಡಿದ Google Pay
ಈ ರೀತಿ ಬಳಕೆ ಮಾಡಿ
ಈ ವೈಶಿಷ್ಟ್ಯವನ್ನು ಬಳಸಲು ಎಲ್ಲಕ್ಕಿಂತ ಮೊದಲು ಗೂಗಲ್ ಪೆನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ನೀಡಿ. ಇದಾದ ಬಳಿಕ ಸೆಟ್ಟಿಂಗ್ಸ್ ನಲ್ಲಿ ಪೇಮೆಂಟ್ ಮೆಥಡ್ ಗೆ ಭೇಟಿ ನೀಡಿ ಕಾರ್ಡ್ ಅನ್ನು ಆಡ್ ಮಾಡಬೇಕು. ನಂತರ OTP ನಮೂದಿಸಿ. ಇದಾದ ಬಳಿಕ ನೀವು ಕಾರ್ಡ್ ಆಕ್ಟಿವೇಟ್ ಮಾಡಿ. ಈಗ ನೀವು NFC ಸಪೋರ್ಟ್ ಟರ್ಮಿನಲ್ ಗಳ ಮೇಲೆ ಹಣ ಪಾವತಿ ನಿಮಗಾಗಿ ಸುಲಭವಾಗಲಿದೆ.